ಓದುಗರ ಚಾವಡಿ ರಾಜೇಂದ್ರಕುಮಾರ ಬಿರಾದಾರ ಸಾಂಕೃತಿಕ ವೇದಿಕೆಯ ಮಾಸಿಕ ಪುಸ್ತಕ ಪರಿಚಯ ಕಾರ್ಯಕ್ರಮ

Ravi Talawar
ಓದುಗರ ಚಾವಡಿ ರಾಜೇಂದ್ರಕುಮಾರ ಬಿರಾದಾರ ಸಾಂಕೃತಿಕ ವೇದಿಕೆಯ ಮಾಸಿಕ ಪುಸ್ತಕ ಪರಿಚಯ ಕಾರ್ಯಕ್ರಮ
WhatsApp Group Join Now
Telegram Group Join Now

ವಿಜಯಪುರ29: ನಮ್ಮ ಸುತ್ತಮುತ್ತ ನಡೆಯುವ ನೈಜ ಘಟನೆಗಳು, ಮನೆಗಳಲ್ಲಿ ನಡೆಯುವ ಸಣ್ಣ ಪುಟ್ಟ ಸಂಭ್ರಮಗಳು, ಗಂಟಲುಬ್ಬಿ ಬಂದ ನೋವಿನ ಬಿಕ್ಕಳಿಕೆಗಳು, ನಮ್ಮವೇ ಆದ ಸಮಸ್ಯೆಗಳು, ಆಶಯಗಳು, ಹತಾಶೆಗಳು ಕಥಾವಸ್ತುಗಳಾಗಿ ಗಮನ ಸೆಳೆಯುತ್ತವೆ ಎಂದು ಸಾಹಿತಿ ದಾಕ್ಷಾಯಿಣಿ
ಬಿರಾದಾರ ಹೇಳಿದರು. ಬ್ಯಾಂಕರ್ಸ್ ಕಾಲೋನಿಯ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಡಾ. ಎಂ. ಎಸ್. ಮಾಗಣಗೇರಿ ಕುಟುಂಬದವರು
ಆಯೋಜಿಸಿದ ಓದುಗರ ಚಾವಡಿ ರಾಜೇಂದ್ರಕುಮಾರ ಬಿರಾದಾರ ಸಾಂಕೃತಿಕ ವೇದಿಕೆಯ ಮಾಸಿಕ ಪುಸ್ತಕ ಪರಿಚಯ ಕಾರ್ಯಕ್ರಮದಲ್ಲಿ ತಾಳಿಕೋಟಿಯ ಸವಿತಾ ಆರ್. ಇನಾಮದಾರ ಅವರ ಅರ್ಧ ನೆನಪು ಅರ್ಧ ಕನಸು ಕಥಾ ಸಂಕಲನವನ್ನು ಪರಿಚಯಿಸಿ ಅವರು ಮಾತನಾಡಿದರು. ಇಲ್ಲಿನ ಕಥೆಗಳ ಭಾಷೆ ವಿಶೇಷವಾಗಿದೆ ಉತ್ತರ ಕರ್ನಾಟಕದ ಭಾಷೆಯ ಲಯವನ್ನು ಸಮರ್ಥವಾಗಿ ಬಳಸುವುದರೊಟ್ಟಿಗೆ ಪ್ರಾದೇಶಿಕ ಅಸ್ಮಿತೆಯನ್ನು ಪ್ರತಿಷ್ಠಾಪಿಸಿ
ಸೂಕ್ಷ್ಮ ಭಾವನೆಗಳಿಗೆ ಈ ಭಾಗದ ಭಾಷೆ ಹಾಗೂ ಅದರ ನುಡಿಗಟ್ಟುಗಳು ಸಮರ್ಥವಾಗಿವೆ ಎಂಬುದನ್ನು ಸಾಕ್ಷಿಕರಿಸಿದ್ದಾರೆ.

ಮುಕ್ತವಾಗಿ ಒಲಿದಂತೆ ಉಲಿಯುವ ತನ್ನತನವಿರುವ ಈ ಭಾಷೆಯನ್ನು ಲೇಖಕರು ಕತೆಗಳಲ್ಲಿ ಅಚ್ಚುಕಟ್ಟಾಗಿ ದುಡಿಸಿಕೊಂಡಿದ್ದಾರೆ. ಇವರ ಬಹುತೇಕ ಕಥೆಗಳ ಪಾತ್ರಗಳಿಗೆ ಸಶಕ್ತ ಅಭಿವ್ಯಕ್ತಿ ಒದಗಿಬಂದಿದೆ. ಇಲ್ಲಿರುವ ಕತೆಗಳು ಯಾವುದೋ ಕಲ್ಪನೆಯ  ದಂತಗೋಪುರಗಳಲ್ಲಿ ಕುಳಿತು ಕಾಲಕ್ಷೇಪಕ್ಕಾಗಿ ಹೇಳಿಕೊಂಡ
ರಮ್ಯವಾದ ಸಂಗತಿಗಳಲ್ಲ. ಗ್ರಾಮ್ಯ ಪರಿಸರದಲ್ಲಿಯೇ ಒಡಮೂಡಿ ಆಕೃತಿ ತಾಳುವ ಈ ಕಥೆಗಳು ಹಳ್ಳಿಯ ಬದುಕಿನ ಬವಣೆ, ಛಲ, ಸೇಡು, ಅಸಹಾಯಕತೆ, ಧೈರ್ಯ ಎಲ್ಲವನ್ನೂ ತೆರೆದಿಡುತ್ತವೆ ಎಂದರು.

ಕಾರ್ಯಕ್ರಮವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಅರ್ಜುಣಗಿಯ ಕನ್ನಡ ಉಪನ್ಯಾಸಕಿಯಾದ ಡಾ. ಸವಿತಾ ಝಳಕಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಹೊಟೇಲ್ ಉದ್ಯಮಿ ಶ್ರೀ ನಾಗೇಶ್ ಶೆಟ್ಟಿ ಹಾಗೂ ಓಂ ಸಾಯಿ ಯೋಗ ಅಕಾಡೆಮಿಯ ಅಧ್ಯಕ್ಷೆ ಕೀರ್ತಿ ಮಠಪತಿ ಮಾತನಾಡಿ, ವ್ಯಾಯಾಮ, ಯೋಗ, ಧ್ಯಾನಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ದಿವ್ಯ ಔಷಧವಾದರೆ ಸಾಹಿತ್ಯ ಮತ್ತು ಓದು ಜ್ಞಾನದ ಹಸಿವನ್ನು ಹಿಂಗಿಸಿ ಸುಂದರ ವ್ಯಕ್ತಿತ್ವ
ರೂಪಿಸುವಲ್ಲಿ ಸಹಕಾರಿಯಾಗುತ್ತದೆ ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಸಾಹಿತಿ ಸುಭಾಷ್ ಯಾದವಾಡ ಮಾತನಾಡಿ ಕಥೆ ಕಟ್ಟುವುದೂ ಒಂದು ಕಲೆ, ಬದುಕಿನ ಅನುಭವಗಳ ಸುರಳಿಯನ್ನು ಬಿಚ್ಚಿ ಕಾಲ ಗರ್ಭದ ಸತ್ಯಾಸತ್ಯತೆಗಳ ಅನಾವರಣ ಮಾಡುವುದು ಕಥೆಗಳ ಮುಖ್ಯ ದ್ಯೇಹ ಎಂದರು. ವೇದಿಕೆ ಮೇಲೆ
ಚಾವಡಿ ಬಳಗದ ಅಧ್ಯಕ್ಷರಾದ ಬಿ. ಆರ್. ಬನ್ಸೋಡೆ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಕಾವ್ಯ, ಜಾಣ, ರತ್ನ ಪರೀಕ್ಷೆಗಳ ಪಠ್ಯಪುಸ್ತಕಗಳ ರಚನಾ ಸಮಿತಿ ಗೆ ಉತ್ತರ ಕರ್ನಾಟಕ ಭಾಗದ ಸದಸ್ಯರಾಗಿ ಆಯ್ಕೆಗೊಂಡ ಡಾ. ಎಸ್. ಟಿ ಮೇರವಾಡೆಯವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಓದುಗರ ಚಾವಡಿಯ ಸಂಚಾಲಕರಾದ ಶರಣು ಸಬರದ, ಡಾ.ವಿ.ಡಿ ಐಹೊಳ್ಳಿ ಡಾ. ಉಷಾ ದೇವಿ ಹಿರೇಮಠ, ಪ್ರಭಾವತಿ ದೇಸಾಯಿ, ಪ್ರೊ.ಎಂ.ಎಸ್ ಝಳಕಿ, ರಮೇಶ ಚವಾಣ್, ಸಂಗಮೇಶ ಮೇತ್ರಿ, ಡಾ. ರಾಜಕುಮಾರ ಜೊಲ್ಲೆ, ಮನು ಪತ್ತಾರ ಕಲಕೇರಿ, ಶಿವಶರಣಪ್ಪ ಶಿರೂರು, ಜಿ. ಸಿ. ಹಿರೇಮಠ್, ರಮೇಶ್ ತೇಲಿ, ಶ್ರೀಧರ ಪತ್ತಾರ, ರವೀಂದ್ರ ಝಳಕಿ, ಅಮರೇಶ ಸಾಲಕ್ಕಿ, ಸುಭಾಷಚಂದ್ರ ಕನ್ನೂರ, ಶರಣಗೌಡ ಪಾಟೀಲ್ ಮಯೂರ ತಿಳಗೂಳಕರ್, ಡಾ. ಶಶಿಧರ ಶಿರಹಟ್ಟಿ, ಸೋಮಶೇಖರ ಕುರ್ಲೆ, ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕು. ಶ್ರೀನಿಧಿ ಮಾಗಣಗೇರಿ
ಪ್ರಾರ್ಥಿಸಿದರೆ ಬಳಗದ ಸದಸ್ಯರಾದ ಬಸವರಾಜ ಕುಂಬಾರ ನಿರೂಪಿಸಿ ವಂದಿಸಿದರು.

WhatsApp Group Join Now
Telegram Group Join Now
Share This Article