ಅಥಣಿ: “ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ಚುನಾವಣೆಗೆ ಪಾಪ, ಒಬ್ಬ ಮುಗ್ಧ ವ್ಯಕ್ತಿಯನ್ನು ನಿಲ್ಲಿಸಿ ತಿರುಪತಿ ನಾಮ ಹಾಕಿಸಿದ್ದಾರೆ. ಅಥಣಿ ತಾಲ್ಲೂಕಿನ ಜನ ರಮೇಶ್ ಜಾರಕಿಹೊಳಿ ಅವರನ್ನು ಬಹು ದಿನಗಳ ಹಿಂದೆಯೇ ತಿರಸ್ಕಾರ ಮಾಡಿದ್ದಾರೆ. ಆ ತಿರಸ್ಕಾರದ ಅರಿವು ಅವರಿಗೆ ಇನ್ನು ಆಗಿಲ್ಲ. ಅವರಿಗೆ ಮಾನ, ಮರ್ಯಾದೆ, ಗೌರವ ಅಂತ ಇದ್ದಿದ್ದರೆ ನಿಜವಾಗಲೂ ನಮ್ಮ ತಾಲ್ಲೂಕಿಗೆ ಅವರು ಕಾಲು ಹಾಕುತ್ತಿರಲಿಲ್ಲ. ಅವರಿಗೆ ಅಥಣಿ ಮತಕ್ಷೇತ್ರದ ಜನ ೨೦೨೩ ರಲ್ಲಿ ಹಾಗೂ ಮಧ್ಯವರ್ತಿ ಬ್ಯಾಂಕ್ ಚುನಾವಣೆಯಲ್ಲಿ ಕೂಡ ಅತಿ ದೊಡ್ಡ ಪ್ರಮಾಣದಲ್ಲಿ ಅವಮಾನ ಮಾಡಿದ್ದಾರೆ ಎಂದು ಶಾಸಕ ಲಕ್ಷö್ಮಣ ಸವದಿ ಹೇಳಿದರು
ಅಥಣಿ ಪಟ್ಟಣದ ಗೃಹ ಕಛೇರಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿ ಶಾಸಕ ಲಕ್ಷö್ಮಣ ಸವದಿ ಅಥಣಿಯಲ್ಲಿ ನಡೆದ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಯ ಚುನಾವಣಾ ಸಭೆಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಅಶ್ಲೀಲ ಹಾಗೂ ಅವಾಚ್ಚ ಮತ್ತು ಏಕವಚನದಲ್ಲಿ ಶಾಸಕ ಲಕ್ಷö್ಮಣ ಸವದಿ ವಿರುದ್ದ ಮಾತನಾಡಿದ್ದಕ್ಕೆ ಪ್ರತಿಕ್ರೀಯೆಸಿದ ಅವರು ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಚುನಾವಣೆಯ ಗೆಲುವಿನ ಬಳಿಕ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ರಮೇಶ ಜಾರಕಿಹೋಳಿ ಅವರ ಹೇಳಿಕೆ ವಿರುದ್ಧ ತೀವ್ರವಾಗಿ ಖಂಡಿಸಿ “ಅಥಣಿ ಮತಕ್ಷೇತ್ರದ ಜನ ೨೦೨೩ ರಲ್ಲಿ ಹಾಗೂ ಮಧ್ಯವರ್ತಿ ಬ್ಯಾಂಕ್ ಚುನಾವಣೆಯಲ್ಲಿ ಏನೆಂಬುದು ತೋರಿಸಿದ್ದಾರೆ. ಮತ್ತೆ ೨೦೨೮ ರಲ್ಲಿ ಕೂಡ ಏನೆಂಬುದು ತೋರಿಸುತ್ತಾರೆ ಎಂಬುದನ್ನು ಅವರು ಬರೆದು ಇಟ್ಟುಕೊಳ್ಳಲಿ. ಅಥಣಿ ತಾಲೂಕಿನ ಜನ ಬಹಳ ಸೂಕ್ಷ್ಮಮತಿ ಹೊಂದಿರತಕ್ಕಂತವರು ಮತ್ತು ಅತ್ಯಂತ ಬುದ್ಧಿಜೀವಿ ಇರತಕ್ಕಂತವರು. ಯಾರು ಯಾರಿಂದ ಬುದ್ಧಿ ಕಲಿತಕ್ಕಂತ ಅವಶ್ಯಕತೆ ಅಥಣಿ ತಾಲೂಕಿನ ಜನರಿಗೆ ಇಲ್ಲ. ಶಿವಯೋಗಿಗಳ ಪುಣ್ಯ ಭೂಮಿಯಲ್ಲಿ ಜನಿಸಿರತಕ್ಕಂತ ಜನ ಯಾವ ಸಮಯಕ್ಕೆ ಯಾರಿಗೆ ಯಾವ ರೀತಿಯ ಉತ್ತರ ಕೊಡಬೇಕು ಎಂಬುದು ನಮ್ಮ ತಾಲೂಕಿನ ಜನ ಕೊಡ್ತಾರೆ” “ಯಾರು ಜಾಣರು, ಬುದ್ಧಿಜೀವಿಗಳು ಇರುತ್ತಾರೆ ಅಂತವರಿಗೆ ಎಲ್ಲ ಸೂಕ್ಷ್ಮತೆಗಳು ಅರ್ಥ ಆಗುತ್ತವೆ. ಸೂಕ್ಷ್ಮತೆ ಇಲ್ಲದೆ ಇರುವಂತ ಜನರಿಗೆ ಯಾವುದು ಅರಿವು ಆಗುವುದಿಲ್ಲ. ಅಂತವರಿಗೆ ತನ್ನ ಗೌರವದ ಬಗ್ಗೆನೂ ಗೊತ್ತಿಲ್ಲ, ಇನ್ನೊಬ್ಬರ ಗೌರವದ ಬಗ್ಗೆನೂ ಗೊತ್ತಿಲ್ಲ. ಗೌರವ ಅಂತಕ್ಕಂತದ್ದು ಆತನಿಗೆ ಗೊತ್ತೇ ಇಲ್ಲ. ಮನುಷ್ಯನಿಗೆ ಸಂಸ್ಕಾರ ಅನ್ನೋದು ಬೇಕಾಗುತ್ತದೆ. ಆ ಸಂಸ್ಕಾರ ಇಲ್ಲದಂತ ಸಂದರ್ಭದಲ್ಲಿ ಇಂತಹ ಮಾತುಗಳು ಆಡುತ್ತಾರೆ. ನನ್ನ ತಂದೆ-ತಾಯಿ ನನಗೆ ಸಂಸ್ಕಾರ ಕೊಟ್ಟಿದ್ದಾರೆ. ಆಧ್ಯಾತ್ಮದ ಹಿನ್ನೆಲೆ ಇರತಕ್ಕಂತ ನಮ್ಮ ಮನೆತನ, ನನ್ನ ಗುರು-ಹಿರಿಯರು ತಂದೆ-ತಾಯಿ ಸಂಸ್ಕಾರ ಕೊಟ್ಟಿದ್ದಾರೆ. ಆದ್ದರಿಂದ ನಾನು ಹುಚ್ಚರ ಮಾತುಗಳಿಗೆ ಉತ್ತರಿಸುವದಿಲ್ಲ ಎಂದು ಹೇಳಿದರು.