ಬೆಳಗಾವಿ ಜಿಲ್ಲೆ ವಿಭಜಿಸಿದರೆ ಪ್ರಥಮವಾಗಿ ಬೈಲಹೊಂಗಲ ಜಿಲ್ಲೆ ಮಾಡಲು ಸಿಎಮ್ ಗೆ ಮನವಿ

Ravi Talawar
ಬೆಳಗಾವಿ ಜಿಲ್ಲೆ ವಿಭಜಿಸಿದರೆ ಪ್ರಥಮವಾಗಿ ಬೈಲಹೊಂಗಲ ಜಿಲ್ಲೆ ಮಾಡಲು ಸಿಎಮ್ ಗೆ ಮನವಿ
WhatsApp Group Join Now
Telegram Group Join Now
ಬೆಳಗಾವಿ. ಜಿಲ್ಲೆಯನ್ನು ವಿಭಜಿಸಿ ಹೊಸ ಜಿಲ್ಲೆ ರಚನೆ ಮಾಡುವದಾದರೆ ಬೈಲಹೊಂಗಲ ಉಪವಿಭಾಗವನ್ನು ಜಿಲ್ಲೆಯನ್ನಾಗಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬೈಲಹೊಂಗಲ ಜಿಲ್ಲಾ ಹೊರಾಟ ಸಮಿತಿ ಅಧ್ಯಕ್ಷ ಶಿವರಂಜನ ಬೋಳಣ್ಣವರ, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಮಹಾಂತೇಶ ತುರಮರಿ, ರಾಜು ಜನ್ಮಟ್ಟಿ,  ಎಫ್.ಎಸ್.ಸಿದ್ದನಗೌಡರ, ಸಿ.ಕೆ.ಮೆಕ್ಕೆದ, ಮಡಿವಾಳಪ್ಪ ಹೋಟಿ, ಗುರು ಮೆಟಗುಡ್, ಮಹಾಂತೇಶ ಮತ್ತಿಕೊಪ್ಪ, ಮಹೇಶ ಬೆಲ್ಲದ, ವಿ.ಎಸ್. ಕೋರಿಮಠ, ಬಿ.ಬಿ.ಗಣಾಚಾರಿ,  ವಿಠಲ ದಾಸೋಗ, ಸುಭಾಷ ತುರಮರಿ ಸೇರಿದಂತೆ ಪದಾಧಿಕಾರಿಗಳು ಪಕ್ಷಾತೀತವಾಗಿ ಬೆಟಿ ಮಾಡಿ ಬೈಲಹೊಂಗಲ ಜಿಲ್ಲೆ ಮಾಡುವ ಸಕಾರಣಗಳ ಸಮೇತ ಸಮಗ್ರವಾಗಿ ತಯಾರಿಸಿದ ವರದಿಯನ್ನು ಮನವಿ ರೂಪದಲ್ಲಿ ನೀಡಲಾಯಿತು. ಈ ಬಗ್ಗೆ ಮುಖ್ಯಮಂತ್ರಿಗಳು ಸಕಾರತ್ಮಕ್ಕವಾಗಿ ಸ್ಪಂದಿಸಿದ್ದಾರೆ.
WhatsApp Group Join Now
Telegram Group Join Now
Share This Article