ಬೆಳಗಾವಿ.,25: ಬರಗಾಲದಿಂದ ತತ್ತರಿಸಿರುವ ರಾಜ್ಯಕ್ಕೆ ಪರಿಹಾರ ನೀಡದೆ ಮಲತಾಯಿ ಧೋರಣೆ ತೋರಿ, ನಮಗೆ ನೀಡಬೇಕಾಗಿರುವ ತೆರಿಗೆ ಹಣ ಏನಾಯ್ತು, ಯಾವ ಮುಖ ಇಟ್ಟುಕೊಂಡು ರಾಜ್ಯದ ಜನರ ಮತ ಕೇಳಲು ಬರುತಿದ್ದಾರೆ ಮೋದಿ ಮತ್ತು ಅಮಿತ್ ಶಾ ಗೋ ಬ್ಯಾಕ್ ಮಾಡುವಷ್ಟು ಜನರು ಮೋದಿ ಮತ್ತು ಅಮಿತ್ ಶಾ ಮೇಲೆ ಆಕ್ರೋಶಗೊಂಡಿದ್ದಾರೆ. ಮೇಕೆದಾಟು ಕಳಸ ಬಂಡೂರಿ, ಮಹದಾಯಿ ನೀರಾವರಿ ಯೋಜನೆಗಳಿಗೆ ಅನುಮತಿ ಕೊಡಿಸಲಿಲ್ಲ ಎಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣವೀರಸಿಂಗ ಸುರ್ಜೆವಾಲಾ ಹೇಳಿದರು.
ಅವರು ಗುರುವಾರದಂದು ನಗರದ ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಈ ಭಾರಿ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ 150 ಗೆಲುವದು ಸಾಧ್ಯವಿಲ್ಲ ಮತ್ತು ರಾಜ್ಯದ ಬರ ಪರಿಹಾರ 18 ಸಾವಿರ ಕೋಟಿ ಇನ್ನು ಕೊಟ್ಟಿಲ್ಲ. ಹಿಂದಿನ ಚುನಾವಣೆಯಲ್ಲಿ 25 ಸೀಟುಗಳನ್ನು ಗೆಲ್ಲಿಸಿದ ಜನರಿಗೆ ಸತತವಾಗಿ ಅನ್ಯಾಯ ಕೇಂದ್ರ ಬಿಜೆಪಿ ಸರ್ಕಾರ ಮಾಡಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಶಾಸಕರಾದ ಅಶೋಕ ಪಟ್ಟಣ, ಮಹಾಂತೇಶ ಕೌಜಲಗಿ, ಗಣೇಶ ಹುಕ್ಕೇರಿ, ಆಶಿಫ್ ಶೇಟ್, ವಿ ಪ ಸದಸ್ಯ ಚನ್ನರಾಜ್ ಹಟ್ಟಿಹೊಳಿ, ಪದಾಧಿಕಾರಿಗಲಾದ ಸುನಿಲ್ ಹಣಮನ್ನವರ, ಕಾಂಗ್ರೆಸ್ ಜಿಲ್ಲಾಧ್ಯಕ್ಷರ ವಿನಯ್ ನವಲಗಟ್ಟಿ ಸೇರಿದಂತೆ ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.