ರೆಪೋ ದರ ಇಳಿಸಿದ ಆರ್‌ಬಿಐ

Hasiru Kranti
ರೆಪೋ ದರ ಇಳಿಸಿದ ಆರ್‌ಬಿಐ
WhatsApp Group Join Now
Telegram Group Join Now

ಮುಂಬೈ(ಮಹಾರಾಷ್ಟ್ರ): ರೂಪಾಯಿ ಮೌಲ್ಯ ತೀವ್ರವಾಗಿ ಕುಸಿಯುತ್ತಿರುವ ನಡುವೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದೇಶದ ಆರ್ಥಿಕ ಬೆಳವಣಿಗೆಯನ್ನು ಬಲಪಡಿಸುವ ಉದ್ದೇಶದಿಂದ ತತ್​ಕ್ಷಣವೇ ಜಾರಿಗೆ ಬರುವಂತೆ ಆರ್​ಬಿಐ ತನ್ನ ರಿಪೋ ದರವನ್ನು ಶೇ. 5.5ರಿಂದ ಶೇ. 5.25ಕ್ಕೆ ಇಳಿಸಿದೆ.  ಈ ಮೂಲಕ ವಸತಿ, ವಾಹನ ಮತ್ತು ವಾಣಿಜ್ಯ ಸಾಲಗಳು ಅಗ್ಗವಾಗುವ ನಿರೀಕ್ಷೆ ಮೂಡಿದೆ.

ಬುಧವಾರದಿಂದ ನಡೆದ ಎಂಪಿಸಿ ಸಭೆಯ ನಿರ್ಧಾರಗಳನ್ನು ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಇಂದು ಶುಕ್ರವಾರ ಪ್ರಕಟಿಸಿದ್ದಾರೆ. ಪ್ರಸಕ್ತ ಹಣಕಾಸು ವರ್ಷದ ಐದನೇ ದ್ವೈಮಾಸಿಕ ಹಣಕಾಸು ನೀತಿಯನ್ನು ಘೋಷಿಸಿದ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು, ಹಣಕಾಸು ನೀತಿ ಸಮಿತಿ ಅಲ್ಪಾವಧಿಯ ಸಾಲ ದರ ಅಥವಾ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಿಂದ ಶೇ 5.25ಕ್ಕೆ ಇಳಿಸಲು ಸರ್ವಾನುಮತದಿಂದ ನಿರ್ಧರಿಸಿದೆ ಎಂದು ಹೇಳಿದರು.

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಮುಖ್ಯ ಚಿಲ್ಲರೆ ಹಣದುಬ್ಬರವು ಕಳೆದ ಮೂರು ತಿಂಗಳುಗಳಿಂದ ಸರ್ಕಾರ ನಿರೀಕ್ಷಿಸಿದ್ದಕ್ಕಿಂದ ಕಡಿಮೆ ಇರುವ ಹಿನ್ನೆಲೆಯಲ್ಲಿ ದರ ಕಡಿತ ಮಾಡಲಾಗಿದೆ. ಈ ಹೊಸ ದರಗಳು ತತ್​ಕ್ಷಣದಿಂದಲೇ ಜಾರಿಗೆ ಬರುತ್ತವೆ ಎಂದೂ ಹೇಳಿದ್ದಾರೆ.

ಭಾರತದ ಚಿಲ್ಲರೆ ಹಣದುಬ್ಬರ ಅಕ್ಟೋಬರ್ 2025ರಲ್ಲಿ ಐತಿಹಾಸಿಕ ಕನಿಷ್ಠ ಶೇ.0.25ಕ್ಕೆ ಇಳಿದಿದೆ. ದೇಶದಲ್ಲಿ ಹಣದುಬ್ಬರವು ಆರ್​ಬಿಐ ನಿರೀಕ್ಷಿಸುದದಕ್ಕಿಂತಲೂ ಕಡಿಮೆ ಆಗಿದೆ ಇದು ಗ್ರಾಹಕ ಬೆಲೆ ಸೂಚ್ಯಂಕ  ಸರಣಿಯನ್ನು ಪರಿಚಯಿಸಿದ ನಂತರದ ಅತ್ಯಂತ ಕಡಿಮೆ ಮಟ್ಟವನ್ನು ಸೂಚಿಸುತ್ತದೆ. ಇದಲ್ಲದೆ, ಎರಡನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ ನಿರೀಕ್ಷೆಗಿಂತ ಉತ್ತಮವಾದ ಶೇ 8.2ರಷ್ಟು ಬೆಳವಣಿಗೆ ಕಂಡಿದೆ.

ಈ ವಾರದ ಆರಂಭದಲ್ಲಿ ರೂಪಾಯಿ ಮೌಲ್ಯ ಸಾರ್ವತ್ರಿಕ ಕನಿಷ್ಠ ಮಟ್ಟಕ್ಕೆ ಇಳಿದಿತ್ತು. ಅಮೆರಿಕದ ಡಾಲರ್ ಎದುರು 90 ರೂಪಾಯಿಗೆ ಇಳಿದಿದ್ದು, ಆಮದು ದುಬಾರಿಯಾಗಿದೆ. ಹೀಗಾಗಿ, ದೇಶದಲ್ಲಿ ಹಣದುಬ್ಬರ ಏರಿಕೆಯ ಭಯ ಹೆಚ್ಚಿಸಿದೆ. ಈ ವರ್ಷ ಇಲ್ಲಿಯವರೆಗೆ ರೂಪಾಯಿ ಮೌಲ್ಯ ಸುಮಾರು ಶೇ 5ದಷ್ಟು ಕುಸಿದಿದೆ.

ಪ್ರಸಕ್ತ ಹಣಕಾಸು ವರ್ಷದ ಬೆಳವಣಿಗೆಯ ಮುನ್ಸೂಚನೆಯನ್ನು ಆರ್‌ಬಿಐ ಶೇ.6.8ರಿಂದ ಶೇ.7.3ಕ್ಕೆ ಹೆಚ್ಚಿಸಿದೆ.

CPI ಆಧಾರಿತ ಚಿಲ್ಲರೆ ಹಣದುಬ್ಬರ ಎರಡೂ ಕಡೆಗಳಲ್ಲಿ ಶೇ.2ರ ಅಂತರದೊಂದಿಗೆ ಶೇ.4 ರಷ್ಟಿರುವಂತೆ ನೋಡಿಕೊಳ್ಳುವ ಕಾರ್ಯವನ್ನು ಸರ್ಕಾರವು ಕೇಂದ್ರ ಬ್ಯಾಂಕ್‌ಗೆ ವಹಿಸಿದೆ.

ಆರ್​ಬಿಐ ಎಂಪಿಸಿ ಡಿಸೆಂಬರ್ ಸಭೆಯಲ್ಲಿ ಪ್ರಮುಖ ನಿರ್ಧಾರಗಳು

  • ರಿಪೋದರ 25 ಮೂಲಾಂಕಗಳು ಇಳಿಕೆ. ಶೇ. 5.50ರಿಂದ ಶೇ. 5.25ಕ್ಕೆ ಇಳಿಕೆ.
  • ಜಿಡಿಪಿ ದರ 2025-26ರಲ್ಲಿ ಶೇ. 7.3ರಷ್ಟು ಬೆಳೆಯಬಹುದು
  • ಹಣದುಬ್ಬರ 2025-26ರಲ್ಲಿ ಶೇ. 2ಕ್ಕೆ ಸೀಮಿತಗೊಳ್ಳಬಹುದು.
  • ಆರ್​​ಬಿಐ ಪಾಲಿಸಿ ನಿಲುವು ಅಥವಾ ಪಾಲಿಸಿ ಸ್ಟಾನ್ಸ್ ನ್ಯೂಟ್ರಲ್ ಆಗಿರುತ್ತದೆ
  • ಭಾರತದ ಫಾರೆಕ್ಸ್ ರಿಸರ್ವ್ ನಿಧಿ 686 ಬಿಲಿಯನ್ ಡಾಲರ್

 

WhatsApp Group Join Now
Telegram Group Join Now
Share This Article