ಬೈಲಹೊಂಗಲ: ನಗರದ ಎಚ್ ವ್ಹಿ ಕೌಜಲಗಿ ಕಾನೂನು ಮಹಾವಿದ್ಯಾಲಯದಲ್ಲಿ ಪಠ್ಯೇತರ ಚಟುವಟಿಕೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಜರುಗಿತು, ಉದ್ಘಾಟಕರಾಗಿ ಆಗಮಿಸಿದ ಹಿರಿಯ ದಿವಾಣಿ ನ್ಯಾಯಾಧೀಶರಾದ ರವಿ ಚೌವ್ಹಾಣ್ ಅವರು ವಕೀಲ ವೃತ್ತಿಯ ಶ್ರೇಷ್ಠತೆ, ವಕೀಲ ವೃತ್ತಿಯನ್ನು ಹೇಗೆ ಯಶಸ್ವಿಯಾಗಿ ಕಲಿಯಬೇಕು, ಭಾಷಾ ಕೌಶಲ್ಯ ಸುಧಾರಿಸಲು ಹಲವು ವಿಷಯಗಳ ಕುರಿತು ತಿಳಿಸಿ, ಆಧುನಿಕ ತಂತ್ರಜ್ಞಾನಕ್ಕೆ ಅನುಗುಣವಾಗಿ ತಮ್ಮ ಅಭ್ಯಾಸ ಇರಬೇಕು ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಧಾನ ದಿವಾಣಿ ನ್ಯಾಯಾಧೀಶರಾದ ಶ್ರೀಮತಿ ರೋಹಿಣಿ ಬಸಾಪುರ ಅವರು ಪುಸ್ತಕದ ಜ್ಞಾನ ಇದ್ದರೆ ಸಾಲದು ಪುಸ್ತಕದ ಜೊತೆಗೆ ಪಠ್ಯೇತರ ಕೌಶಲ್ಯಗಳು ಕೂಡ ಅವಶ್ಯವಾಗಿವೆ, ಬರಿ ಜ್ಞಾನ ಇದ್ದರೆ ಮಾತ್ರ ಶ್ರೇಷ್ಠ ವಕೀಲನಾಗಲಾರ ಆ ಜ್ಞಾನದ ಜೊತೆಗೆ ಉತ್ತಮ ಕೌಶಲ್ಯಗಳನ್ನು ಹೊಂದಿದ್ದರೆ ಒಳ್ಳೆಯ ವಕೀಲನಾಗಿ ಸೇವೆ ಮಾಡಬಹುದು ಎಂದರು, ಹೆಚ್ಚುವರಿ ದಿವಾಣಿ ನ್ಯಾಯಾಧೀಶರಾದ ಬಸವರಾಜ ನಾಯಕ ಮಾತನಾಡಿ ವಿದ್ಯಾರ್ಥಿ ಜೀವನ ಬಂಗಾರದ ಜೀವನ ನಿರಂತರ ಕಲಿಕೆ ವಕೀಲ ವೃತ್ತಿಯನ್ನು ಶ್ರೇಷ್ಠ ಗೊಳಿಸುತ್ತದೆ ವಕೀಲನಾದವನು ನಿರಂತರ ಕಲಿಕೆಯನ್ನು ಕಡ್ಡಾಯವಾಗಿ ಮಾಡಬೇಕಾಗುತ್ತದೆ ಎಂದರು, ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಎಮ್ ಆರ್ ಮೆಳವಂಕಿ ಮಾತನಾಡಿ ಸಮಾಜದಲ್ಲಿ ವಕೀಲ ವೃತ್ತಿಗಿರುವಷ್ಟು ಗೌರವ ಬೇರೆ ವೃತ್ತಿಗಳಿಗೆ ವಿರಳ, ಸಮಾಜದ ಅಂಕುಡೊಂಕನ್ನು ತಿದ್ದಿ ಸಾಮರಸ್ಯದ ಜೀವನಕ್ಕಾಗಿ ವಕೀಲರ ಪಾತ್ರ ಬಹುದೊಡ್ಡದಾಗಿದೆ, ಅಂತಹ ಕೋರ್ಸುಗಳನ್ನು ಆಯ್ದುಕೊಂಡು ಅಭ್ಯಾಸ ಮಾಡುತ್ತಿರುವ ತಾವುಗಳು ದುರ್ಬಲರ ಶಕ್ತಿಯಾಗಿ ಅನ್ಯಾಯಕ್ಕೆ ನ್ಯಾಯದ ವಾದವನ್ನು ಮಾಡಿ ಜಯ ದೊರಕಿಸಿ ಕೊಡುವಂತಾಗಬೇಕೆಂದು ಹೇಳಿದರು, ಈ ಸಂದರ್ಭದಲ್ಲಿ ಕೆ ಆರ್ ಸಿ ಎಸ್ ಶಿಕ್ಷಣ ಸಂಸ್ಥೆಯ ಉಪಸಮಿತಿ ಚೇರಮನ್ ಶಿರೀಶ ತುಡವೇಕರ, ಪ್ರಾಚಾರ್ಯರಾದ ಪಿ ಎನ್ ಪಾಟೀಲ, ಸಂಯೋಜಕರಾದ ಡಿ ಬಿ ನರಗುಂದ,ಉಪನ್ಯಾಸಕರಾದ ಎಂ ಎಸ್ ಪಟ್ಟಣಶೆಟ್ಟಿ, ಈರಣ್ಣ ಹುಣಸಿಕಟ್ಟಿ, ಅಮ್ರೋಜ ಜೋಶೇಪ್, ಸುನೀಲ ಬಾಳಿ, ಜಯಶ್ರೀ ಬನಶೆಟ್ಟಿ, ವಿದ್ಯಾರ್ಥಿ ಪ್ರತಿನಿಧಿ ಸಂತೋಷ ಹಡಪದ ವೇದಿಕೆ ಮೇಲಿದ್ದರು. ನಂತರ ಪ್ರಥಮ ವರ್ಷದ ವಿದ್ಯಾರ್ಥಿಗಳ ಆಟೋಪಚಾರಗಳು ವಿದ್ಯಾರ್ಥಿಗಳನ್ನು ನಗೆಗಡಲಿಗೆ ಒಯ್ಯಿತು. ಈ ಸಂದರ್ಭದಲ್ಲಿ ಸಿಬ್ಬಂದಿ ಮಡಿವಾಳಪ್ಪ ದೂಳಪ್ಪನವರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸುರೇಖಾ ರೆಣಕೇಗೌಡರ ನಿರೂಪಿಸಿದರು, ಸಂತೋಷ ಹಡಪದ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಸ್ಮಿತಾ ಹರಕುಣಿ, ಅತಿಥಿಗಳನ್ನು ಪರಿಚಯಿಸಿದರು, ಲಕ್ಮಣ ಲಮಾಣಿ ವಂದಿಸಿದರು.


