ವಿಜಯನಗರ(ಹೊಸಪೇಟೆ), : ಚಿಕ್ಕಜೋಗಿಹಳ್ಳಿಯಲ್ಲಿರುವ ಪಿಎಂ ಶ್ರೀಜವಾಹರ್ ನವೋದಯ ವಿದ್ಯಾಲಯದ 11ನೇ ತರಗತಿ ವಿಜ್ಞಾನ ವಿಭಾಗದಲ್ಲಿ ಖಾಲಿ ಇರುವ ಸೀಟುಗಳನ್ನು ಭರ್ತಿ ಮಾಡಲು ಅರ್ಹ ವಿದ್ಯಾರ್ಥಿಗಳ ಪ್ರವೇಶಾತಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪಿಎಂಶ್ರೀ ಜವಾಹರ್ ನವೋದಯ ವಿದ್ಯಾಲಯ ಪ್ರಾಚಾರ್ಯರಾದ ಸುದೇಶ ಗೊಪಾಲ ಮುಲಾಜುರೆ ಅವರು ತಿಳಿಸಿದ್ದಾರೆ.
ಪ್ರವೇಶಾತಿಗೆ ಸೆ.23 ರಂದು ಕೊನೆಯ ದಿನವಾಗಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಪ್ರವೇಶ ಪಡೆಯುವ ವಿದ್ಯಾರ್ಥಿಗಳು 10 ನೇ ತರಗತಿಯಲ್ಲಿ ಗಣಿತ ಮತ್ತು ವಿಜ್ಞಾನದಲ್ಲಿ ಶೇ.60 ರಷ್ಟು ಅಂಕಗಳೊAದಿಗ ಉತ್ತೀರ್ಣರಾಗಿರಬೇಕು.
ಸೆ.18 ರಂದು ಹೊಸಪೇಟೆ, ಕೂಡ್ಲಿಗಿ ಮತ್ತು ಸಂಡೂರು, ಸೆ.19 ರಂದು ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ ಮತ್ತು ಹರಪನಹಳ್ಳಿ, ಸೆ.20 ರಂದು ಬಳ್ಳಾರಿ ಪೂರ್ವ ಮತ್ತು ಬಳ್ಳಾರಿ ಪಶ್ಚಿಮ, ಸೆ.22 ರಂದು ಸಿರುಗುಪ್ಪ ಎಲ್ಲಾ ತಾಲೂಕಿನ ಶಿಕ್ಷಣಾಧಿಕಾರಿ ಕಚೇರಿಗಳಲ್ಲಿ ನೇರ ಪ್ರವೇಶಾತಿ ನಡೆಯಲ್ಲಿದ್ದು. ವಿದ್ಯಾರ್ಥಿಗಳು ಪ್ರವೇಶಾತಿ ಸಮಯದಲ್ಲಿ ಅಗತ್ಯವಿರುವ ಎಲ್ಲಾ ದಾಖಲಾತಿಗಳನ್ನು ನೀಡಬೇಕು. ಅಲ್ಲದೆ ಸೆ.23 ರವರೆಗೆ ಚಿಕ್ಕಜೋಗಿಹಳ್ಳಿಯಲ್ಲಿರುವ ಪಿಎಂಶ್ರೀ ಜವಾಹರ್ ನವೋದಯ ವಿದ್ಯಾಲಯದಲ್ಲಿ ನೇರ ಪ್ರವೇಶಾತಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.