ಬಳ್ಳಾರಿ ಜ 05. ಶ್ರೀನಂದ ವಸತಿ ಶಾಲೆ ವಿದ್ಯಾನಗರ ಬಳ್ಳಾರಿ ಈ ಶಾಲೆಯ ಆವರಣದಲ್ಲಿ ಆಂಧ್ರ ಜ್ಯೋತಿ ಸಂಸ್ಥೆ ಮತ್ತು ಶ್ರೀ ನಂದ ವಸತಿಶಾಲೆ ಹಾಗೂ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಭಾರತೀಯ ಸಂಪ್ರದಾಯ ಸಂಸ್ಕೃತಿ ಹಬ್ಬಗಳಲ್ಲಿ ಒಂದಾದ ಸಂಕ್ರಾಂತಿ ಹಬ್ಬದ ಪ್ರಯುಕ್ತ ಶಾಲೆಯ ಆವರಣದಲ್ಲಿ ಜಿಲ್ಲಾಮಟ್ಟದ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಿಷ್ಟವಂತ ಅಧಿಕಾರಿಗಳಾದ ಬಳ್ಳಾರಿಯ ಪೋಲೀಸ್ ವರಿಷ್ಟಾಧಿಕಾರಿಗಳಾದ ಡಾ॥ ಶೋಭಾರಾಣಿ ವಿ.ಜೆ ಐ.ಪಿ.ಎಸ್, ಶಾಲೆಯ ಅಧ್ಯಕ್ಷರು ವಿ. ಗಾಂಧಿ, ಮುರಳಿಕೃಷ್ಣ, ರಮಣಕುಮಾರ್, ಶೈಕ್ಷಣಿಕ ಸಲಹೆಗಾರರಾದ ಹೆಚ್. ಕೆ ಹರಿಕುಮಾರ್, ಆಂಧ್ರ ಜ್ಯೋತಿಯ ಪ್ರತಿನಿಧಿಗಳಾದ ಕೃಷ್ಣರೆಡ್ಡಿ ಮತ್ತು ರವಿಕುಮಾರ್, ನಿವೃತ್ತ ಪ್ರಾಂಶುಪಾಲರಾದ ವೆಂಕಟೇಶ್, ತೀರ್ಪುಗಾರರು ಶ್ರೀಮತಿ ಶಾಂತ ಶಾಸ್ತ್ರಿ, ನಿವೃತ್ತ ಸಂಗೀತಗಾರರು,ಶ್ರೀಮತಿ ಸಂಗೀತ ಉಪನ್ಯಾಸಕರು ವೀರಶೈವ ಕಾಲೇಜು, ಶ್ರೀಮತಿ ವಿಜಯ ತುಳಸಿ ವಾರ್ಡ್ಲಾ ಪಿ.ಯು ಕಾಲೇಜು ಶಿಕ್ಷಕಿಯರು, ಶ್ರೀಮತಿ ಪ್ರಮೀಳಾ, ಮುಖ್ಯೋಪಾದ್ಯಾನಿ ಶ್ರೀಮತಿ ಹೆಚ್.ಜೆ. ಸರಿತ, ಮುಖ್ಯೋಪಾದ್ಯಾಯರಾದ ಕೆ.ಲಕ್ಷ್ಮಿಕಾಂತ್, ವಿನಯ್ ಕುಮಾರ್ ಚೌದರಿ, ಶಾಲೆಯ ಸಿಬ್ಬಂದಿ ವರ್ಗದವರು ಮತ್ತು ರಂಗೋಲಿ ಸ್ಪರ್ಧೆಯಲ್ಲಿ 80 ಮಹಿಳೆಯರು ಭಾಗವಹಿಸಿದ್ದು.
ರಂಗೋಲಿ ಸ್ಪರ್ಧೆಯ ಪ್ರಥಮ ಬಹುಮಾನ 6000 ರೂಪಾಯಿಗಳು ಶ್ರೀಮತಿ ರೋಹಿಣಿ ದ್ವೀತಿಯ ಬಹುಮಾನ 4000 ರೂಪಾಯಿಗಳು ಶ್ರೀಮತಿ ಲಿಖಿತ,
ತೃತೀಯ ಬಹುಮಾನ 3000 ರೂಪಾಯಿಗಳು ಶ್ರೀಮತಿ ರಾಧ ಬಹುಮಾನ ಪಡೆದ ಸ್ಪರ್ಧಿಗಳಿಗೆ ಡಾ|| ಶೋಭಾರಾಣಿ ವಿ.ಜೆ ಐ.ಪಿ.ಎಸ್ ರವರು ಬಹುಮಾನಗಳನ್ನು ವಿತರಿಸಿದರು, ಆಂಧ್ರ ಜ್ಯೋತಿ ದಿನ ಪತ್ರಿಕೆ ಪ್ರತಿನಿಧಿಗಳು, ಪ್ರಾಯೋಜಕರು ಸಂತೋರ್ ಸೋಪು, ಸೆಲ್ಸಿಯಸ್, ಕ್ರಾಪ್ಟವಾರಿ ಪರ್‌ಫೆಕ್ಟ್ ಸೆಂದ್ರಿಯ ಸಾಗು- ಅಧಿಕ ದಿಗುಬಡಿ ಮತ್ತು ಶಾಲೆಯ ಆಡಳಿತ ಮಂಡಳಿಯವರು ವಿಜೇತ ಸ್ಪರ್ಧಿಗಳಿಗೆ ಶುಭಕೋರಿದರು.
ಶಾಲೆಯ ಆಡಳಿತ ಮಂಡಳಿಯವರಿಂದ ಡಾ॥ ಶೋಭಾರಾಣಿ ವಿ.ಜೆ ಐ.ಪಿ.ಎಸ್ ರವರಿಗೆ ಸನ್ಮಾನಿಸಲಾಯಿತು.ಸ್ವಾಗತ ಭಾಷಣವನ್ನು ಮುಖ್ಯೋಪಾದ್ಯಾಯರಾದ ಕೆ.ಲಕ್ಷ್ಮಿಕಾಂತ್ ರವರು ಹಾಗೂ ನಿರೂಪಣೆಯನ್ನು ಶ್ರೀಮತಿ ರಾಜೇಶ್ವರಿ ರವರು ನಡೆಸಿಕೊಟ್ಟರು ಮತ್ತು ವಂದನಾರ್ಪಣೆಯನ್ನು ಮುಖ್ಯೋಪಾದ್ಯಾನಿ ಶ್ರೀಮತಿ ಹೆಚ್.ಜೆ. ಸರಿತ ರವರು ನಡೆಸಿಕೊಟ್ಟರು.
ಪ್ರಥಮ ಸ್ಥಾನ ಪಡೆದವರು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ತಿಳಿಸಿದ್ದಾರೆ.