3 ನೇ ಬಾರಿ ಮೋದಿ ಪ್ರಧಾನಿಯಾಗಲು ನನಗೆ ಮತ್ತೊಮ್ಮೆ ಆಶಿರ್ವದಿಸಿ: ರಮೇಶ ಜಿಗಜಿಣಗಿ

Ravi Talawar
3 ನೇ ಬಾರಿ ಮೋದಿ ಪ್ರಧಾನಿಯಾಗಲು ನನಗೆ ಮತ್ತೊಮ್ಮೆ ಆಶಿರ್ವದಿಸಿ: ರಮೇಶ ಜಿಗಜಿಣಗಿ
WhatsApp Group Join Now
Telegram Group Join Now

ವಿಜಯಪುರ,ಏಪ್ರಿಲ್​ 05:ನರೇಂದ್ರ ಮೋದಿ ಅವರನ್ನು3ನೇ ಬಾರಿ ಪ್ರಧಾನಿಯಾಗಲು ನನ್ನನ್ನು ಲೋಕಸಭೆ ಸದಸ್ಯನಾಗಿ ಕಳಿಸಲು ಮತ್ತೊಮ್ಮೆ ಅವಕಾಶ ನೀಡಬೇಕೆಂದು ಲೋಕಸಭೆಯ ಎನ್‌ಡಿಎ ಅಭ್ಯರ್ಥಿ ರಮೇಶ ಜಿಗಜಿನಗಿ ಮನವಿ ಮಾಡಿದರು.

ದೇವರ ಹಿಪ್ಪರಗಿ ಕ್ಷೇತ್ರದ ಮುಳಸಾವಳಗಿ ಗ್ರಾಮದಲ್ಲಿ ಶುಕ್ರವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ರಾಮಕೃಷ್ಣ ಹೆಗಡೆ-ಜಿ.ಎಚ್.ಪಟೇಲ ಅವರ ಜೊತೆಗೂಡಿ ಹೆಜ್ಜೆ ಹಾಕಿ ರಾಜಕಾರಣ ಮಾಡಿದ್ದೇನೆ. 12 ಚುನಾವಣೆಯಲ್ಲಿ ಜನತೆ ನನ್ನನ್ನು ಆಶೀರ್ವದಿಸಿದ್ದಾರೆ. ಅದೇ ರೀತಿ ಈ ಬಾರಿಯೂ ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿ ಮಾಡಲು ಕೈ ಎತ್ತಲು ಅವಕಾಶ ನೀಡಬೇಕೆಂದು ಕೇಳಿಕೊಂಡರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಅಧ್ಯಕ್ಷತೆ ವಹಿಸಿ ಮಾತನಾಡಿ,ಜಗತ್ತಿಗೆ ಮೋದಿ ಅವರ ನಾಯಕತ್ವ ಬೇಕು ಎಂದು ಇಡೀ ವಿಶ್ವ ಹೇಳುತ್ತಿದೆ. ಎಲ್ಲಿ ಮೋದಿ ಇದ್ದರೆ ಅಲ್ಲಿ ಶಾಂತಿ ಇರುತ್ತದೆ. ದಿನದ 24 ಗಂಟೆಗಳಲ್ಲಿ 18-20 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಎಂದೂ ತನ್ನ ಕುಟುಂಬದ ಬಗ್ಗೆ ಸ್ವಾರ್ಥ ಚಿಂತನೆ ಮಾಡದೇ ಸದಾ ಕಾಲ ದೇಶದ ಬಗ್ಗೆ ಚಿಂತಿಸುತ್ತಾ, ದೇಶದ ಜನರೇ ನನ್ನ ಕುಟುಂಬದ ಸದಸ್ಯರು ಎಂದು ಪ್ರೀತಿಸುವ ನಾಯಕರಾಗಿದ್ದಾರೆ ಎಂದು ಬಣ್ಣಿಸಿದರು.

ಈ ಸಂದರ್ಭದಲ್ಲಿ ದೇವರ ಹಿಪ್ಪರಗಿ ಮಾಜಿ ಶಾಸಕ ಸೋಮನಗೌಡ ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಮಾತನಾಡಿದರು.
ನಿಂಗರಾಜ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.

ಈರಣ್ಣ ರಾವೂರ,ಮುಳುನಗೌಡ ಪಾಟೀಲ, ಪ್ರಭುಗೌಡ ಬಿರಾದಾರ, ಶಿಲ್ಪಾ ಕುದರಗೊಂಡ,ಸಿದ್ದು ಬುಳ್ಳಾ, ರಮೇಶ ಮಸಬಿನಾಳ,ಪ್ರಕಾಶ ದೊಡಮನಿ, ಅವ್ವಣ್ಣ, ಸಾಬಣ್ಣ ಬಾಗೇವಡಿ,ರಾವುತಪ್ಪ ಸಾಹುಕಾರ ಮೂಲಿಮನಿ,ಭೀಮನಗೌಡ ಲಚ್ಯಾಣಿ,ಸಂಗನಗೌಡ ಬಿರಾದಾರ ಸೇರಿದಂತೆ ಹಲವರು ಮುಖಂಡರು ಹಾಜರಿದ್ದರು.

WhatsApp Group Join Now
Telegram Group Join Now
Share This Article