ಬುರುಡೆ ರಹಸ್ಯ ಬಾಯ್ಬಿಟ್ಟ ಚಿನ್ನಯ್ಯ; ಬುರುಡೆ ಪ್ಲ್ಯಾನ್ ಬಗ್ಗೆ ಜಯಂತ್ ಮನೆಯಲ್ಲೇ ರಿಹರ್ಸಲ್!

Ravi Talawar
ಬುರುಡೆ ರಹಸ್ಯ ಬಾಯ್ಬಿಟ್ಟ ಚಿನ್ನಯ್ಯ; ಬುರುಡೆ ಪ್ಲ್ಯಾನ್ ಬಗ್ಗೆ ಜಯಂತ್ ಮನೆಯಲ್ಲೇ ರಿಹರ್ಸಲ್!
WhatsApp Group Join Now
Telegram Group Join Now

ಬೆಂಗಳೂರು, ಸೆಪ್ಟೆಂಬರ್ 1: ಧರ್ಮಸ್ಥಳ ಪ್ರಕರಣದಲ್ಲಿ ‘ಬುರುಡೆ ಗ್ಯಾಂಗ್‌’ನ ಬುರುಡೆಯಾಟ ಬಗೆದಷ್ಟು ಬಯಲಾಗುತ್ತಿದೆ. ಬೆಂಗಳೂರಿನ ಬಾಗಲುಗುಂಟೆ ಜಯಂತ್‌ ಮನೆ ಮತ್ತು ವಿದ್ಯಾರಣ್ಯಪುರ ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ಮಹಜರು ನಡೆಸಿದ ಬಳಿಕ ಸ್ಫೋಟಕ ಸಂಗತಿಗಳು ಹೊರಬಿದ್ದಿವೆ. ಬುರುಡೆ ಸಿಕ್ಕಿದ್ದು, ಬುರುಡೆ ರಿಹರ್ಸಲ್ ನಡೆದಿದ್ದ ಬಗ್ಗೆ ರೋಚಕ ಸಂಗತಿಗಳು ಎಸ್ಐಟಿ ತನಿಖೆಯಿಂದ ಬಹಿರಂಗೊಂಡಿದೆ.

ನೂರಾರು ಶವ ಹೂತಿದ್ದೇನೆ. ಹೂತಿರುವ ಜಾಗ ತೋರಿಸುತ್ತೇನೆ ಎಂದು ಕೈಯಲ್ಲೊಂದು ಬುರುಡೆ ಹಿಡಿದುಕೊಂಡು ಬಂದಿದ್ದ ಚಿನ್ನಯ್ಯ, ಬುರುಡೆ ಬಿಟ್ಟಿದ್ದ. ಆದರೆ ಈಗ ಈ ಬುರುಡೆ ಎಲ್ಲಿಂದ ಬಂತು ಎಂಬ ಸ್ಫೋಟಕ ವಿಚಾರ ಗೊತ್ತಾಗಿದೆ. ಜಯಂತ್ ಮನೆಯಲ್ಲೇ ಚಿನ್ನಯ್ಯನ ಹೇಳಿಕೆಯನ್ನು ಮೊದಲು ವಿಡಿಯೋ ಮಾಡಲಾಗಿತ್ತಂತೆ. ವಿಡಿಯೋ ಹೇಳಿಕೆ ಪಡೆದು, ನಂತರ ಅದನ್ನ ಗಿರೀಶ್ ಮಟ್ಟಣ್ಣನವರ್ ಸೂಚನೆಯಂತೆ ಜಯಂತ್ ಡಿಲೀಟ್ ಮಾಡಿದ್ದ ಎನ್ನಲಾಗಿದೆ. ಬುರುಡೆ ಪ್ಲ್ಯಾನ್ ಬಗ್ಗೆ ಜಯಂತ್ ಮನೆಯಲ್ಲೇ ರಿಹರ್ಸಲ್ ನಡೆದಿತ್ತು ಎನ್ನಲಾಗಿದೆ. ಈ ವಿಡಿಯೋಗಾಗಿ ಪೊಲೀಸರು ವಶಪಡಿಸಿಕೊಂಡಿರುವ ಫೋನ್‌ಗಳನ್ನ ರಿಟ್ರೀವ್ ಮಾಡುತ್ತಿದ್ದಾರೆ.

ಎಸ್ಐಟಿ ಮುಂದೆ ಸ್ಫೋಟಕ ವಿಚಾರ ಬಾಯ್ಬಿಟ್ಟಿರುವ ಚಿನ್ನಯ್ಯ, ಬುರುಡೆ ರಹಸ್ಯ ಹೇಳಿದ್ದಾನೆ. ಸ್ಯಾಟಲೈಟ್‌ ಬಸ್ ನಿಲ್ದಾಣದಿಂದ ಬಾಗಲುಗುಂಟೆ ಜಯಂತ್ ನಿವಾಸಕ್ಕೆ ನಾವೆಲ್ಲರು ಬಂದಿದ್ದೆವು. ಮೂರು ದಿನ ಜಯಂತ್ ಮನೆಯಲ್ಲೇ ಇದ್ದೆವು. ಮನೆಯ ಟೆರೇಸ್ ಮೇಲೆ ಕುಳಿತು ಚರ್ಚೆ ಮಾಡಿದ್ದೆವು. ಇದೇ ವಳೆ ಜಯಂತ್ ನನಗೆ ಬುರುಡೆ ಮತ್ತು ಮೂಳೆ ಕೊಟ್ಟಿದ್ದರು. ಜಯಂತ್ ಮನೆಯಲ್ಲೇ ಮೊದಲು ಬುರುಡೆ, ಮೂಳೆ ನೋಡಿದ್ದು ಎಂದು ಮೊದಲು ಬುರುಡೆ ತಗೆದುಕೊಂಡ ಬಗ್ಗೆ ಚಿನ್ನಯ್ಯ ಹೇಳಿಕೆ ನೀಡಿದ್ದಾನೆ. ಈ ಮಾಹಿತಿ ಆಧರಿಸಿ ಎಸ್ಐಟಿ ಬೆಂಗಳೂರಿಗೆ ಕರೆತಂದು ಜಯಂತ್ ಮನೆಯಲ್ಲಿ ಮಹಜರು ನಡೆಸಿದ್ದಾರೆ. ಜಯಂತ್ ಮನೆಯ ಬಳಿಕ ಗಿರೀಶ್ ಮಟ್ಟಣ್ಣನವರ್ ಸೂಚನೆಯಂತೆ ಗ್ಯಾಂಗ್ ಶಿಫ್ಟ್ ಆಗಿತ್ತು. ವಿದ್ಯಾರಣ್ಯಪುರದ ಸರ್ವಿಸ್ ಅಪಾರ್ಟ್‌ಮೆಂಟ್‌ಗೆ ಹೋದೆವು, ‘ಆಪಾರ್ಟ್‌ಮೆಂಟ್‌ನಲ್ಲಿ ಮಟ್ಟಣ್ಣನವರ್, ಜಯಂತ್ ಹಲವರು ಸೇರಿದ್ವಿ ಅಂತಾ ಚಿನ್ನಯ್ಯ ಹೇಳಿದ್ದಾನೆ. ‘ಗಿರೀಶ್ ಮಟ್ಟಣ್ಣನವರ್ ಸೂಚನೆಯಂತೆ ಕೋರ್ಟ್‌ನಲ್ಲಿ ತಾನೇ ಬುರುಡೆ ತಂದಿದ್ದು ಎಂದು ಕೋರ್ಟ್‌ನಲ್ಲಿ ಹೇಳಿದ್ದಾಗಿ ಚಿನ್ನಯ್ಯ ಎಸ್ಐಟಿ ಮುಂದೆ ಚಿನ್ನಯ್ಯ ಬಾಯ್ಬಿಟ್ಟಿದ್ದಾನೆ.

WhatsApp Group Join Now
Telegram Group Join Now
Share This Article