ಬಳ್ಳಾರಿ. ಮೇ 16: ಪ್ರತಿಭಾ ಪುರಸ್ಕಾರ ನೀಡುವುದರಿಂದ ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಹೆಚ್ಚಾಗುತ್ತದೆ. ಇಂತ ಆಸಕ್ತಿಯಿರುವ ಮಕ್ಕಳನ್ನು ಪ್ರೋತ್ಸಾಹಿಸಿದಲ್ಲಿ ಅವರ ಮುಂದಿನ ಭವಿಷ್ಯ ಉತ್ತಮವಾಗಿ ರೂಪುಗೊಳ್ಳಲು ಸಹಕಾರಿಯಾಗುತ್ತದೆ ಎಂದು ರೇಯಾನ್ ಶಾಲೆಯ ಛೇರ್ಮನ್ ಕೆ.ಎಮ್. ಅಬ್ದುಲ್ ಅಜೀಜ್ ಅಭಿಪ್ರಾಯಪಟ್ಟರು.
ಅವರು ಇಂದು ನಗರದ ರೂಪನಗುಡಿ ರಸ್ತೆಯ ರೇಯಾನ್ ಶಾಲೆಯಲ್ಲಿ ಸಂಸದ ನಾಸೀರ್ ಹುಸೇನ್ ಅಕಾಡೆಮಿವತಿಯಿಂದ ಆಯೋಜಿಸಲಾಗಿದ್ದ ಮೂರನೇ ವರ್ಷದ ಪ್ರತಿಭಾ ಪುರಸ್ಕಾರ ಸ್ಕಾಲರ್ ಶಿಪ್ ವನ್ನು ಅಧ್ಯಕ್ಷರಾದ ಹುಮಾಯೂನ್ ಖಾನ್ ಸಮ್ಮುಖದಲ್ಲಿ ಶಾಲೆಯ ಮುಖ್ಯಸ್ಥರಾದ ಕೆ .ಎಮ್. ಅಬ್ದುಲ್ ಅಜೀಜ್ ಅವರ ನೇತೃತ್ವದಲ್ಲಿ ವಿತರಿಸಲಾಯಿತು .
ಈ ಸ್ಕಾಲರ್ ಶಿಪ್ ಪಡೆಯಲು ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ಸುಮಾರು 300 ಜನ ವಿದ್ಯಾರ್ಥಿಗಳ ಬುದ್ದಿಮತ್ತೆಯ ಪರೀಕ್ಷೆಯನ್ನು ನಡೆಸಿ ಅದರಲ್ಲಿ ಮೊದಲನೇ ಪೈಜ್ ಗಾಗಿ 7 ಸಾವಿರ ರೂ ಎರಡನೇ ಬಹುಮಾನ ಹತ್ತು ಜನರಿಗೆ 5 ಸಾವಿರ ರೂ 3ನೆ ಬಹುಮಾನ ಹತ್ತು ಜನ 3ಸಾವಿರ ರೂ ಒಟ್ಟು 30 ಜನರಿಗೆ ಒಂದುಒಂದು ಲಕ್ಷ ಐವತ್ತು ಸಾವಿರ ರೂಪಾಯಿಗಳು ಮೊತ್ತದಲ್ಲಿ ಪ್ರೈಜ್ ನೀಡಲಾಯಿತು . ಈ ಮೊತ್ತವನ್ನು ರಾಜ್ಯಸಭಾ ಸದಸ್ಯರಾದ ನಾಸೀರ್ ಹುಸೇನ್ ಅವರ ಹೆಸರಿನಲ್ಲಿ ಶಾಲೆಯಿಂದ 1ಲಕ್ಷ ನೀಡಲಾಗುತ್ತಿದೆ ಹಾಗೂ ನಗರ ಶಾಸಕ ಭರತ್ ರೆಡ್ಡಿ ಹೆಸರಿನಲ್ಲಿ 50ಸಾವಿರ ರೂಪಾಯಿಗಳು ನೀಡಲಾಗಿದೆ ಮುಂದಿನ ದಿನಗಳಲ್ಲಿ ನಮ್ಮ ಶಾಲೆಯವತಿಯಿಂದ ಮಕ್ಕಳಿಗೆ ಮುಂದಿನ ಭವಿಷ್ಯಕ್ಕೆ ಅನುಕೂಲವಾಗುವಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.ಎಂದರು
ಶಾಲೆಯು ಜೂನ್ ಮೊದಲನೇ ವಾರದಿಂದ ತರಗತಿಗಳು ಆರಂಭವಾಗಲಿದ್ದು ತಮ್ಮ ಮಕ್ಕಳ ಪ್ರವೇಶಪಡೆಯಬಹುದಾಗಿದೆ ಎಂದರು. ಸಂದರ್ಭದಲ್ಲಿ ಮಾಜಿ ವಕ್ಷ ಬೋರ್ಡ್ ಅಧ್ಯಕ್ಷರಾದ ಹುಮಾಯೂನ್ ಖಾನ್,, ರಾಜ್ಯ ವಾಖ್ಫ್ ಬೊರ್ಡ್ ಮಾಜಿ ಅಧ್ಯಕ್ಷ ಭಂ ಭಂ ದಾದಾ. ಮುಖಂಡರಾದ ಯುನುಸ್ ಸಾಬ್, ಕಣೇಕಲ್ ಅಬ್ದುಲ್, ರಫೀಕ್ ಫಾರಾಜ್ ಸೇರಿದಂತೆ ಶಾಲೆಯ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳ ಪೋಷಕರಿದ್ದರು.