ಗ್ರಾಹಕರಿಗೆ ಅನ್​ಕ್ಲೇಮ್ಡ್ ಹಣ ಮರಳಿಸಲು ಆರ್​ಬಿಐ ಅಭಿಯಾನ

Hasiru Kranti
ಗ್ರಾಹಕರಿಗೆ ಅನ್​ಕ್ಲೇಮ್ಡ್ ಹಣ ಮರಳಿಸಲು ಆರ್​ಬಿಐ ಅಭಿಯಾನ
WhatsApp Group Join Now
Telegram Group Join Now

ಮಂಗಳೂರು, ಡಿ., 25:- ವಿವಿಧ ಬ್ಯಾಂಕಗಲ್ಲಿ ಕ್ಲೇಮ್‌ ಆಗೆ ಸಾವಿರಾರೂ ಕೋಟಿ ಹಣ ಬಿದ್ದಿದೆ. ಈ ಹಣದ ನಿಜವಾದ ಹಕ್ಕುದಾರರನ್ನು ಗುರುತಿಸಿ ಹಿಂದುರಿಗಿಸಲು ಆರ್.‌ಬಿ.ಐ. ‘ನಿಮ್ಮ ಹಣ ನಿಮ್ಮ ಹಕ್ಕು’ ಎಂಬ ಬೃಹತ್‌ ಅಭಿಯಾನವನ್ನು ಆರಂಭಿಸಿದೆ.

ದೇಶದ ವಿವಿಧ ಬ್ಯಾಂಕುಗಳಲ್ಲಿ 75,000 ಕೋಟಿ ರೂನಷ್ಟು ಮೊತ್ತದ ಹಣ. ರಾಜ್ಯದಲ್ಲಿ  3,400 ಕೋಟಿ ರೂ ಹಣ ಕ್ಲೇಮ್‌ ಆಗದೆ ಉಳಿದಿದೆ ಎನ್ನಲಾಗಿದೆ. ಇದು ಹತ್ತು ವರ್ಷಕ್ಕೂ ಹೆಚ್ಚು ಸಮಯದಿಂದ ಯಾರೂ ಕ್ಲೇಮ್‌ ಮಾಡಿರುವುದಿಲ್ಲ.

ಹತ್ತಕ್ಕೂ ಹೆಚ್ಚು ವರ್ಷಗಳಿಂದ ನಿಷ್ಕ್ರಿಯವಾಗಿರುವ ಬ್ಯಾಂಕ್ ಖಾತೆಗಳು ಮತ್ತು ಠೇವಣಿಗಳನ್ನು ವಿಶೇಷ ನಿಧಿಗೆ ವರ್ಗಾವಣೆ ಮಾಡಲಾಗುತ್ತದೆ.  ಹೀಗೆ ಬ್ಯಾಂಕುಗಳಲ್ಲಿ ಕ್ಲೇಮ್ ಆಗದೇ ಉಳಿದಿರುವ ಹಣವನ್ನು ಖಾತೆದಾರರಿಗೆ ಅಥವಾ ವಾರಸುದಾರರಿಗೆ ತಲುಪಿಸಲು ಆರ್​ಬಿಐ ಬೃಹತ್ ಅಭಿಯಾನವನ್ನೇ ಆರಂಭಿಸಿದೆ. ಮೂರು ತಿಂಗಳ ಹಿಂದೆ ಆರಂಭವಾದ ಈ ‘ನಿಮ್ಮ ಹಣ ನಿಮ್ಮ ಹಕ್ಕು’ ಅಭಿಯಾನ ಡಿಸೆಂಬರ್ 31ರವರೆಗೂ ಇರಲಿದೆ. ಈ ಅಕೌಂಟ್​ಗಳ ಖಾತೆದಾರರನ್ನು ಗುರುತಿಸಿ, ಅವರು ಜೀವಂತ ಇದ್ದರೆ ಖಾತೆ ಸಕ್ರಿಯಗೊಳಿಸುವುದೋ ಅಥವಾ ಹಣ ಮರಳಿಸುವುದೋ ಮಾಡಲಾಗುತ್ತದೆ. ಅಥವಾ ಜೀವಂತ ಇಲ್ಲದಿದ್ದರೆ ವಾರಸುದಾರರಿಗೆ ಹಣ ಮರಳಿಸುವ ಪ್ರಯತ್ನ ಮಾಡಲಾಗುತ್ತಿದೆ.

https://x.com/ani_digital/status/1710149831656616353

 

ವಾರಸುದಾರರು ಹಣ ಕ್ಲೇಮ್ ಮಾಡುವುದು ಹೇಗೆ?

ಆರ್​ಬಿಐ ಪ್ರಕಟಿಸಿದ ಮಾಹಿತಿ ಪ್ರಕಾರ, ಅನ್​ಕ್ಲೇಮ್ಡ್ ಹಣದ ಖಾತೆಗಳು ಯಾವುವು ಎಂದು ವೀಕ್ಷಿಸಲು ಪ್ರತ್ಯೇಕ ಪೋರ್ಟಲ್ ರಚಿಸಲಾಗಿದ್ದು  udgam.rbi.org.in/  ಇಲ್ಲಿಗೆ ಹೋಗಿ ಖಾತೆದಾರ ಹೆಸರು, ಬ್ಯಾಂಕನ್ನು ಆಯ್ಕೆ ಮಾಡಿಕೊಂಡು, ಪ್ಯಾನ್ ಅಥವಾ ವೋಟರ್ ಐಡಿ, ಡಿಎಲ್, ಪಾಸ್ಪೋರ್ಟ್ ನಂಬರ್​ನಿಂದ ಸರ್ಚ್ ಮಾಡಿ ನಿಮ್ಮದೋ ಅಥವಾ ಪೋಷಕರದ್ದೋ ಅನ್​ಕ್ಲೇಮ್ಡ್ ಡೆಪಾಸಿಟ್ ಇದ್ದರೆ ಪತ್ತೆ ಮಾಡಬಹುದಾಗಿದೆ. ಅಥವಾ, ಕ್ಲೇಮ್ ಆಗದೇ ಯಾವುದಾದರೂ ಖಾತೆಗಳು ಇರುವುದು ಗೊತ್ತಾದರೆ, ನೀವೇ ಖುದ್ದಾಗಿ ಆ ಬ್ಯಾಂಕ್ ಗೆ ಹೋಗಿ ಕೆವೈಸಿ ದಾಖಲೆಗಳನ್ನು ಸಲ್ಲಿಸಿ ಹಣವನ್ನು ಮರಳಿ ಪಡೆಯಬಹುದು.

ಕರ್ನಾಟಕದ ವಿವಿಧ ಬ್ಯಾಂಕುಗಳಲ್ಲಿ ಹತ್ತಕ್ಕೂ ಹೆಚ್ಚು ವರ್ಷಗಳಿಂದ ಕ್ಲೇಮ್ ಆಗದೇ ಉಳಿದಿರುವ ಹಣ 3,400 ಕೋಟಿ ರೂನಷ್ಟಿದೆಯಂತೆ. ಆರ್​ಬಿಐ ಬೆಂಗಳೂರು ಪ್ರಾದೇಶಿಕ ಕಚೇರಿಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಅರುಣ್ ಕುಮಾರ್ ಅವರು ಈ ಮಾಹಿತಿಯನ್ನು ನೀಡಿದ್ದಾರೆ. ಜಿಲ್ಲಾ ಸಮಾಲೋಚನ ಸಮಿತಿ (ಡಿಸಿಸಿ) ಮತ್ತು ಜಿಲ್ಲಾ ಮಟ್ಟದ ಪರಾಮರ್ಶೆ ಸಮಿತಿ ಸಭೆಯಲ್ಲಿ ಆರ್​ಬಿಐ ಅಧಿಕಾರಿ ಈ ಮಾಹಿತಿ ಹಂಚಿಕೊಂಡಿದ್ದಾರೆ.

ಹತ್ತಕ್ಕೂ ಹೆಚ್ಚು ವರ್ಷಗಳಿಂದ ಬ್ಯಾಂಕ್ ಖಾತೆಗಳು, ಡೆಪಾಸಿಟ್ ಪ್ಲಾನ್​ಗಳು ಬಳಕೆ ಇಲ್ಲದೇ ನಿಷ್ಕ್ರಿಯವಾಗಿದ್ದರೆ ಅದನ್ನು ಆರ್​ಬಿಐನ ಠೇವಣಿದಾರ ಶಿಕ್ಷಣ ಮತ್ತು ಜಾಗೃತಿ ನಿಧಿ (ಡಿಇಎಎಫ್) ಎನ್ನುವ ವಿಶೇಷ ನಿಧಿಗೆ ವರ್ಗಾವಣೆ ಮಾಡಲಾಗುತ್ತದೆ. ರಾಷ್ಟ್ರಾದ್ಯಂತ ಎಲ್ಲಾ ಬ್ಯಾಂಕುಗಳ ನಿಷ್ಕ್ರಿಯ ಅಕೌಂಟ್​ಗಳಿಂದ ಆರ್​ಬಿಐನ ಡಿಇಎಎಫ್ ಫಂಡ್​ಗೆ ವರ್ಗಾವಣೆ ಆಗಿರುವುದು ಒಟ್ಟು ಮೊತ್ತ ಸುಮಾರು 75,000 ಕೋಟಿ ರೂ ಆಸುಪಾಸು ಇದೆ. ಈ ಪೈಕಿ ಕರ್ನಾಟಕದ ಬ್ಯಾಂಕುಗಳ ಠೇವಣಿದಾರರ ಅನ್​ಕ್ಲೇಮ್ಡ್ ಡೆಪಾಸಿಟ್​ಗಳ ಮೊತ್ತವೇ 3,400 ಕೋಟಿ ರೂ ಇದೆ.

ಸಮಾಧಾನದ ಸಂಗತಿ ಎಂದರೆ, ಕ್ಲೇಮ್ ಆಗದ ಶೇ. 80ರಷ್ಟು ಅಕೌಂಟ್​ಗಳಲ್ಲಿ ಇರುವ ಹಣ 10,000 ರೂಗಿಂತ ಕಡಿಮೆ. ಹಲವು ದಶಕಗಳ ಹಿಂದೆಯೇ ಇವು ನಿಷ್ಕ್ರಿಯಗೊಂಡಿವೆ. ಮೊಬೈಲ್ ನಂಬರ್ ಅಪ್​ಡೇಟ್ ಆಗದೇ ಇರುವುದು, ಕೆವೈಸಿ ಅಪ್​ಡೇಟ್ ಆಗದಿರುವುದು, ಖಾತೆದಾರರು ಜೀವಂತ ಇಲ್ಲದಿರುವುದು, ಇತ್ಯಾದಿ ಕಾರಣಕ್ಕೆ ಅಕೌಂಟ್​ಗಳು ಇನಾಪರೇಟಿವ್ ಆಗಿವೆ.

 

https://x.com/hashtag/UnclaimedDeposits?src=hashtag_click

 

 

 

WhatsApp Group Join Now
Telegram Group Join Now
Share This Article