10 ವರ್ಷದಲ್ಲಿ ಮೋದಿಯವರಿಂದ ದಾಖಲೆಯ ಅಭಿವೃದ್ಧಿ : ಎಂ.ಎಂ.ಹಿರೇಮಠ

Ravi Talawar
10 ವರ್ಷದಲ್ಲಿ ಮೋದಿಯವರಿಂದ ದಾಖಲೆಯ ಅಭಿವೃದ್ಧಿ : ಎಂ.ಎಂ.ಹಿರೇಮಠ
WhatsApp Group Join Now
Telegram Group Join Now

ಗದಗ,ಏಪ್ರಿಲ್​ 05: ೨೦೧೪ ರಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿಯವರು ಕಳೆದ ೧೦ ವರ್ಷಗಳಲ್ಲಿ ದಾಖಲೆಯ ಅಬಿವೃದ್ಧಿಯನ್ನು ಮಾಡಿ ಇಡೀ ಜಗತ್ತೆ ಇವತ್ತು ಭಾರತದ ಕಡೆ ಸ್ನೇಹ ಹಸ್ತಕ್ಕಾಗಿ ಕೈಜೋಡಿಸುತ್ತಿದ್ದು ೧೦ ವರ್ಷದ ಅವಧಿಯಲ್ಲಿ ದಾಖಲೆಯ ಅಭಿವೃದ್ಧೆ ಮಾಡಿದೆ ಎಂದು ಬಿಜೆಪಿ ಗದಗ ಜಿಲ್ಲಾ ವಕ್ತಾರರಾದ ಎಂ.ಎಂ.ಹಿರೇಮಠರವರು ಅಭಿಪ್ರಾಯ  ವ್ಯಕ್ತಪಡಿಸಿದ್ದಾರೆ.

ಅವರಿಂದು ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ಕಳೆದ ೧೦ ವರ್ಷಗಳಿಂದ ಆಡಳಿತ ನಡೆಸಿದ್ದ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಕಲ್ಯಾಣದಿಂದ ಹಿಡಿದು ವಿಶ್ವ ಮಟ್ಟದಲ್ಲಿ ದೇಶದ ಗೌರವವನ್ನು ಹೆಚ್ಚಿಸುವಂತಹಾ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡರು.  ಆಡಳಿತಾತ್ಮಕವಾಗಿ
ಇಡೀ ದೇಶದಲ್ಲಿ ಸುಶಾಸನ ಜಾರಿಗೆ ಬಂದಿತು ಎಂದಿದ್ದಾರೆ.

ಇಂತಹ ಸಮರ್ಥ ನೇತೃತ್ವಕ್ಕೆ ಮತ್ತೆ ದೇಶದ ಚುಕ್ಕಾಣಿ ವಹಿಸುವ ಸದಾವಕಾಶ ತಮ್ಮ ಮುಂದಿದೆ. ಮೋದಿಯವರ ದಾಖಲೆಯ ಅಭಿವೃದ್ಧಿಯ ಕಾರ್ಯಗಳು ಗ್ರಾಮೀಣ ಜನರ ಆರೋಗ್ಯ ರಕ್ಷಣೆಗಾಗಿ ಆಯುಷ್ಮಾನ್ ಭಾರತ್, ಶುದ್ಧ ಕುಡಿಯುವ ನೀರಿಗಾಗಿ ಜಲಜೀವನ್ ಮಿಷನ್, ಕೈಗೆಟಗುವ ದರದಲ್ಲಿ ಔಷಧ ಲಭ್ಯತೆಗಾಗಿ ೧೧ ಸಾವಿರಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳು, ಪ್ರತಿಯೊಬ್ಬ ನಾಗರೀಕನಿಗೂ ಉಚಿತ ಕೋವಿಡ್ ಲಸಿಕೆ ವಿತರಣೆ, ವಿದೇಶದಲ್ಲಿ ಸಂಕಷ್ಠದಲ್ಲಿರುವ ಭಾರತೀಯ ರಕ್ಷಣೆ, ಪ್ರಧಾನಮಂತ್ರಿ  ಗರೀಬ್ ಕಲ್ಯಾಣ ಯೋಜನೆಯಡಿ ೮೦ ಕೋಟಿ ಬಡವರಿಗೆ ಉಚಿತ ಪಡಿತರ ವಿತರಣೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆ, ೩೯.೬೫ ಕೋಟಿ ಉದ್ಯಮಿಗಳಿಗೆ ಸಾಲ ವಿತರಣೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ  ಬಡವರಿಗೆ ೩ ಕೋಟಿಗೂ ಹೆಚ್ಚು ಮನೆಗಳ ನಿರ್ಮಾಣ, ಜನ ಧನ್ ಯೋಜನೆಯಡಿ ೪೮.೨೭ ಕೋಟಿಗೂ ಅಧಿಕ ಬಡವರನ್ನು ಬ್ಯಾಂಕಿAಗ್ ವ್ಯವಸ್ಥೆಗೆ ಜೋಡಣೆ, ಪ್ರಧಾನಮಂತ್ರಿ ಜೀವನ್ ಸುರಕ್ಷಾ ಯೋಜನೆಯಡಿ ೨೯.೭೫ ಕೋಟಿ ಫಲಾನುಭವಿಗಳಿಗೆ ಪ್ರಯೋಜನ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಜೀವವಿಮಾ ಯೋಜನೆಯಡಿ ೧೩.೫೩ ಕೋಟಿ ಫಾಲನುಭವಿಗಳಿಗೆ ಪ್ರಯೋಜನ, ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ೧೧.೭೨ ಕೋಟಿ ಶೌಚಾಲಯಗಳ ನಿರ್ಮಾಣ, ರಕ್ಷಣಾ ಕ್ಷೇತ್ರಗಳ ಉತ್ಪಾದನೆಯಲ್ಲಿ ಆತ್ಮನಿರ್ಭರತೆ, ಯುವಕ/ಯುವತಿಯರಿಗೆ ಸೈನ್ಯಕ್ಕೆ ಸೇರಲು ಅಗ್ನಿ ಪಥ್ ಯೋಜನೆ, ನಿವೃತ್ತ ಸೈನಿಕರಿಗೆ ಒನ್ ರ‍್ಯಾಂಕ್ ಒನ್ ಪೆನ್ಸನ್ ಜಾರಿ, ಜಿ೨೦ ನೇತೃತ್ವದ ಯಶಸ್ವಿ ನಿರ್ವಹಣೆ  ಭಾರತಕ್ಕೆ ಲಭ್ಯವಾದ ವಿಶೇಷ ಮನ್ನಣೆ, ರಾಮ ಮಂದಿರ ನಿರ್ಮಾಣ,
ಆರ್ಟಿ ೩೭೦ ಮತ್ತು ೩೫ ಎ ರದ್ದು, ಪೌರತ್ವ ತಿದ್ದುಪಡಿ ಕಾಯಿದೆ ಜಾರಿ, ೨ ಬಾರಿ ಸರ್ಜಿಕಲ್ ದಾಳಿ, ಬಾಬಾ ಸಾಹೇಬ್ ಅಂಬೇಡ್ಕರ್ ಸ್ಮರಣಾರ್ಥ ೫ ಸ್ಥಳಗಳ ಅಭಿವೃದ್ಧಿ, ಕಾಶಿ ವಿಶ್ವನಾಥ ಮತ್ತು ಉಜ್ಜೆಯಿನಿ ಮಹಾಕಾಲ ಕಾರಿಡಾರ್ ಅಭಿವೃದ್ದಿ, ಕೇದಾರ ಉತ್ತರಖಂಡ ದೇವಾಲಯಗಳನ್ನು ಸಂಪರ್ಕಿಸಲು ಸರ್ವಋತು ರಸ್ತೆ ನಿರ್ಮಾಣ, ಸರ್ದಾರ ಪಟೇಲ್ ಏಕಾತೆ ಪ್ರತಿಮೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ಕಿಸಾನ್ ರೈಲು, ಪ್ರಧಾನಮಂತ್ರಿ ಬೆಳೆ ವಿಮೆ ಯೋಜೆನೆ, ಬೇವು ಲೇಪಿತ್ ಯುರಿಯಾ, ರಾಷ್ಟಿçÃಯ ಶಿಕ್ಷಣ ನೀತಿ, ಒಂದು ರಾಷ್ಟç ಒಂದು ಮಾರುಕಟ್ಟೆ ಒಂದು ತೆರಿಗೆ ಜಾರಿ. ಮೊಬೈಲ್ ಉತ್ಪಾದನೆ, ಸಕ್ಕರೆ ಉತ್ಪಾದನೆ, ಗ್ರೀನ್ ಎನರ್ಜಿ  ಬಳಕೆಯಲ್ಲಿ ಜಗತ್ತಿನಲ್ಲಿ ಮೊದಲನೆ ಸ್ಥಾನ, ಹಣ್ಣು, ತರಕಾರಿಗಳ ಉತ್ಪಾದನೆ, ಮೀನುಗಾರಿಕೆ, ಸ್ಟೀಲ್ ಉತ್ಪಾದನೆ ಜಗತ್ತಿನಲ್ಲಿ ೨ನೇ ಸ್ಥಾನ, ವಿದ್ಯುಚ್ಛಕ್ತಿ ಉತ್ಪಾದನೆ, ನವೀಕರಿಸಬಹುದಾದ ಇಂಧನ ಉತ್ಪಾದನೆ ಜಗತ್ತಿನಲ್ಲಿ ೩ನೇ ಸ್ಥಾನ, ಆಟೋಮೊಬೈಲ್ ಮಾರುಕಟ್ಟಿ ಜಗತ್ತಿನಲ್ಲಿ ೪ನೇ ಸ್ಥಾನ ಈ ರೀತಿಯಾಗಿ ದಾಖಲೆಯ ಅಭಿವೃದ್ದಿ ಮಾಡಿರುವರು ಎಂದು ಎಂ.ಎA.ಹಿರೇಮಠ, ರಾಜು ಹೊಂಗಲ, ದತ್ತಣ್ಣ ಜೊಶಿ, ಶ್ರೀನಿವಾಸ ಹುಬ್ಬಳ್ಳಿ ಸಹಮತ
ವ್ಯಕ್ತಪಡಿಸಿದರು.

WhatsApp Group Join Now
Telegram Group Join Now
Share This Article