ಯೋಜನೆಗಳ ಸದ್ಬಳಕೆಗೆ ಸಾರ್ವಜನಿಕರ ಸಹಕಾರ ಮುಖ್ಯ : ರಮೇಶ್ ಕತ್ತಿ ಅಭಿಮತ

Ravi Talawar
ಯೋಜನೆಗಳ ಸದ್ಬಳಕೆಗೆ ಸಾರ್ವಜನಿಕರ ಸಹಕಾರ ಮುಖ್ಯ : ರಮೇಶ್ ಕತ್ತಿ ಅಭಿಮತ
WhatsApp Group Join Now
Telegram Group Join Now
 *ಹುಕ್ಕೇರಿ* : ಗ್ರಾಮಗಳ ಅಭಿವೃದ್ಧಿಗೆ ಮುಖಂಡರ ಹಾಗೂ ಸಾರ್ವಜನಿಕರ ಸಹಕಾರ ಅತಿ ಅವಶ್ಯಕ ಎಂದು ಮಾಜಿ ಸಂಸದ ರಮೇಶ್ ಕತ್ತಿ ಹೇಳಿದರು.
ಹುಕ್ಕೇರಿ ವಿಧಾನಸಭಾ ಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ಆರು ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯಗಳ ಸುಧಾರಣೆಗಾಗಿ ವಿವಿಧ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಗ್ರಾಮದ ಮುಖಂಡರು ಮುಂದೆ ನಿಂತು ಉತ್ತಮ ಗುಣಮಟ್ಟದ ಕೆಲಸಗಳನ್ನು ನಿರ್ಮಿಸಿಕೊಳ್ಳಬೇಕು. ಬೇಸಿಗೆಯಲ್ಲಿ ಜನತೆಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಸಕಾಲಕ್ಕೆ ಸಭೆಗಳನ್ನು ನಡೆಸಿ ಸಾರ್ವಜನಿಕರ ಸಹಕಾರದೊಂದಿಗೆ ನೋಡಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.
ತಾಲ್ಲೂಕಿನ 56 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ 194 ಕೋಟಿ 13 ಲಕ್ಷ ರೂ ವೆಚ್ಚದ ಬಹು ಗ್ರಾಮ ಶುದ್ಧ ಕುಡಿಯುವ ನೀರು ಕಾಮಗಾರಿಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.
ಇದೇ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ 20 ಜನ ವಿಕಲಚೇತನರಿಗೆ ಮಂಜೂರಾದ ಉಚಿತ ಯಂತ್ರಚಾಲಿತ ದ್ವಿಚಕ್ರ ವಾಹನ ವಾಹನಗಳನ್ನು ವಿತರಿಸಲಾಯಿತು.
ಇದಕ್ಕೂ ಮೊದಲು ಹರಗಾಪುರ, ಕಣಗಲಾ, ಶಿಪ್ಪೂರ, ಕೆ ಎಂ ಆಲೂರ, ಕರಜಗಾ, ಗೌಡವಾಡ, ಬಡಕುಂದ್ರಿ, ಗೌಡವಾಡ, ಹುಲ್ಲೋಳಿ ಹಟ್ಟಿ, ರಾಜನಕೋಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಡಾಂಬರಿಕರಣ, ಚರಂಡಿ, ಸಿಸಿ ರಸ್ತೆ ಸೇತುವೆ, ಹಾಗೂ ನಿಡಸೋಸಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಕಾಲೋನಿಗಳಲ್ಲಿ ಕುಡಿಯುವ ನೀರು ಸುಧಾರಣೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೇರವೆರಿಸಲಾಯಿತು.
ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಮುಖಂಡರಾದ ಸತ್ಯಪ್ಪ ನಾಯಿಕ, ರಾಚಯ್ಯಾ ಹಿರೇಮಠ, ಶೀತಲ ಬ್ಯಾಳಿ, ಗುರು ಕುಲಕರ್ಣಿ, ಅಶೋಕ ಹಿರೇಕೂಡಿ, ವಿರೇಶ ಗಜಬರ, ಗುತ್ತಿಗೆದಾರರ ಮಲ್ಲಪ್ಪ ಬಿಸಿರೊಟ್ಟಿ, ಪರಪ್ಪ ಮಗದುಮ್ಮ, ತಿಮನ್ನ ಗಾಡಿವಡ್ಡರ, ಮತ್ತಿತರರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article