ರನ್ನ ಬೆಳಗಲಿ: ಆ.೦೪., ಪಟ್ಟಣದ ಡಪಳಾಪೂರ ವಿದ್ಯಾ ವಿಹಾರ ಶಾಲೆಯಲ್ಲಿ ಇತ್ತೀಚಿಗೆ “ಸಾಧಕರ ಭೇಟಿ” ಕಾರ್ಯಕ್ರಮ ಜರಗಿತು.ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಮಾನಗೌಡ .ವಿ. ನಾಡಗೌಡ ಡಿಸ್ಟಿಂಗ್ವಿ?ಡ್ ಸೈಂಟಿಸ್ಟ್ ಅಸೋಸಿಯೇಟ್ ಡೈರೆಕ್ಟರ್ ಯು.ಆರ್. ರಾವ್ ಸೆಟಲೈಟ್ ಸೆಂಟರ್ ಇಸ್ರೋ ಬೆಂಗಳೂರು.
ಅವರು ತಾವು ಬಡತನದಲ್ಲಿ ಹುಟ್ಟಿದರು ಅದು ವರವಾಗಿ ಸಾಧನೆ ಮಾಡಲು ಪೂರಕವಾದ ಬಗೆಯನ್ನೂ ವಿದ್ಯಾರ್ಥಿ ಸಮೂಹಕ್ಕೆ ಮನಮುಟ್ಟುವಂತೆ ತಿಳಿಸಿ,ಕನಸು ಕಾಣುತ್ತಾ ನಿದ್ರಿಸುವ ಮೊದಲು ಕನಸುಗಳನ್ನು ನನಸು ಮಾಡಲು ಸದಾ ಎಚ್ಚರವಾಗಿ ಪ್ರಯತ್ನಿಸಿ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರಕಾಶ. ವಿ. ನಾಡಗೌಡ, ಡಾ. ವಿಜಯ ಹಂಚಿನಾಳ, ಹಾಗೂ ಡಾ. ಅಜಿತ ಕನಕರೆಡ್ಡಿ ವಿವೇದಿಕೆ ಮೇಲೆ ಉಪಸ್ಥಿರಿದ್ದು ಕಾರ್ಯಕ್ರಮದ ಕುರಿತು ಮಾತನಾಡಿದರು.
ಈ ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿಗಳಾದ ವ? ಪಾಟೀಲ್ ಹಾಗೂ ಪ್ರೇಮಾ ಪಾಟೀಲ್ ನಡೆಸಿಕೊಟ್ಟರು. ಶಾಲೆಯ ವ್ಯವಸ್ಥಾಪಕರಾದ ವಿವೇಕ ಡಪಳಾಪುರ, ಪ್ರಾಂಶುಪಾಲರಾದ ಜಾಯ್ ಹಾಗೂ ಬೋಧಕ ಮತ್ತು ಬೋಧಕೇತರ ವೃಂದ,ಪಾಲಕ ಪೋ?ಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.