ಅಖಾಡಕ್ಕೆ ಇಳಿದ ಗೋಕಾಕ ಸಾಹುಕಾರ್: ಶೆಟ್ಟರ್ ಪರ ಪ್ರಚಾರಕ್ಕೆ ರಮೇಶ್ ಜಾರಕಿಹೊಳಿ ಜೈ!

Ravi Talawar
ಅಖಾಡಕ್ಕೆ ಇಳಿದ ಗೋಕಾಕ ಸಾಹುಕಾರ್: ಶೆಟ್ಟರ್ ಪರ ಪ್ರಚಾರಕ್ಕೆ ರಮೇಶ್ ಜಾರಕಿಹೊಳಿ ಜೈ!
WhatsApp Group Join Now
Telegram Group Join Now

ಬೆಳಗಾವಿ, ಮಾರ್ಚ್ 28: ಬೆಳಗಾವಿ ಲೋಕ ಅಖಾಡ ದಿನವೂ ರಂಗೇರುತ್ತಿದೆ. ಘಟಾನುಘಟಿ ಪೊಲಿಟಿಕಲ್ ಲೀಡರ್‌ಗಳ ಮಕ್ಕಳು ಅಖಾಡಕ್ಕೆ ಇಳಿದಿರುವುದು ಪ್ರತಿಷ್ಠೆಯ ವಿಚಾರವಾಗಿದೆ. ಹೀಗಾಗಿ ಶತಾಯಗತಾಯ ಮಗನನ್ನು ಗೆಲ್ಲಿಸಿಕೊಂಡು ಬರಬೇಕೆಂದು ಹೆಬ್ಬಾಳ್ಕರ್ ತೀವ್ರ ಕಸರತ್ತು ನಡೆಸಿದ್ದಾರೆ. ಈ ನಡುವೆ ಪರ ಊರಿನವರು ಬೇಡೆಂದು ಹಠ ಹಿಡಿದಿದ್ದ ಗೋಕಾಕ ಸಾಹುಕಾರ ಕೊನೆಗೂ ಶೆಟ್ಟರ್ ಅವರನ್ನೇ ಬಿಜೆಪಿ ಅಭ್ಯರ್ಥಿ ಎಂದು ಒಪ್ಪಿಕೊಂಡು ಪ್ರಚಾರ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ.

ಸಂಸದೆ ಮಂಗಲಾ ಅಂಗಡಿ ಅವರ ನಿವಾಸದಲ್ಲಿ ಸುಮಾರು ಹೊತ್ತು ಕೂತು ಚರ್ಚೆ ಮಾಡಿದ ಜಗದೀಶ್ ಶೆಟ್ಟರ್ ಮತ್ತು ರಮೇಶ್ ಜಾರಕಿಹೊಳಿ ಸೋಮವಾರದಿಂದ ಪ್ರಚಾರದಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದಾರೆ. ಬೆಳಗಾವಿ ಗೆದ್ದು ತರಬೇಕೆಂದು ಶೆಟ್ಟರ್ ಮನವಿ ಮಾಡಿದ್ದು ಗೆಲುವು ನಿಶ್ಚಿತ ಎಂದು ಸಾಹುಕಾರ್ ಶೆಟ್ಟರ್‌ಗೆ ಭರವಸೆ ಕೊಟ್ಟಿದ್ದಾರೆ.
ಸ್ಥಳೀಯ ಅಭ್ಯರ್ಥಿಗಳಿಗೇ ಬೆಳಗಾವಿ ಕ್ಷೇತ್ರಕ್ಕಾಗಿ ಟಿಕಟ್ ಕೊಡಬೇಕು ಎಂದು ಹಠ ಹಿಡಿದಿದ್ದ ಗೋಕಾಕ ಸಾಹುಕಾರ್ ಕೊನೆಗೂ ಶೆಟ್ಟರ್‌ಗೆ ಬೆಂಬಲ ಸೂಚಿಸಿ, ಪ್ರಚಾರ ಅಂಗಳಕ್ಕೆ ಇಳಿಯಲು ಸೂಚಿಸಿದ್ದು ಶೆಟ್ಟರ್ ಕ್ಯಾಂಪೇನ್‌ಗೆ ಮತ್ತಷ್ಟೂ ಬಲ ಬಂದಂತಾಗಿದೆ.

 

WhatsApp Group Join Now
Telegram Group Join Now
Share This Article