ಗಣರಾಜ್ಯೋತ್ಸವ –ನಮ್ಮ  ಹೆಮ್ಮೆ, ನಮ್ಮ  ಹೊಣೆ: ಚಂದ್ರಶೇಖರ್ ಗೌಡ್

Sandeep Malannavar
ಗಣರಾಜ್ಯೋತ್ಸವ –ನಮ್ಮ  ಹೆಮ್ಮೆ, ನಮ್ಮ  ಹೊಣೆ: ಚಂದ್ರಶೇಖರ್ ಗೌಡ್
WhatsApp Group Join Now
Telegram Group Join Now
ಬಳ್ಳಾರಿ: 27..ಭಾರತದ ಸಂವಿಧಾನವು ದೇಶದ ಶಕ್ತಿ ಮತ್ತು ಏಕತೆಯ ಪ್ರತೀಕವಾಗಿದ್ದು, ಪ್ರತಿಯೊಬ್ಬ  ನಾಗರೀಕನು ಸಂವಿಧಾನದ ಮೌಲ್ಯಗಳನ್ನು  ಗೌರವಿಸುವ  ಜವಬ್ದಾರಿ ಹೊಂದಿರಬೇಕು.ವಿದ್ಯಾರ್ಥಿಗಳು ಶಿಸ್ತು, ದೇಶಭಕ್ತಿ ಹಾಗೂ ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಆಳವಡಿಸಿಕೊಂಡು ಉತ್ತಮ ನಾಗರೀಕರಾಗಿ ಬೆಳೆಯಬೇಕು ಎಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಚಂದ್ರಶೇಖರ್ ಗೌಡ್ ಹೇಳಿದ್ದಾರೆ.
ದೇಶದ 77 ನೇ ಗಣರಾಜ್ಯೋತ್ಸವವನ್ನು ಶ್ರೀ ವಾಸವಿ ವಿದ್ಯಾಲಯದಲ್ಲಿ ಅತ್ಯಂತ ಭಕ್ತಿ, ಗೌರವ ಹಾಗೂ ರಾಷ್ಟ್ರ ಪ್ರೇಮದ ಭಾವನೆಯೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಶಾಲಾ ಆವರಣದಲ್ಲಿ ತ್ರಿವರ್ಣ ಧ್ವಜವನ್ನು ಗೌರವಪೂರ್ಕವಾಗಿ ಹಾರಿಸಿ ರಾಷ್ಟ್ರ ಗೀತೆಯನ್ನು ಸಮೂಹವಾಗಿ ಹಾಡಲಾಯಿತು.
ಭಾರತ ಸಂವಿಧಾನದ ಮಹತ್ವ, ಗಣರಾಜ್ಯೋತ್ಸವದ ಐತಿಹಾಸಿಕ ಹಿನ್ನಲೆ ಹಾಗೂ ದೇಶದ ಏಕತೆ- ಅಖಂಡತೆಯನ್ನು ಕಾಪಾಡುವಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ಪ್ರೇರಣಾದಾಯಕ ಸಂದೇಶವನ್ನು ಶ್ರೀ ವಾಸವಿ ಏಜ್ಯುಕೇಷನ್ ಟ್ರಸ್ಟ್ ನ ಅಧ್ಯಕ್ಷರಾದ  ವಿಠ್ಠ ಕೃಷ್ಣ ಕುಮಾರ್ ರವರು ನೀಡಿದರು.
ವಿದ್ಯಾರ್ಥಿಗಳ ಭಾಷಣಗಳು ಸಂವಿಧಾನ ಪ್ರಜ್ಞೆ,ದೇಶಭಕ್ತಿ ಮತ್ತು ಜವಬ್ದಾರಿಯುತ ನಾಗರೀಕತ್ವದ ಸಂದೇಶವನ್ನು ಸಾರಿದವು. ಕಾರ್ಯಕ್ರಮದ ಅಂಗವಾಗಿ  ವಿದ್ಯಾರ್ಥಿಗಳು ದೇಶಭಕ್ತಿ , ಭಾಷಣ, ನೃತ್ಯ ಹಾಗೂ ನಾಟಕ ಪ್ರದರ್ಶನಗಳ ಮೂಲಕ ಸ್ವಾತ್ರಂತ್ರ್ಯ  ಹೋರಾಟಗಾರರ ತ್ಯಾಗ,ಭಾರತದ ವೈವಿಧ್ಯತೆ ಮತ್ತು ಗಣರಾಜ್ಯೋತ್ಸವದ ಮಹತ್ವವನ್ನು ಮನ ಮುಟ್ಟುವ ರೀತಿಯಲ್ಲಿ ಪ್ರದರ್ಶಿಸಿದರು.ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಕ್ಲಸ್ಟರ್ ,ಮಟ್ಟ ಹಾಗೂ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ  ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.ಮತ್ತು ಆಂಧ್ರಕಲಾ ಸಮಿತಿ ಆಯೋಜಿಸಿದ್ದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ದ್ವೀತಿಯ ಸ್ಥಾನ ಪಡೆದ ಕು.ಹರಿಣಿಗೆ ವಿಶೇಷವಾಗಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ವಿದ್ಯಾರ್ಥಿಗಳು ಶಿಸ್ತಿನೊಂದಿಗೆ ಪಥ ಸಂಚಲನ ನಡೆಸಿದರು. ಕಿಂಡರ್ ಗಾರ್ಟನ್ ಮಕ್ಕಳು ಹೂವು, ಹಣ್ಣು ಮತ್ತು ತರಕಾರಿಗಳ ವೇಷಭೂಷಣ ಧರಿಸಿ ಎಲ್ಲರ ಗಮನ ಸೆಳೆದರು.ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಸೈನಿಕರ ವೇಷಭೂಷಣದಲ್ಲಿ ಮಾರ್ಚ್ ಪಾಸ್ಟ್ ನಲ್ಲಿ ಪಾಲ್ಗೊಂಡು ದೇಶಭಕ್ತಿಯ ಭಾವನೆಯನ್ನು ಮನಮುಟ್ಟುವ ರೀತಿಯಲ್ಲಿ ಪ್ರದರ್ಶಿಸಿದರು. ವಿದ್ಯಾರ್ಥಿಗಳ ಶಿಸ್ತಿನ ನಡೆ ಮತ್ತು ವೇಷಭೂಷಣಗಳು ಕಾರ್ಯಕ್ರಮಕ್ಕೆ ವಿಶೇಷ ಮೆರಗು  ತಂದವು.
ಶ್ರೀ ವಾಸವಿ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಮುಖ್ಯ ಅತಿಥಿಗಳಾದ  ಚಂದ್ರಶೇಖರ ಗೌಡ್ ರವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರದಲ್ಲಿ  ಮಾಜಿ ಅಧ್ಯಕ್ಷರಾದ ಅಗಡಿ ಸಿದ್ದೇಶ್ವರ , ಉಪಾಧ್ಯಕ್ಷರಾದ  ಜಿತೇಂದ್ರ ಪ್ರಸಾದ್, ಕಾರ್ಯದರ್ಶಿಗಳಾದ ಪಿ.ಎನ್ ಸುರೇಶ್, ಮುದುಗಲ್ ಸುಭಾಷ್ , ವೆಂಕಟೇಶ್ ,  ನಿವೃತ್ತ  ಕನ್ನಡ ಶಿಕ್ಷಕಿ ಜಯಶೀಲಾ , ಮುಖ್ಯ ಗುರುಗಳಾದ ವೀರೇಶ್. ಯು , ಸಿಬ್ಬಂದ್ದಿ ವರ್ಗ, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಭಾರತೀಯ ಸಂವಿಧಾನದ ಶಿಲ್ಪಿ ಡಾ.ಬಿ.ಆರ್. ಆಂಬೇಡ್ಕರ್ ರವರ ಮಹತ್ವದ ಕೊಡುಗೆಯನ್ನು ಸ್ಮರಿಸಿ, ಸಂವಿಧಾನದ ಮೌಲ್ಯಗಳನ್ನು ಜೀವನದಲ್ಲಿ ಆಳವಡಿಸಿಕೊಳ್ಳಬೇಕೆಂಬ ಸಂದೇಶವನ್ನು ಕಾರ್ಯಕ್ರಮದಲ್ಲಿ ನೀಡಲಾಯಿತು. ಕಾರ್ಯಕ್ರಮವನ್ನು ಸಹ ಶಿಕ್ಷಕಿಯರಾದ ಜಬೀನಾ ಬೇಗಂ, ಎಚ್.ಎಂ. ಸುಜಾತ ಹಾಗೂ ಬಸವರಾಜೇಶ್ವರಿ ರವರು ಯಶಸ್ವಿಯಾಗಿ ನಿರ್ವಹಿಸಿದರು.
WhatsApp Group Join Now
Telegram Group Join Now
Share This Article