ಮನದ ಪಕ್ವತೆಗೆ ಭಗವದ್ಗೀತೆ ಓದಿ : ಲಕ್ಷ್ಮಣ ನಿರಾಣಿ

Hasiru Kranti
ಮನದ ಪಕ್ವತೆಗೆ ಭಗವದ್ಗೀತೆ ಓದಿ : ಲಕ್ಷ್ಮಣ ನಿರಾಣಿ
WhatsApp Group Join Now
Telegram Group Join Now

ರನ್ನ ಬೆಳಗಲಿ:ಜ. ೦೫.,ಮನದ ಪಕ್ವತೆಗೆ ಭಗವದ್ಗೀತೆಯನ್ನು ನಿತ್ಯವೂ ಓದಿ. ಭಗವದ್ಗೀತೆ ಭಾರತದ ಆಸ್ಮಿತೆ.ಗೀತೆಯ ಮೂಲಕ ಜಗತ್ತು ಭಾರತವನ್ನು ಗುರುತಿಸುತ್ತದೆ ಮತ್ತು ಗೌರವಿಸುತ್ತದೆ.ಗೀತೆಯಲ್ಲಿ ಧರ್ಮ,ವಿಜ್ಞಾನ,ಆಡಳಿತ, ನ್ಯಾಯ,ಎಲ್ಲವೂ ಅಡಗಿವೆ.ಸಂಸ್ಕೃತಿ ಮತ್ತು ಧರ್ಮ ಭಾರತದ ಶಕ್ತಿಯಾಗಿವೆ ಎಂದು ಕೈಗಾರಿಕೋದ್ಯಮಿ, ಬಿಳಗಿ ಸಕ್ಕರೆ ಕಾರ್ಖಾನೆಯ ಮ್ಯಾನೇಜಿಂಗ್ ಡೈರೆಕ್ಟರ್ ಲಕ್ಷ್ಮಣ ನಿರಾಣಿ ಹೇಳಿದರು.
ಪಟ್ಟಣದ ಸಿದ್ಧಾರೂಢ ಆಶ್ರಮದಲ್ಲಿ ನಡೆದ ಮಾಸಿಕ ಚಿಂತನಾಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಭಾರತದ ಧಾರ್ಮಿಕ ಪರಂಪರೆ ಬಹಳ ಉನ್ನತವಾಗಿದೆ. ಅದು ಸರಳ ಎಲ್ಲ ಸಮುದಾಯದವರನ್ನು ಒಳಗೊಳ್ಳುವ ವಿಧಾನವಾಗಿದೆ ಎಂದು ಅವರು ಹೇಳಿದರು.

ಅಧ್ಯಾಪಕಿ ಅಕ್ಕುತಾಯಿ ಕಿಚಡಿ ಮಾತನಾಡಿ,ಧರ್ಮದ ಹೆಸರಿನಲ್ಲಿ ಮೂಢನಂಬಿಕೆ ಕಂದಾಚಾರ ಪ್ರಚಾರ ಮಾಡಲಾಗುತ್ತದೆ.ಜನರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯ ಗಣ್ಯರನ್ನು ಸನ್ಮಾನಿಸಲಾಯಿತು. ಬಸವರಾಜ ಪುರಾಣಿಕ,ಧರೆಪ್ಪ ಸಾಂಗ್ಲಿಕರ.ಮಲ್ಲಿಕಾರ್ಜುನ ಹೆಗ್ಗಳಗಿ,ಗುರುರಾಜ ಖಾಸನೀಸ್,ಕಾಶಿಬಾಯಿ ಪುರಾಣಿಕ,ಸಿದ್ದರಾಮ ಜಗದಾಳ,ಅಮ್ಮಣಗಿ ಸೇರಿದಂತೆ ಇತರರಿದ್ದರು.

WhatsApp Group Join Now
Telegram Group Join Now
Share This Article