ಮುನವಳ್ಳಿ: ಪಟ್ಟಣದ ಸೋಮಶೇಖರಮಠದಿಂದ ಮುರುಘೇಂದ್ರ ಶ್ರೀಗಳ ನೇತೃತ್ವದಲ್ಲಿ ಪ್ರತಿವರ್ಷದಂತೆ ಶ್ರಾವಣ ಮಾಸದ ಅಂಗವಾಗಿ ಪ್ರತಿದಿನ ಬೆಳಗ್ಗೆ ಧಾರ್ಮಿಕ ಪಥಸಂಚಲನ ಅ.೫ ರಿಂದ ಪ್ರಾರಂಭಗೊಳ್ಳುವದು ಪ್ರತಿದಿನ ಬೆಳಗ್ಗೆ ೫ ರಿಂದ ೬ ಗಂಟೆ ವರೆಗೆ ಪಟ್ಟಣದ ವಿವಿಧ ಓಣಿಗಳಲ್ಲಿ ಪಥಸಂಚಲನ ಜರುಗುವುದು. ಪ್ರತಿ ಶ್ರಾವಣ ಸೋಮವಾರ ಸಂಜೆ ೬.೩೦ ರಿಂದ ೮ ರವರೆಗೆ ಅಕ್ಕಮಹಾದೇವಿ ಕಲ್ಯಾಣ ಮಂಟಪ, ಕಾಲೇಜು ರಸ್ತೆಯಲ್ಲಿರುವ ಹನುಮಾನ ಮಂದಿರ ಹಾಗೂ ನಿರ್ಮಲ ನಗರದಲ್ಲಿರುವ ರಂಗ ಮಂದಿರದಲ್ಲಿ ಪೂಜ್ಯರಿಂದ ಶರಣ ಸಾಹಿತಿಗಳಿಂದ ಶ್ರಾವಣ ಶಿವಾನುಭವ ಕಾರ್ಯಕ್ರಮ ಜರಗುವುದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಳ್ಳಲು ಪ್ರಕಟಣೆಯಲ್ಲಿ ಶಿಕ್ಷಕ ಬಿ.ಬಿ ಹೂಲಿಗೊಪ್ಪ ತಿಳಿಸಿರುವರು.