ಮುಂಬೈ: ನೂತನ ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದ ಆರ್‌ಬಿಐ ಸುಮಾರು ಐದು ವರ್ಷಗಳಲ್ಲಿ ಮೊದಲ ಬಾರಿಗೆ ಬಡ್ಡಿದರ ಕಡಿತಗೊಳಿಸಿದೆ. ಮಂದಗತಿಯ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಆರ್ ಬಿಐ ಈ ಕ್ರಮ ಕೈಗೊಂಡಿದೆ.
ಮೇ 2020ರಲ್ಲಿ ಕೊನೆ ಬಾರಿಗೆ ರೆಪೋರೇಟ್ ಕಡಿತದ ನಂತರ, ಇದೇ ಮೊದಲ ಬಾರಿಗೆ 25 ಬೇಸಿಸ್ ಪಾಯಿಂಟ್‌ಗಳನ್ನು ಕಡಿತಗೊಳಿಸಲಾಗಿದೆ. ಫೆಬ್ರವರಿ 2023ರಲ್ಲಿ 25 ಬೇಸಿಸ್ ಪಾಯಿಂಟ್ ಏರಿಕೆಯೊಂದಿಗೆ ಶೇಕಡಾ 6.5ಕ್ಕೆ ಹೆಚ್ಚಿಸಲಾಗಿತ್ತು.
ವಿತ್ತೀಯ ನೀತಿ ಸಮಿತಿ MPC ಸರ್ವಾನುಮತದಿಂದ ರೆಪೋದರವನ್ನು 25 ಬೇಸಿಸ್ ಪಾಯಿಂಟ್‌ಗಳು ಎಂದರೆ, ಶೇ.6.50 ರಿಂದ 6.25 ಶೇಕಡಾಕ್ಕೆ ಇಳಿಸಲು ನಿರ್ಧರಿಸಿದೆ ಎಂದು ಮಲ್ಹೋತ್ರಾ ಪ್ರಕಟಿಸಿದರು.
ಸತತ ಆರು ದರ ಏರಿಕೆಗಳ ನಂತರ ಏಪ್ರಿಲ್ 2023 ರಲ್ಲಿ ದರ ಹೆಚ್ಚಳದ ಚಕ್ರಕ್ಕೆ ವಿರಾಮ ನೀಡಲಾಗಿತ್ತು.ಮೇ 2022 ರಿಂದ ಒಟ್ಟು 250 ಬೇಸಿಸ್ ಪಾಯಿಂಟ್‌ಗಳಷ್ಟು ಏರಿಕೆ ಮಾಡಲಾಗಿತ್ತು. ಫೆಬ್ರವರಿ 2023 ರಲ್ಲಿ ಕೊನೆಯ ದರ ಏರಿಕೆಯನ್ನು RBI ಮಾಡಿತ್ತು.
ಕೇಂದ್ರ ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯಿತಿ ಸೇರಿದಂತೆ ಹಲವು ಕ್ರಮಗಳನ್ನು ಪ್ರಕಟಿಸಿರುವುದರಿಂದ ಆರ್‌ಬಿಐ ದರ ಕಡಿತಗೊಳಿಸುವುದು ನಿಶ್ಷಿತ ಎಂಬ ಸುಳಿವು ಸಿಕ್ಕಿತ್ತು. ಆ ನಿರೀಕ್ಷೆ ಈಗ ನಿಜವಾಗಿದೆ.