ಆರೋಗ್ಯವಂತ ಸಮಾಜ ಕಟ್ಟಲು ಪ್ರತಿಯೊಬ್ಬರು ಕೈಜೋಡಿಸಿ: ರಮೇಶ ಬುಲೆಬುಲೆ

Ravi Talawar
ಆರೋಗ್ಯವಂತ ಸಮಾಜ ಕಟ್ಟಲು ಪ್ರತಿಯೊಬ್ಬರು ಕೈಜೋಡಿಸಿ: ರಮೇಶ ಬುಲೆಬುಲೆ
WhatsApp Group Join Now
Telegram Group Join Now

ಅಥಣಿ: ನಮ್ಮ ಸುತ್ತಮುತ್ತಲಿನ ಪರಿಸರವನ್ನು  ಸಂರಕ್ಷಣೆ ಮಾಡುವುದರ ಜೊತೆಗೆ ಆರೋಗ್ಯವಂತ ಸಮಾಜವನ್ನು ಕಟ್ಟಲು ಅನೇಕ ಸಂಘ-ಸAಸ್ಥೆಗಳು ಶ್ರಮಿಸುತ್ತಿವೆ. ಅಂತರಾಷ್ಟ್ರೀಯ ಲಯನ್ಸ್ ಕ್ಲಬ್ ಅಥಣಿ ಪಟ್ಟಣದಲ್ಲಿ ಆರಂಭಗೊAಡ ನಂತರ ಅನೇಕ ಸಾಮಾಜಿಕ ಸೇವೆಗಳನ್ನು ನೀಡುವ ಸಂಕಲ್ಪ ಹೊಂದಿದ್ದೇವೆ. ಮುಂಬರುವ ದಿನಗಳಲ್ಲಿ ಹಮ್ಮಿಕೊಳ್ಳುವ ಆರೋಗ್ಯ ತಪಾಸಣಾ ಶಿಬಿರ ಮತ್ತು ಜನಜಾಗ್ರತಾ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಅಥಣಿ ಲಯನ್ಸ್ ಕ್ಲಬ್ ಅಧ್ಯಕ್ಷ ರಮೇಶ ಬುಲಬುಲೆ  ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಲಯನ್ಸ್ ಕ್ಲಬ್ ಆರಂಭೋತ್ಸವದ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಮಾತನಾಡಿದ ಅವರು ಆರೋಗ್ಯವಂತ ಸಮಾಜವನ್ನು ಕಟ್ಟುವಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಬಹಳ ಮುಖ್ಯ. ಲಯನ್ಸ್ ಕ್ಲಬ್ ವತಿಯಿಂದ  ಉಚಿತ ಆರೋಗ್ಯ ಶಿಬಿರಗಳನ್ನು, ದುಶ್ಚಟಗಳಿಂದ ಆಗುವ ಪರಿಣಾಮಗಳ ಜಾಗೃತಿಗೆ ನಮ್ಮ ಸಂಸ್ಥೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರು ಇರುವುದರಿಂದ ಆರೋಗ್ಯಕ್ಕೆ ಸಂಬAಧಿಸಿದ ಶಿಬಿರಗಳನ್ನು ಮತ್ತು ಕಾರ್ಯಕ್ರಮಗಳ ನಡೆಸಲು ಸಹಕಾರಿಯಾಗಿದೆ. ಮುಂಬರುವ ದಿನಗಳಲ್ಲಿ ಶೈಕ್ಷಣಿಕ, ಸಾಮಾಜಿಕ, ಆರೋಗ್ಯ, ಪರಿಸರ ಸೇರಿದಂತೆ ಇನ್ನಿತರ ವಲಯಗಳಲ್ಲಿ ಲಯನ್ಸ್ ಕ್ಲಬ್ ವಿವಿಧ ಸೇವೆಗಳನ್ನು ಸಲ್ಲಿಸಲಿದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್  ಉಪಾಧ್ಯಕ್ಷ ಆನಂದ ಟೋಣಪಿ, ಕಾರ್ಯದರ್ಶಿ ವಿನೋದ ಕನಮಡಿ ಮಾತನಾಡಿದರು
ಈ ವೇಳೆ ಖಜಾಂಚಿ ಅಶೋಕ ಹೊಸೂರ, ಶಶಿಕಾಂತ ಹುಲಕುಂದ, ಮೋಹನ ಕಾಂಬಳೆ, ವೈಭವ ಐಹೊಳೆ, ರೆಹಾನ್ ಡಾಂಗೆ, ಅನಿಲ ಪಾಟೀಲ, ಬಸವರಾಜ ಬಾವಣ್ಣವರ, ಕಿರಣ ಶಿರಗುಪ್ಪಿ, ತಾಲೂಕಾ ವೈದ್ಯಾಧಿಕಾರಿ ಡಾ. ಬಸಗೌಡ ಕಾಗೆ, ಡಾ. ಮಹೇಶ್ ಕಾಪಸೆ, ಡಾ. ಜಿ ಎಸ್ ಪಾಟೀಲ, ಡಾ.ಸಂಗಮೇಶ  ಮಮದಾಪುರ, ಡಾ. ಸಿ ಎಸ್ ಪಾಟೀಲ, ಡಾ. ಸಂಜು ಕುಮಾರ ಗುಂಜಿಗಾವಿ ಸೇರಿದಂತೆ  ಅಥಣಿ ಲಯನ್ಸ್ ಕ್ಲಬ್ ನ ಸದಸ್ಯರು  ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article