ಗೆದ್ದಲಮರಿಯಲ್ಲಿ “ಜ್ಞಾನದೀಪ” ಸಮಗ್ರ ಕೈಪಿಡಿ ಬಿಡುಗಡೆ – ನಲಿಕಲಿ ಪಠ್ಯಕ್ರಮಕ್ಕೆ ನೂತನ ಮಾರ್ಗದರ್ಶನ.

Pratibha Boi
ಗೆದ್ದಲಮರಿಯಲ್ಲಿ “ಜ್ಞಾನದೀಪ” ಸಮಗ್ರ ಕೈಪಿಡಿ ಬಿಡುಗಡೆ – ನಲಿಕಲಿ ಪಠ್ಯಕ್ರಮಕ್ಕೆ ನೂತನ ಮಾರ್ಗದರ್ಶನ.
WhatsApp Group Join Now
Telegram Group Join Now
ಮುದ್ದೇಬಿಹಾಳ :- ತಾಲೂಕಿನ ಗೆದ್ದಲಮರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ವಿಶೇಷ ಶೈಕ್ಷಣಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಶಿಕ್ಷಕಿಯರಾದ ಅಕ್ಷತಾ ಮಹಾದೇವಪ್ಪ ಕುಂದರಗಿ ಸಂಪಾದಿಸಿರುವ , ನಲಿಕಲಿ ಪಠ್ಯಾಧಾರಿತ ವಿಷಯಗಳ ಜ್ಞಾನದೀಪ ಸಮಗ್ರ ಕೈಪಿಡಿ ಯನ್ನು ವಿಜೃಂಭಣೆಯಿಂದ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಬಿ ಎಸ್. ಸಾವಳಗಿ ಮಾತನಾಡಿ, ನಲಿಕಲಿ ಪಾಠಕ್ರಮವು ಕೇವಲ ಪಾಠ ಪುಸ್ತಕದೊಳಗೆ ಸೀಮಿತವಾಗದೆ, ಮಕ್ಕಳ ಕಲಿಕೆ ಪ್ರಕ್ರಿಯೆಯನ್ನು ಆನಂದಕರ ಹಾಗೂ ಸೃಜನಾತ್ಮಕವಾಗಿಸಲು ರೂಪುಗೊಂಡಿದೆ.  ಪಾಠಬೋಧನೆಯ ಜೊತೆಗೆ ಈ ಪುಸ್ತಕದಲ್ಲಿ  ಮಕ್ಕಳಿಗೆ ಬೇಕಾಗುವ ಎಲ್ಲಾ ಭೋಧನೆಗೆ ಸಿಗುವ ಎಲ್ಲಾ ವಿಷಯಗಳು ಇವೆ,  ರಚನೆ ಮಾಡುವದು ಕಠೀಣವಾದ ಕಾರ್ಯವಾಗಿದೆ, ಈ ಪುಸ್ತಕದಲ್ಲಿ ಸಾಮಾನ್ಯ ಜ್ಞಾನ. ಸಾಮಾನ್ಯ ಕನ್ನಡ ಈ ಪುಸ್ತಕದಲ್ಲಿ ಒಳಗೊಂಡಿರುತ್ತದೆ, ಈ ಪುಸ್ತಕದಲ್ಲಿ ಒಳಗೊಂಡಿರುವಂತಹ ನೋಡಿ ಬಾಲ್ಯ ನೆನಪು ಮೆಲಕು ಹಾಕಿದರು, ಈ ಪುಸ್ತಕ ಉನ್ನತವಾದ ಹುದ್ದೆಯನ್ನು ಈ ರೀತಿಯ ಕೈಪಿಡಿಗಳು ಶಿಕ್ಷಕರಿಗೆ ಮಾರ್ಗದರ್ಶಕವಾಗುತ್ತವೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ನೆರವಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಅಕ್ಷರ ದಾಸೋಹ ಅಧಿಕಾರಿಳಾದ ಮಲ್ಲಿಕಾರ್ಜುನ ಬೆಳಗಲ್ ಮಾತನಾಡಿ ಇಂದಿನ ತಲೆಮಾರದ ಮಕ್ಕಳಿಗೆ ತಿಳುವಳಿಕೆಯೊಂದಿಗೆ ಕ್ರಿಯಾತ್ಮಕ ಚಟುವಟಿಕೆ ಅಗತ್ಯ. ನಲಿಕಲಿ ತಂತ್ರವು ಅದರತ್ತ ದಾರಿ ತೋರಿಸುತ್ತದೆ. ಜ್ಞಾನದೀಪ ಕೈಪಿಡಿ ಶಿಕ್ಷಕರಿಗೆ ಪಾಠದ ಹಂತಗಟ್ಟಲೆ ನಿರ್ವಹಣೆಗೆ ಸಹಾಯಕವಾಗಲಿದೆ , ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ  ಯಾವುದೇ ಕಠಿಣ ಕಾರ್ಯವನ್ನು ಮಾಡಬಲ್ಲರು ಎಂಬುವದಕ್ಕೆ ಈ ಜ್ಞಾನದೀಪ ಅಂಕಲಿಪಿ ಯ ವ್ಯಕ್ತಿತ್ವವೇ ಸಾಕ್ಷಿ ಎಂದು ಪ್ರಶಂಸಿಸಿದರು.
ಇನ್ನಿತರ ಶಿಕ್ಷಕರು ಹಾಗೂ ಹಾಜರಿದ್ದ ವೃದ್ದರು ತಮ್ಮ ಮಾತಿನಲ್ಲಿ, ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಶಿಕ್ಷಕರು ಸತತವಾಗಿ ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕೈಪಿಡಿ ಬಿಡುಗಡೆ ಸಮಾರಂಭದಲ್ಲಿ ತಾಲೂಕ ದೈ ಶಿಕ್ಷಣಾಧಿಕಾರಿಗಳಾದ ಬಿ ವೈ ಕವಡಿ, ತಾ ಪ್ರಾ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಿ ಎಚ್ ಮುದ್ನೂರ,
ಪ್ರಾ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಎನ್ ಎಸ್ ತುರಡಗಿ,  ಶಿಕ್ಷಣ ಸಂಯೋಜಕರಾದ ಪಿ ಎ ಬಾಳಿಕಾಯಿ .ನಲಿ ಕಲಿ ನೊಡಲ್ ಅಧಿಕಾರಿ ಲತಾ ಮುದ್ದಾಪೂರ , ಶಿಕ್ಷಣ ಸಂಯೋಜಕರು ಢವಳಗಿ ವಲಯ ಡಿ ವೈ ಗುರಿಕಾರ , ಎಂ ಜಿ ವಾಲಿ ,  ಸಿದ್ದನಗೌಡ ಬಿಜ್ಜೂರ ಪರಶುರಾಮ ವಾಲಿಕಾರ,  ಬಿ ಎಸ್ ಶೇಕಣ್ಣವರ, ಎನ್ ಬಿ ಬಿರಾದಾರ,  ಸಿ ಆರ್ ಪಿ ಹಡಲಗೇರಿ, ಉಮಾಪತಿ ಚೌಧರಿ, ಕೆ ಎಂ ಇಬ್ರಾಹಿಂಪುರ  , ಹೆಚ್. ಬಿ. ಪಾತ್ರೋಟ ಮುಖ್ಯ ಗುರುಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೆದ್ದಲಮರಿ,  ಬಿ ಹೆಚ್ ಪಾಟೀಲ್, ದೇವರಾಜ್ ಲಮಾಣಿ, ಟಾಕಪ್ಪ ಲಮಾಣಿ ,ಎಂ ಹೆಚ್ ಕುಂದರಗಿ ನಿವೃತ್ತಿ ಶಿಕ್ಷಕರು ಎನ್ ಆರ್ ದೊಡಮನಿ,ಎ ಬಿ ಬೆಳ್ಳಿಕಟ್ಟಿ ಸಹ ಶಿಕ್ಷಕರು ಎಂಎಸ್ ಪಾಟೀಲ್ , ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
WhatsApp Group Join Now
Telegram Group Join Now
Share This Article