ಆರ್​ಬಿಐ ದ್ವೈಮಾಸಿಕವಾಗಿ ನಡೆಸುವ ಮಾನಿಟರಿ ಪಾಲಿಸಿ ಕಮಿಟಿ ಸಭೆ: ಜೂನ್ 5ರಂದು ಆರಂಭ

Ravi Talawar
ಆರ್​ಬಿಐ ದ್ವೈಮಾಸಿಕವಾಗಿ ನಡೆಸುವ ಮಾನಿಟರಿ ಪಾಲಿಸಿ ಕಮಿಟಿ ಸಭೆ: ಜೂನ್ 5ರಂದು ಆರಂಭ
WhatsApp Group Join Now
Telegram Group Join Now

ನವದೆಹಲಿ, ಜೂನ್ 3: ಭಾರತೀಯ ರಿಸರ್ವ್ ಬ್ಯಾಂಕ್ ದ್ವೈಮಾಸಿಕವಾಗಿ ನಡೆಸುವ ಮಾನಿಟರಿ ಪಾಲಿಸಿ ಕಮಿಟಿ ಸಭೆ  ಇದೇ ಬುಧವಾರ (ಜೂನ್ 5) ಆರಂಭವಾಗಲಿದೆ. ಎರಡು ದಿನಗಳ ಸಭೆ ಬಳಿಕ ಜೂನ್ 7ರಂದು ಸಭೆಯ ನಿರ್ಣಯಗಳನ್ನು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್  ಪ್ರಕಟಿಸಲಿದ್ದಾರೆ.

ಈ ಸಭೆಯಲ್ಲಿ ಎಲ್ಲರ ಚಿತ್ತ ಹೆಚ್ಚಾಗಿ ಬ್ಯಾಂಕ್ ಬಡ್ಡಿದರ ವಿಚಾರದ ಬಗ್ಗೆ ನೆಟ್ಟಿರುತ್ತದೆ. ಜೊತೆಗೆ, ಜಿಡಿಪಿ ಮತ್ತು ಹಣದುಬ್ಬರದ ಬಗ್ಗೆ ಆರ್​ಬಿಐ ಮಾಡುವ ಅಂದಾಜು ಕುರಿತೂ ಕುತೂಹಲ ಇರುತ್ತದೆ.

ಕಳೆದ ಬಾರಿಯ ಎಂಪಿಸಿ ಸಭೆ ಏಪ್ರಿಲ್ ತಿಂಗಳಲ್ಲಿ ನಡೆದಿತ್ತು. ಈ ಹಣಕಾಸು ವರ್ಷದಲ್ಲಿ ಇದು ಎರಡನೇ ಸಭೆಯಾಗಲಿದೆ. ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸೇರಿದಂತೆ ಆರು ಜನರು ಮಾನಿಟರಿ ಪಾಲಿಸಿ ಕಮಿಟಿಯಲ್ಲಿ ಇದ್ದಾರೆ. ಇವರ ಪೈಕಿ ಮೂವರು ಆರ್​ಬಿಐಯೊಳಗೆಯೇ ಇರುವ ಅಧಿಕಾರಿಗಳಾದರೆ ಇನ್ನೂ ಮೂವರು ಹೊರಗಿನ ಸದಸ್ಯರಾಗಿರುತ್ತಾರೆ. ನಿಯಮಗಳ ಪ್ರಕಾರ ಆರ್​ಬಿಐನ ಎಂಪಿಸಿ ಒಂದು ವರ್ಷದಲ್ಲಿ ಕನಿಷ್ಠ ನಾಲ್ಕು ಬಾರಿ ಸಭೆ ನಡೆಸಬೇಕು. ಸಾಮಾನ್ಯವಾಗಿ ಎರಡು ತಿಂಗಳಿಗೊಮ್ಮೆ ಎಂಪಿಸಿ ಸಭೆ ನಡೆಯುತ್ತದೆ. ಅಂದರೆ ವರ್ಷದಲ್ಲಿ ಆರು ಬಾರಿ ಸಭೆ ನಡೆಯುತ್ತಿದೆ.

ಏಪ್ರಿಲ್ 5ರಂದು ಆರ್​ಬಿಐ ಬಡ್ಡಿದರವನ್ನು ಶೇ. 6.50ರಲ್ಲಿ ಮುಂದುವರಿಸಲು ನಿರ್ಧರಿಸಿದೆ. ಎಂಪಿಸಿಯಲ್ಲಿರುವ ಆರು ಸದಸ್ಯರಲ್ಲಿ ಐವರು ಬಡ್ಡಿದರ ಯಥಾಸ್ಥಿತಿ ಉಳಿಸುವ ಪರವಾಗಿ ಮತ ಹಾಕಿದ್ದಾರೆ. ಒಬ್ಬರಿಂದ ಮಾತ್ರವೇ ವಿರುದ್ಧ ಮತ ಬಂದಿದೆ. ಈ ಬಾರಿಯೂ 5:1 ಮತಗಳ ಬೆಂಬಲದಲ್ಲಿ ಬಡ್ಡಿದರ ಮುಂದುವರಿಸುವ ನಿರ್ಧಾರ ಬರಬಹುದು.

ಭಾರತದಲ್ಲಿ ಹಣದುಬ್ಬರ ಇನ್ನೂ ಕೂಡ ಶೇ. 4ಕ್ಕಿಂತ ಮೇಲ್ಮಟ್ಟದಲ್ಲೇ ಉಳಿದಿದೆ. ಹೀಗಾಗಿ, ಸದ್ಯಕ್ಕೆ ಬಡ್ಡಿದರ ಇಳಿಸುವ ಮನಸ್ಸಿನಲ್ಲಿ ಆರ್​ಬಿಐ ಇಲ್ಲ. ತಜ್ಞರ ಪ್ರಕಾರ ಡಿಸೆಂಬರ್​ವರೆಗೂ ರೆಪೋ ದರವನ್ನು ಕಡಿತಗೊಳಿಸುವ ಸಾಧ್ಯತೆ ಬಹಳ ಕಡಿಮೆ. 2024ರ ಜನವರಿ ಬಳಿಕ ಬಡ್ಡಿದರ ಕಡಿಮೆ ಮಾಡಬಹುದು.

WhatsApp Group Join Now
Telegram Group Join Now
Share This Article