ಪಡಿತರ ಅಕ್ಕಿ ಕಳಸಾಗಣೆ: 42 ಅಕ್ಕಿ ಚೀಲಗಳು ಪೊಲೀಸರ ವಶಕ್ಕೆ

Ravi Talawar
ಪಡಿತರ ಅಕ್ಕಿ ಕಳಸಾಗಣೆ: 42 ಅಕ್ಕಿ ಚೀಲಗಳು ಪೊಲೀಸರ ವಶಕ್ಕೆ
WhatsApp Group Join Now
Telegram Group Join Now
ಹೊಸಪೇಟೆ : ವಿಜಯನಗರ ಜಿಲ್ಲೆ, ಹೊಸಪೇಟೆ ಯ ಎಸ್. ಆರ್. ನಗರದ ಚಪ್ಪರದಹಳ್ಳಿ ನಾಯಬೆಲೆ ಅಂಗಡಿಯ ಹಿಂಭಾಗದಲ್ಲಿ  ಪಡಿತರ ಅಕ್ಕಿ ಯನ್ನು ಕಳಸಾಗಣೆ ಮಾಡಲು ಶೇಖರಿಸಿ ಇಟ್ಟಿದ್ದನ್ನು ಪತ್ತೆ ಹಚ್ಚಿದ ಕೆ. ಆರ್. ಎಸ್ ಸಂಘಟನೆಯ ಕಾರ್ಯ ಕರ್ತರು. ಇದಕ್ಕೆ ಸಂಭಂದಿಸಿದವರು  ಯಾರಾದರೂ ಬರಬಹುದೆಂದು ಕೆಲ ಕಾಲ ಕಾದು ಯಾರೂ  ಬಾರದೇ ಇದ್ದ ಕಾರಣ ಆಹಾರ   ಇಲಾಖೆ  ಅಧಿಕಾರಿಗಳ ಗಮನಕ್ಕೆ ತಂದು.  ಅವರನ್ನು ಸ್ಥಳಕ್ಕೆ ಕರೆಯಿಸಿಕೊಂಡು, ಅಧಿಕಾರಿಗಳ ವಶಕ್ಕೆ 42  ಚೀಲಗಳನ್ನು   ಒಪ್ಪಿಸಿ, ಇದರ ಬಗ್ಗೆ  ಕಾನೂನು ಪ್ರಕಾರ  ಕ್ರಮ ಕೈಗೊಳ್ಳಬೇಕು ಎಂದು ಕೆ ಆರ್ ಎಸ್ ಕಾರ್ಯ ಕರ್ತರು ಅಧಿಕಾರಿಗಳಿಗೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ  ಪಕ್ಷದ  ತಾಲೂಕು ಅಧ್ಯಕ್ಷ   ಟಿ.ನಜೀರ್, ಕಾರ್ಯದರ್ಶಿ ಗೋಳರ್ ನಾಗರಾಜ್ ಮುಂತಾದವರು ಇದ್ದರು.
WhatsApp Group Join Now
Telegram Group Join Now
Share This Article