ಅವಿರೋಧ ಆಯ್ಕೆಯಿಂದ ಬ್ಯಾಂಕಿನ ಅಭಿವೃದ್ಧಿಗೆ ಸಹಕಾರಿ: ರಮೇಶ ತುಕ್ಕಾನಟ್ಟಿ  

Ravi Talawar
ಅವಿರೋಧ ಆಯ್ಕೆಯಿಂದ ಬ್ಯಾಂಕಿನ ಅಭಿವೃದ್ಧಿಗೆ ಸಹಕಾರಿ: ರಮೇಶ ತುಕ್ಕಾನಟ್ಟಿ  
WhatsApp Group Join Now
Telegram Group Join Now

 

ಘಟಪ್ರಭಾ.ಸಹಕಾರಿ ಬ್ಯಾಂಕುಗಳಿಗೆ 5 ವರ್ಷಕ್ಕೊಮ್ಮೆ ಆಡಳಿತ ಮಂಡಳಿ ಚುನಾವಣೆ ನಡೆಯುವದು ನಿಯಮ ಇದ್ದು, ಪರಸ್ಪರ ಎಲ್ಲ ಜನರ, ಷೇರುದಾರರ, ಗ್ರಾಹಕರ ಸಹಕಾರದಿಂದ ಚುನಾವಣೆ ನಡೆಯದೆ ಅವಿರೋಧ ಆಯ್ಕೆಯಿಂದ ಬ್ಯಾಂಕಿನ ಅಭಿವೃದ್ಧಿಗೆ ಸಹಕಾರಿ ಆಗುತ್ತದೆ ಎಂದು ಮಲ್ಲಾಪೂರ ಅರ್ಬನ್ ಬ್ಯಾಂಕನ ನಿಕಟಪೂರ್ವ ಅಧ್ಯಕ್ಷ ಹಾಗೂ ಬ್ಯಾಂಕಿನ ನಿರ್ದೇಶಕ ರಮೇಶ ತುಕ್ಕಾನಟ್ಟಿ ಹೇಳಿದರು.

ಅವರು ಬ್ಯಾಂಕಿನ ಆವರಣದಲ್ಲಿ ನೂತನವಾಗಿ ಅವಿರೋಧವಾಗಿ ಆಯ್ಕೆಯಾದ ಆಡಳಿತ ಮಂಡಳಿಗೆ ಪಟ್ಟಣದ ಹಿರಿಯರು ಹಾಗೂ ಬ್ಯಾಂಕ ವತಿಯಿಂದ ಸತ್ಕಾರ ಸ್ವೀಕರಿಸಿ ಮಾತನಾಡಿ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರಾದ ದಿ. ಮಲ್ಲಪ್ಪ ಹತ್ತರವಾಟ, ಸಂಸ್ಥಾಪಕ ವ್ಯವಸ್ಥಾಪಕರಾದ ದಿ. ಮಲ್ಲಪ್ಪ ತುಕ್ಕಾನಟ್ಟಿ , ದಿ. ಭೀಮಪ್ಪ ಹತ್ತರವಾಟ, ದಿ. ಶಂಕರಪ್ಪಜ್ಜಾ ಹತ್ತರವಾಟ ಹಾಗೂ ಪಟ್ಟಣದ ಅನೇಕ ಹಿರಿಯರ ಶ್ರಮದಿಂದ ಬ್ಯಾಂಕ ಉನ್ನತ ಸ್ಥಾನದಲ್ಲಿದ್ದು ಎಲ್ಲರ ಸಹಕಾರದಿಂದ ಗ್ರಾಹಕರಿಗೆ, ರೈತರಿಗೆ ಸೇವೆ, ಭದ್ರತೆ ನೀಡಲಾಗುವದೆಂದು ಹೇಳಿದರು.

ಈ ಸಂದರ್ಭದಲ್ಲಿ ಕೆ ಆರ್ ಹೆಚ್ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರಾಮಣ್ಣ ಹುಕ್ಕೇರಿ,ಮಾರುತಿ ವಿಜಯನಗರ, ಪಿಕೆಪಿಎಸ್ ಅಧ್ಯಕ್ಷ ಮುತ್ತಣ್ಣ ಹತ್ತರವಾಟ, ಪುಟ್ಟು ಖಾನಾಪುರೆ, ಘನಸಿಂಗ ರಜಪೂತ, ಡಾ ಬಾಳಪ್ಪ ತುಪ್ಪದ, ಈರಣ್ಣ ಕಲಕುಟಗಿ,ಬ್ಯಾಂಕಿಗೆ ಅವಿರೋಧವಾಗಿ ಆಯ್ಕೆಯಾದ ನೂತನ ಆಡಳಿತ ಮಂಡಳಿ ಸದಸ್ಯರಾದ ಹೊನ್ನಜ್ಜ ಕೋಳಿ, ಸತೀಶ ಹತ್ತರವಾಟ, ಆನಂದ ಕಬಾಡಗಿ,ಶ್ರೀಶೈಲ ಮ. ಮಗದುಮ್ಮ, ಸುಭಾಸಚಂದ್ರ ಶೆ. ಕಾಡದವರ, ರಾಜಶೇಖರ ಗೊ. ತುಕ್ಕಾನಟ್ಟಿ, ಮಹಾದೇವ ಕಾ. ಬಟನೂರೆ , ಮಹಾವೀರ ಹುಲ್ಲೋಳಿ, ಶ್ರೀಮತಿ ರೇವಕ್ಕ ಶಂ. ಕಮತ, ಶ್ರೀಮತಿ ಶೃತಿ ಮಂ. ಮಟಗಾರ,ಕಲ್ಲೋಳೆಪ್ಪಾ ಹ. ಜಮಖಂಡಿ, ರಾಮಪ್ಪ ಬ. ನಾಯಿಕ ಹಾಗೂ ಬ್ಯಾಂಕಿನ ವ್ಯವಸ್ಥಾಪಕರಾದ ರಮೇಶ ಮುರಗೋಡ, ರವಳು ನವಗಿರೆ, ಬ್ಯಾಂಕ ಎಲ್ಲ ಸಿಬ್ಬಂದಿ, ಪಟ್ಟಣದ ಹಿರಿಯರು, ಮುಖಂಡರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article