ವಾಷಿಂಗ್ಟನ್, ಏಪ್ರಿಲ್ 09: ಮುಂಬೈನಲ್ಲಿ 2008ರ ನವೆಂಬರ್ 26ರಂದು ನಡೆದ ಭಯೋತ್ಪಾದಕ ದಾಳಿಯ ಆರೋಪಿ ತಹವ್ವುರ್ ರಾಣಾ(Tahawwur Rana) ನನ್ನು ಶೀಘ್ರದಲ್ಲೇ ಅಮೆರಿಕದಿಂದ ಭಾರತಕ್ಕೆ ಹಸ್ತಾಂತರ ಮಾಡಬಹುದು. ಭಾರತದ ತನಿಖಾ ಸಂಸ್ಥೆಗಳ ತಂಡ ಅಮೆರಿಕ ತಲುಪಿದೆ. ತಂಡವು ಅಮೆರಿಕದ ಅಧಿಕಾರಿಗಳೊಂದಿಗೆ ಎಲ್ಲಾ ದಾಖಲೆಗಳು ಮತ್ತು ಕಾನೂನು ಔಪಚಾರಿಕತೆಗಳನ್ನು ಪೂರ್ಣಗೊಳಿಸುವಲ್ಲಿ ನಿರತವಾಗಿದೆ. ಮೂಲಗಳ ಪ್ರಕಾರ, ತಹವ್ವುರ್ ರಾಣಾ ಅವರನ್ನು ಶೀಘ್ರದಲ್ಲೇ ಗಡಿಪಾರು ಮಾಡುವ ಸಾಧ್ಯತೆ ಹೆಚ್ಚು.
ಅಮೆರಿಕ ಕೂಡ ಇದಕ್ಕೆ ಒಪ್ಪಿಗೆ ನೀಡಿದೆ. ಈಗ ಯಾವುದೇ ಸಮಯದಲ್ಲಿ ಭಯೋತ್ಪಾದಕ ತಹವ್ವೂರ್ ರಾಣಾ ಭಾರತಕ್ಕೆ ಬರಬಹುದು. ರಾಣಾ ಭಾರತಕ್ಕೆ ಬಂದರೆ ಅವರನ್ನು ಎಲ್ಲಿ ಇಡಲಾಗುತ್ತದೆ? ಇದಕ್ಕೆ ಎರಡು ಆಯ್ಕೆಗಳಿವೆ. ಮೊದಲನೆಯದು ದೆಹಲಿಯ ತಿಹಾರ್ ಜೈಲು ಮತ್ತು ಎರಡನೆಯದು ಮುಂಬೈನ ಆರ್ಥರ್ ರಸ್ತೆ ಜೈಲು. ಈ ಎರಡೂ ಸ್ಥಳಗಳಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ.