ಈ ವಾರ ತೆರೆಗೆ : ಪಾಠಶಾಲಾ ಪಾಠಶಾಲಾ  ಓದು ಅಥವಾ ಓಡೋಗು…

Ravi Talawar
ಈ ವಾರ ತೆರೆಗೆ : ಪಾಠಶಾಲಾ ಪಾಠಶಾಲಾ  ಓದು ಅಥವಾ ಓಡೋಗು…
WhatsApp Group Join Now
Telegram Group Join Now
     ಕೆಲವು ವರ್ಷಗಳ ಹಿಂದೆ ಗ್ಯಾಪಲ್ಲೊಂದು ಸಿನಿಮಾ ಮಾಡಿ ನಂತರ ಓಮಿನಿ ಎಂಬ ಚಿತ್ರ ನಿರ್ದೇಶಿಸಿದ್ದ ಹೆದ್ದೂರ್ ಮಂಜುನಾಥ್ ಶೆಟ್ಟಿ ಅವರ  ‘ಪಾಠಶಾಲಾ’ ಚಿತ್ರ  ಬಿಡುಗಡೆಯಾಗಿದೆ.
     “ಎಂಎಸ್ ಸ್ಕ್ವೇರ್ ಮೂವೀಸ್  ಲಾಂಛನದಲ್ಲಿ ನಾನು ಹಾಗೂ ನನ್ನ ಪತ್ನಿ ಪ್ರೀತಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದೇವೆ‌. ಹತ್ತಕ್ಕೂ ಅಧಿಕ ಸ್ನೇಹಿತರ ಸಹ ನಿರ್ಮಾಣ ಈ ಚಿತ್ರಕ್ಕಿದೆ. ತೀರ್ಥಹಳ್ಳಿ ತಾಲ್ಲೂಕಿನಲ್ಲೇ ಹೆಚ್ಚಿನ ಚಿತ್ರೀಕರಣ ಮಾಡಿದ್ದೇವೆ. ನಲವತ್ತಕ್ಕೂ ಆಧಿಕ ಮಕ್ಕಳು ಈ ಚಿತ್ರದಲ್ಲಿ ನಟಿಸಿದ್ದಾರೆ. ಮಕ್ಕಳಿಗೆ ತರಭೇತಿ ನೀಡಿ ಆನಂತರ ಚಿತ್ರೀಕರಣ ಮಾಡಲಾಯಿತು. ತೀರ್ಥಹಳ್ಳಿ ಆಸುಪಾಸಿನ ಮಕ್ಕಳೇ ಇದರಲ್ಲಿ ನಟಿಸಿದ್ದಾರೆ. ಹಿರಿಯರಾದ ಬಾಲಾಜಿ ಮನೋಹರ್, ಸುಧಾಕರ್ ಬನ್ನಂಜೆ, ಕಿರಣ್ ನಾಯಕ್, ನಟನ ಪ್ರಶಾಂತ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. 80, 90 ರ ಕಾಲಘಟ್ಟದಲ್ಲಿ ಶಿಕ್ಷಕರ ಹಾಗೂ ಮಕ್ಕಳ ನಡುವೆ ಇದ್ದ ಸಂಬಂಧದ ಸುತ್ತಲ್ಲಿನ ಕಥಾಹಂದರವನ್ನು ಈ ಚಿತ್ರ ಹೊಂದಿದೆ. ‘ಪಾಠಶಾಲಾ’ ಚಿತ್ರಕ್ಕೆ ‘ಓದು ಅಥವಾ ಓಡೋಗು’ ಎಂಬ ಅಡಿಬರಹವಿದೆ. ಇದು ಬರೀ ಮಕ್ಕಳ ಚಿತ್ರವಲ್ಲ. ಎಲ್ಲಾ ವಯಸ್ಸಿನವರು ನೋಡಲೇಬೇಕಾದ ಚಿತ್ರ‌.  ಎಲ್ಲರೂ ನಮ್ಮ ಚಿತ್ರ ನೋಡಿ ಪ್ರೋತ್ಸಾಹ ನೀಡಿ” ಎಂಬುದು ನಿರ್ದೇಶಕ ಹೆದ್ದೂರ್ ಮಂಜುನಾಥ್ ಶೆಟ್ಟಿ ಅವರ ಮನವಿಯಾಗಿದೆ.
     ವಿಕಾಸ್ ವಸಿಷ್ಠ ಸಂಗೀತ ನಿರ್ದೇಶನ, ಜೀವನ್ ಗೌಡ ಛಾಯಾಗ್ರಹಣ ಹಾಗೂ ಉಮೇಶ್ ಆರ್ ಬಿ ಸಂಕಲನ ಈ ಚಿತ್ರಕ್ಕಿದೆ.
WhatsApp Group Join Now
Telegram Group Join Now
Share This Article