ಬಳ್ಳಾರಿ. ನ. 17: ಇತ್ತೀಚೆಗೆ ವಿಶಾಖಪಟ್ಟಣನಲ್ಲಿ ಕೆನರಾ ಬ್ಯಾಂಕ್ ಆಫ಼ೀಸರ್ಸ್ ಆಸೋಸಿಯೇಷನ್ ೨೦ನೇ ರಾಸ್ಟ್ರಿಯ ತ್ರೈವಾರ್ಶೀಕ ಸಮ್ಮೇಳನವು ಅತ್ಯಂತ ಭವ್ಯವಾಗಿ ಜರುಗಿತು. ಕೆನರಾ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯಕಾರ್ಯನಿರ್ವಾಣಾದೀಕಾರಿಗಳಾದ ಕೆ. ಸತ್ಯನಾರಯಣ ರಾಜು ಅವರು ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂಧರ್ಭದಲ್ಲಿ ಕೆ. ರವಿಕುಮಾರ ಅವರನ್ನು ಮೂರನೇ ಬಾರಿಗೆ ರಾಷ್ಟ್ರೀಯ ಜನರಲ್ ಸೆಕರಟ್ರಿಯಾಗಿ ಆಯ್ಕೆ ಮಾಡಲಾಗಿದ್ದು ಅವರ ನೇತೃತ್ವದಲ್ಲಿ ನಮ್ಮ ಬಳ್ಳಾರಿ ವಲಯದಿಂದ ಪ್ರವೀಣ್ ಕುಮಾರ್ ಅವರನ್ನು ಬಳ್ಳಾರಿ ವಲಯದ ಪ್ರಾದೇಶಿಕ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನೂತನವಾಗಿ ಆಯ್ಕೆಗೊಂಡ ಈ ಇಬ್ಬರು ಪದಾಧಿಕಾರಿಗಳನ್ನು ಕೆನರಾ ಬ್ಯಾಂಕ್ ಆಫ಼ೀಸರ್ಸ್ ಆಸೋಸಿಯೇಷನ್ ಬಳ್ಳಾರಿ ವತಿಯಿಂದ ಅಭಿನಂದಿಸಲಾಯಿತು.


