ಹುಬ್ಬಳ್ಳಿ : ರಾಷ್ಟ್ರೀಯ, ಸೆಪ್ಟೆಂಬರ್ 3, 2025: ಅರ್ಬನ್ ಕಂಪನಿ ಲಿಮಿಟೆಡ್ ತನ್ನ ಆರಂಭಿಕ ಸಾರ್ವಜನಿಕ ಕೊಡುಗ(ಐಪಿಒ )ಗೆ ಸಂಬಂಧಿಸಿದ ಹೊಸ ಬಿಡ್ ನ್ನು ಸೆಪ್ಟೆಂಬರ್ 10 ರಂದು ಆರಂಭಿಸಲಿದೆ.
ಈಕ್ವಿಟಿ ಷೇರ್ ಗಳ ಒಟ್ಟು ಕೊಡುಗೆಯ ಗಾತ್ರ ₹1900 ಕೋಟಿ ಆಗಿದ್ದು, ಇದರಲ್ಲಿ ₹472 ಕೋಟಿವರೆಗಿನ ತಾಜಾ ಷೇರ್ ಗಳ ಸಂಚಿಕೆಯನ್ನು ಒಳಗೊಂಡಿದೆ ಮತ್ತು ₹1,428 ಕೋಟಿವರೆಗಿನ ಮಾರಾಟಗಾರ ಷೇರ್ ಹೋಲ್ಡರ್ ಗಳ ಆಫರ್ ಫಾರ್ ಸೇಲ್ ನ್ನು ಹೊಂದಿದೆ.
ಈ ಬಿಡ್/ ಆಫರ್ ಸೆಪ್ಟೆಂಬರ್ 10, 2025 ರಂದು ಆರಂಭವಾಗಿ, ಸೆಪ್ಟೆಂಬರ್ 12, 2025 ರಂದು ಮುಕ್ತಾಯಗೊಳ್ಳಲಿದೆ.
ಈ ಆಫರ್ ನ ದರ ವ್ಯಾಪ್ತಿಯನ್ನು ಪ್ರತಿ ಈಕ್ವಿಟಿ ಷೇರಿಗೆ ₹98 ರಿಂದ ₹103 ರವರೆಗೆ ನಿಗದಿಪಡಿಸಲಾಗಿದೆ. ಕನಿಷ್ಠ 145 ಈಕ್ವಿಟಿ ಷೇರ್ ಗಳಿಗೆ ಬಿಡ್ ಮಾಡಬಹುದು ಮತ್ತು ಆ ನಂತರ 145 ಷೇರ್ ಗಳ ಗುಣಕಗಳಲ್ಲಿ ಬಿಡ್ ಮಾಡಬಹುದು.
ತಾಜಾ ಷೇರ್ ಗಳ ಜಾರಿಯಿಂದ ಬಂದ ಹಣದ ಬಳಕೆ: ಕಂಪನಿಯು ತಾಜಾ ಈಕ್ವಿಟಿ ಷೇರ್ ಗಳ ಜಾರಿಯಿಂದ ಬಂದ ಶುದ್ಧ ಆದಾಯವನ್ನು ಈ ಮುಂದಿನ ಉದ್ದೇಶಗಳಿಗೆ ಬಳಸಲು ಉದ್ದೇಶಿಸಿದೆ: ಹೊಸ ತಂತ್ರಜ್ಞಾನ ಅಭಿವೃದ್ಧಿ ಮತ್ತು ಕ್ಲೌಡ್ ಇನ್ ಫ್ರಾಸ್ಟ್ರಕ್ಚರ್ ಗಾಗಿ ₹190 ಕೋಟಿ. ಕಚೇರಿಗಳ ಗುತ್ತಿಗೆ ಪಾವತಿಗಳಿಗಾಗಿ ₹75 ಕೋಟಿ. ಮಾರ್ಕೆಟಿಂಗ್ ಚಟುವಟಿಕೆಗಳಿಗಾಗಿ ₹90 ಕೋಟಿ. ಸಾಮಾನ್ಯ ಕಾರ್ಪೊರೇಟ್ ಉದ್ದೇಶಗಳಿಗಾಗಿ.
ಈ ಆಫರ್ ಮಾರಾಟವು ₹1 ಮುಖಬೆಲೆಯ ಈಕ್ವಿಟಿ ಷೇರ್ಗಳನ್ನು ಒಳಗೊಂಡಿದೆ,
ಬುಕ್ ರನ್ನಿಂಗ್ ಲೀಡ್ ಮ್ಯಾನೇಜರ್ ಗಳು: ಕೋಟಕ್ ಮಹೀಂದ್ರಾ ಕ್ಯಾಪಿಟಲ್ ಕಂಪನಿ ಲಿಮಿಟೆಡ್, ಮಾರ್ಗನ್ ಸ್ಟಾನ್ಲಿ ಇಂಡಿಯಾ ಕಂಪನಿ ಪ್ರೈವೇಟ್ ಲಿಮಿಟೆಡ್, ಗೋಲ್ಡ್ ಮನ್ ಸ್ಯಾಕ್ಸ್ (ಇಂಡಿಯಾ) ಸೆಕ್ಯುರಿಟೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಜೆಎಂ ಫೈನಾನ್ಶಿಯಲ್ ಲಿಮಿಟೆಡ್ ಈ ಸಂಚಿಕೆಯ ಬುಕ್ ರನ್ನಿಂಗ್ ಲೀಡ್ ಮ್ಯಾನೇಜರ್ಗಳಾಗಿವೆ.