ಚ. ಕಿತ್ತೂರು.ಪ್ರಾಥಮಿಕ ಶಿಕ್ಷಣ ವಲಯದಲ್ಲಿ ಜಿಲ್ಲೆಯಲ್ಲಿ 6,7 ನೇ ತರಗತಿ ಎಫ್ ಎಲ್ ಎನ್ ಮುಕ್ತ ತಾಲೂಕು ಮಾಡುವಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಚನ್ನಮ್ಮನ ಕಿತ್ತೂರು ಹಾಗೂ ಪ್ರಥಮ ಎಜ್ಯುಕೇಷನ ಪೌಂಡೇಷನ ಇವರ ಸಹಯೋಗಲ್ಲಿ 2025-26 ನೇ ಸಾಲಿನ ಕಿತ್ತೂರು ಕ್ಷೇತ್ರದ ಚಿತ್ತ, ಗುಣಮಟ್ಟದ ಶಿಕ್ಷಣದತ್ತ, ಮಕ್ಕಳ ಬುನಾದಿ ಭಾಷೆ ಉತ್ತಮ ಗಣಿತ ಕೌಶಲ್ಯಗಳ ಬಲವರ್ಧಣೆಗಾಗಿ ಯೋಜನೆ ಸುಧಾರಣೆ ಹೊತ್ತಿಗೆಯನ್ನು 201 ನೇ ಕಿತ್ತೂರು ಉತ್ಸವದ ಮುಖ್ಯ ವೇದಿಕೆಯಲ್ಲಿ ಸಾಹಿತಿ ಹಾಗೂ ಶಾಸಕರ ಮುಂದಾಳತ್ವದಲ್ಲಿ ಮಾಡಲಾಯಿತು.ಈ ಸಂದರ್ಭದಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ, ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಡಾ. ಈಶ್ವರ ಉಳ್ಳಾಗಡ್ಡಿ, ಬೆಳಗಾವಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀಮತಿ ಲೀಲಾವತಿ ಹಿರೇಮಠ, ಖ್ಯಾತ ಸಾಹಿತಿ ಸಿ ಕೆ ನವಲಗಿ, ಬೈಲಹೊಂಗಲ ಅಕ್ಕಮಹಾದೇವಿ ಕಾಲೇಜಿನ ಪ್ರಚಾರ್ಯ ಡಾ. ಸಿ ಬಿ ಗಣಾಚಾರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ ವಾಯ್ ತುಬಾಕಿ, ಸಮನ್ವಯ ಅಧಿಕಾರಿ ಶ್ರೀಮತಿ ಗಾಯತ್ರಿ ಅಜ್ಜನವರ ಉಪಸ್ಥಿತರಿದ್ದರು. ನಿರೂಪಣೆಯನ್ನು ಸ್ನೇಹಲ ಪೂಜಾರ ನೆರವೇರಿಸಿದರು.


