ರಾಜ್ಯ ಸರ್ಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ: ಜಿಲ್ಲಾ ತಾಲೂಕು ಸಮಿತಿ ಪದಾಧಿಕಾರಿಗಳ ನೇಮಕ

Ravi Talawar
ರಾಜ್ಯ ಸರ್ಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ: ಜಿಲ್ಲಾ ತಾಲೂಕು ಸಮಿತಿ ಪದಾಧಿಕಾರಿಗಳ ನೇಮಕ
WhatsApp Group Join Now
Telegram Group Join Now

ಬೆಳಗಾವಿ,ಏಪ್ರಿಲ್ 02: ಕರ್ನಾಟಕ ರಾಜ್ಯದ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಗೆ ಇಂದು ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ರಾಜ್ಯಾಧ್ಯಕ್ಷ ಶ್ರೀ ಕೃಷ್ಣ ಡಿ ನಾಯಕ ರವರು ದಿಢೀರ್ ಭೇಟಿ ನೀಡಿ ಜಿಲ್ಲೆಯ ಅಂಗಡಿಕಾರರ ಸಮಸ್ಯೆಗಳ ಕುರಿತು ಜಂಟಿ ನಿರ್ದೇಶಕರು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಬೆಳಗಾವಿ ಯವರ ಜೊತೆ ಚರ್ಚಿಸಿ ಕುಂದು ಕೊರತೆಗಳ ಪರಿಹಾರಕ್ಕೆ ಆಗ್ರಹಿಸಿದರು.

ಬೆಳಗಾವಿ ಜಿಲ್ಲೆಯಲ್ಲಿ ಹಿಂಬಾಕಿ ಹಾಗೂ ಫೆಬ್ರವರಿ ತಿಂಗಳ ಕಮೀಷನ್ ಬಿಡುಗಡೆ ಆಗಿದ್ದು ನ್ಯಾಯ ಬೆಲೆ ಅಂಗಡಿ ಮಾಲೀಕರ ಬ್ಯಾಂಕ್ ಖಾತೆ ಗೆ ಜಮಾ ಆಗಿದೆ ಜಂಟಿ ನಿರ್ದೇಶಕರ ಕಾರ್ಯವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಹೂಗುಚ್ಛ ನೀಡಿ ಸಂಘದ ಪರವಾಗಿ ಸತ್ಕರಿಸಿದರು.

ಜೊತೆಯಲ್ಲಿ ರಾಜ್ಯ ಉಪಾಧ್ಯಕ್ಷರು ಶ್ರೀ ರಾಜಶೇಖರ ತಳವಾರ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಮಚಂದ್ರ ಬೆಳಗಾವಿ ಜಿಲ್ಲೆ ಅದ್ಯಕ್ಷರು ಶ್ರೀ ಶಾಂತಿನಾಥ ಬುಡವಿ ಕಾರ್ಯಾಧ್ಯಕ್ಷ ಶ್ರೀ ಅನಿಲ್ ಪೋತದಾರ ಬೆಳಗಾವಿ ಜಿಲ್ಲೆ ಪ್ರಧಾನ ಕಾರ್ಯದರ್ಶಿ ಶ್ರೀ ದಿನೇಶ್ ಚಂದ್ರಶೇಖರ ಬಾಗಡೆ ಅಥನಿ ತಾಲೂಕು ನೂತನ ಅಧ್ಯಕ್ಷರಾಗಿ ಶ್ರೀ ಹಣಮಂತ ಖೋತ ಕಾರ್ಯದರ್ಶಿ ಅಶೋಕ್ ಕದಮ ಎಸ್ ಎಲ್ ಕಟ್ಟಿ ರಾಯಬಾಗ ಅವರನ್ನು ಜಿಲ್ಲಾ ಸಮಿತಿ ಸಂಘಟನಾ ಕಾರ್ಯದರ್ಶಿ ಅಂತ ನೇಮಕ ಮಾಡಲಾಯಿತು ಅವರನ್ನು ನೇಮಕ ಮಾಡಲಾಯಿತು.

ಮೂಡಲಗಿ ತಾಲೂಕು ಅದ್ಯಕ್ಷರು ಶ್ರೀ ಮಾರುತಿ ಕಡಬಣ್ಣವರ ಬಸವರಾಜ ದೊಡಮನಿ ನಗರ ಘಟಕದ ಉಪಾಧ್ಯಕ್ಷ ಧಾರವಾಡ ಜಿಲ್ಲಾ ಅಧ್ಯಕ್ಷರು ಶ್ರೀ ರವಿ ಪಾಟೀಲ್ ಸಂಘಟನಾ ಕಾರ್ಯದರ್ಶಿ ಶ್ರೀ ರಾಜು ಗೊಂದಿ ಶ್ರೀ ಬಾಳು ಪಾಟೀಲ್,  ಶ್ರೀ ದಿನೇಶ್ ಚಂದ್ರಶೇಖರ ಬಾಗಡೆ ಪ್ರಧಾನ ಕಾರ್ಯದರ್ಶಿ ಬೆಳಗಾವಿ ಜಿಲ್ಲೆ ಸರ್ಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಜಿಲ್ಲಾ ಘಟಕ ಬೆಳಗಾವಿ ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article