“ರಾಮೇಶ್ವರಂ ಕೆಫೆ ಬಾಂಬ್ ​ಪ್ರಕರಣ ಹೇಳಿಕೆ ಸಂಬಂಧ ” ಶೋಭಾಗೆ ಹೈಕೋರ್ಟ್​ ಪ್ರಶ್ನೆ

Ravi Talawar
“ರಾಮೇಶ್ವರಂ ಕೆಫೆ ಬಾಂಬ್ ​ಪ್ರಕರಣ ಹೇಳಿಕೆ ಸಂಬಂಧ ” ಶೋಭಾಗೆ ಹೈಕೋರ್ಟ್​ ಪ್ರಶ್ನೆ
WhatsApp Group Join Now
Telegram Group Join Now

ಚೆನ್ನೈ/ಬೆಂಗಳೂರು ಜುಲೈ 10: “ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ​ ಇಟ್ಟವರು ತಮಿಳುನಾಡಿನಲ್ಲಿ ತರಬೇತಿ ಪಡೆದಿದ್ದಾರೆ” ಎಂಬ ನಿಮ್ಮ ಹೇಳಿಕೆಗೆ ಏನು ಆಧಾರವಿದೆ ಎಂದು ಮದ್ರಾಸ್​​ ಹೈಕೋರ್ಟ್ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರು ಸಚಿವೆ​ ಶೋಭಾ ಕರಂದ್ಲಾಜೆ   ಅವರಿಗೆ ಪ್ರಶ್ನಿಸಿದೆ. ಬೆಂಗಳೂರಿನ ನಗರ್ತಪೇಟೆಯಲ್ಲಿ ಮೊಬೈಲ್​ ಅಂಗಡಿ ಮಾಲೀಕನ ಮೇಲೆ ಹಲ್ಲೆ ಪ್ರಕರಣ ಖಂಡಿಸಿ ಬಿಜೆಪಿ ಹಾಗೂ ಹಿಂದೂ ಜಾಗರಣಾ ವೇದಿಕೆ ಆಯೋಜಿಸಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ಮಾತನಾಡಿದ್ದ ಸಚಿವೆ ಶೋಭಾ ಕರಂದ್ಲಾಜೆ, “ತಮೀಳುನಾಡಿನಲ್ಲಿ ತರಬೇತಿ ಪಡೆಯುತ್ತಾರೆ, ಇಲ್ಲಿ (ಕರ್ನಾಟಕ)ಕ್ಕೆ ಬಂದು ಬಾಂಬ್​ ಇಡುತ್ತಾರೆ” ಎಂದು ಆರೋಪ ಮಾಡಿದ್ದರು.

ಈ ಹೇಳಿಕೆಯು ತಮಿಳುನಾಡಿನವರನ್ನು ಅವಮಾನಿಸುವಂತಹದ್ದು ಎಂಬ ಆಕ್ಷೇಪ ವ್ಯಕ್ತವಾಗಿತ್ತು. ಈ ಸಂಬಂಧ ಸಿ.ತ್ಯಾಗರಾಜನ್ ಎಂಬುವರು ಮಾರ್ಚ್ 20 ರಂದು ಮಧುರೈನ ಸೈಬರ್ ಕ್ರೈಂ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಶೋಭಾ ಕರಂದ್ಲಾಜೆ ವಿರುದ್ಧ ಎಫ್​ಐಆರ್​​ ದಾಖಲಾಗಿತ್ತು. ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಶೋಭಾ ಕರಂದ್ಲಾಜೆ ಅವರು ಅರ್ಜಿ ಸಲ್ಲಿಸಿದರು. ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಜಿ.ಜಯಚಂದ್ರನ್ ಈ ಪ್ರಶ್ನೆಯನ್ನು ಕೇಳಿದರು.

ಬಾಂಬರ್‌ಗಳಿಗೆ ತಮಿಳುನಾಡಿನಲ್ಲಿ ತರಬೇತಿ ನೀಡಲಾಗಿದೆ ಎಂದು ಹೇಳುವ ಮೂಲಕ ಕನ್ನಡಿಗರನ್ನು ತಮಿಳರ ವಿರುದ್ಧ ಎತ್ತಿಕಟ್ಟಿದ್ದಾರೆ ಎಂಬ ಆರೋಪವನ್ನು ಶೋಭಾ ಕರಂದ್ಲಾಜೆ ತಳ್ಳಿಹಾಕಿದ್ದಾರೆ. ತಮಿಳುನಾಡಿನ ಆಂತರಿಕ ಭದ್ರತೆಯ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸುವುದು ನನ್ನ ಉದ್ದೇಶವಾಗಿತ್ತು ಹೊರತು ಬೇರೆ ಯಾವ ಉದ್ದೇಶವಿರಲಿಲ್ಲ ಎಂದು ನ್ಯಾಯ ಪೀಠದ ಮುಂದೆ ಹೇಳಿದರು.

 

WhatsApp Group Join Now
Telegram Group Join Now
Share This Article