ಬೆಳಗಾವಿ 09- ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಹಿರಿಯ ಸಾಹಿತಿ ಪತ್ರಕರ್ತ ಎಲ್. ಎಸ್. ಶಾಸ್ತ್ರಿಯವರ ನಾಲ್ಕು ಕೃತಿಗಳ ಬಿಡುಗಡೆ ಕಾರ್ಯಕ್ರಮ ದಿ. ೧೨- ೫-೨೦೨೪ ರವಿವಾರ ಬೆ. ೧೦ ಗಂಟೆಗೆ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಲಿದೆ.
ಮಹಾಲಿಂಗಪುರದ ಕೆ.ಎಲ್. ಇ.ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರೂ , ಖ್ಯಾತ ಬರೆಹಗಾರರೂ ಆದ ಡಾ. ಅಶೋಕ ನರೋಡೆ ಅವರು ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ ಮತ್ತು ಡಾ. ಸಿ. ಕೆ. ಜೋರಾಪುರ ಅಧ್ಯಕ್ಷತೆ ವಹಿಸಲಿದ್ದಾರೆ.
ನಗೆಮಲ್ಲಿಯರ ನಾಡಿನಲ್ಲಿ, ಮಾಧ್ಯಮ ದರ್ಶನ, ಕನ್ನಡ ಮರಾಠಿ ಸ್ನೇಹಸೇತು ಕೃ. ಶಿ. ಹೆಗಡೆ, ಮತ್ತು ಕನ್ನಡದ ಭಾಗ್ಯ ಕೃತಿಗಳ ಕುರಿತು ಡಾ. ಅಶೋಕ ನರೋಡೆ, ಶ್ರೀ ರಾಜೇಂದ್ರ ಪಾಟೀಲ, ಡಾ. ಪಿ. ಜಿ. ಕೆಂಪಣ್ಣವರ, ಮತ್ತು ಶ್ರೀಮತಿ ಮಮತಾ ಶಂಕರ ಮಾತನಾಡಲಿದ್ದಾರೆ. ಶ್ರೀ ಆರ್. ಬಿ. ಕಟ್ಟಿ ಅತಿಥಿಗಳಾಗಿರುತ್ತಾರೆ.
ಕಾರ್ಯಕ್ರಮಕ್ಕೆ ಸಾಹಿತ್ಯಾಸಕ್ತರೆಲ್ಲ ಬರಬೇಕೆಂದು ಚುಸಾಪ ಪ್ರಧಾನ ಕಾರ್ಯದರ್ಶಿ ಬಸವರಾಜ ಗಾರ್ಗಿ ಅವರು ಕೋರಿದ್ದಾರೆ.


