ಮಾನವ ಜನ್ಮ ಶ್ರೇಷ್ಠ ಜನ್ಮ ಅರಿತು ನಡೆಯಿರಿ: ಶ್ರೀ ಗುರುಸಿದ್ಧ ಸ್ವಾಮಿಗಳು

Hasiru Kranti
ಮಾನವ ಜನ್ಮ ಶ್ರೇಷ್ಠ ಜನ್ಮ ಅರಿತು ನಡೆಯಿರಿ: ಶ್ರೀ ಗುರುಸಿದ್ಧ ಸ್ವಾಮಿಗಳು
WhatsApp Group Join Now
Telegram Group Join Now

ಬೆಳಗಾವಿ: ಎಷ್ಟೋ ಜನ್ಮಗಳ ಪುಣ್ಯದ ಫಲವಾಗಿ ಮಾನವ ಜನ್ಮ ದೊರಕಿದ್ದು ಅದನ್ನು ಹಾಳು ಮಾಡಿ ಕೊಳ್ಳದೆ, ಸತ್ಯ ಧರ್ಮ ನ್ಯಾಯ ನಿಷ್ಠೆ ಪ್ರಾಮಾಣಿಕತೆಯಿಂದ ಅನ್ಯರಿಗೆ ಕೇಡು ಬಯಸದೆ ಉತ್ತಮ ರೀತಿಯಲ್ಲಿ ಬಾಳಬೇಕೆಂದು ಶ್ರೀ. ಮ.ನಿ.ಪ್ರ. ಗುರುಸಿದ್ದ ಮಹಾಸ್ವಾಮಿಗಳು ಹೇಳಿದರು.

ಮಾರಿಹಾಳ‌ ಗ್ರಾಮದ ಮರಾಠ ಸಾಂಸ್ಕೃತಿಕ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ( ರಿ ) ಖಾಸಭಾಗ & ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮೀತಿ ಮಾರೀಹಾಳ ಇವರ ಸಹಯೋಗದೊಂದಿಗೆ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮದ ಧಾರ್ಮಿಕ ಸಭೆಯ ದಿವ್ಯ ಸಾನಿಧ್ಯವಹಿಸಿದ ಶ್ರೀ ಮ.ನಿ.ಪ್ರ ಗುರುಸಿದ್ಧ ಸ್ವಾಮಿಗಳು ಆಶೀರ್ವಚನ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಳಗಾವಿ ಜಿಲ್ಲಾ ನಿರ್ದೇಶಕರಾದ ಸತೀಶ ನಾಯ್ಕ ರವರು ಮಾತನಾಡಿ, ಯುವ‌ಪೀಳಿಗೆಗೆ ಧಾರ್ಮಿಕ ಪ್ರಜ್ಞೆ ಮೂಡಿಸುವುದರ ಜೊತೆಗೆ ಉತ್ತಮ ಸಂಸ್ಕಾರ ನೀಡಿ ನೈತಿಕ ಶಿಕ್ಷಣ ನೀಡುವ ಅವಶ್ಯಕತೆ ಇದೆ. ತಂದೆ ತಾಯಿಯನ್ನು ವೃದ್ದಾಪ್ಯದ ಸಮಯದಲ್ಲಿ ಚೆನ್ನಾಗಿ ನೋಡಿಕೊಳ್ಳಬೇಕು.ಮಕ್ಕಳಿಗೆ ಹಿರಿಯರ ಬಗ್ಗೆ ಗೌರವ,ಗುರುಗಳ ಬಗ್ಗೆ ಭಯ ಭಕ್ತಿಯ ಸಂಸ್ಕಾರದ ಅವಶ್ಯಕತೆ ಇದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿ.ಆರ್.ಸೋನೇರ್ ಅಧ್ಯಕ್ಷರು ಅಖಿಲಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಬೆಳಗಾವಿ,ಬಸವರಾಜ ಸೊಪ್ಪಿಮಠ, ಬಸವರಾಜ ಮಾದಮ್ಮನರ, ವಿಠ್ಠಲ ಮಲಾರಿ, ವಿನೋದ ಬಾಳಪ್ಪ ಚೌಹಾಣ, ವಿನೋದ ಪಾಶ್ಚಾಪುರ , ಅಶೋಕ ಸಾಳುಂಕೆ, ಹಾಗೂ ಸುನಂದ ಪಾಶ್ಚಾಪುರ ಹಾಗೂ ಇತರರು ಇದ್ದರು. ಗ್ರಾ.ಪಂ ಅಧ್ಯಕ್ಷರಾದ ಗಿರಿಜಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು, ಯೋಜನಾಧಿಕಾರಿಗಳಾದ ಸುಭಾಷ್ ಪಿ.ಸಿ ಸ್ವಾಗತಿಸಿದರು, ದಯಾನಂದ ನಾಯ್ಕ ವಂದಿಸಿದರು.ಸೇವಾಪ್ರತಿನಿಧಿಗಳಾದ ಕಮಲ,ಸಂಗೀತ, ಮೇರಿ ಮತ್ತು ಸಂಘದ ಸದಸ್ಯರು ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article