ರಾಮದುರ್ಗ : ವರದಕ್ಷಣೆ ಕಿರುಕುಳ ನೀಡಿ ಮಹಿಳೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಎ-4 ಆರೋಪಿತನನ್ನು ರಾಮದುರ್ಗ ಪೊಲೀಸ್ ಠಾಣೆಯ ಪೋಲಿಸರು ಪತ್ತೆ ಮಾಡಿ ದಸ್ತಗೀರ ಮಾಡಿ ರಾಮದುರ್ಗ ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಮುಂದೆ ಹಾಜರು ಪಡೆದಿರುತ್ತಾರೆ.
ದಿನಾಂಕ 06-05-2011 ರಂದು ರಾಮದುರ್ಗ ಪೊಲೀಸ ಠಾಣಾ ವ್ಯಾಪ್ತಿಯ ರಾಮದುರ್ಗ ಪಟ್ಟಣದ ಮಹಾಂತೇಶ ನಗರದಲ್ಲಿ ಪಿರ್ಯಾದಿ ಸಿದ್ದಪ್ಪ ನಾಗಪ್ಪ ಘಾಟಗೆ ಇವರ ಅಣ್ಣನ ಮಗಳಾದ ಯಲ್ಲಮ್ಮಾ @ ನಿರ್ಮಲಾ ಕೋ ಸಂತೋಷ ಜಾಧವ (20) ಇವಸುಟ್ಟ ಮಹಾಂತೇಶ ನಗರದ ಸ್ವಗೃಹದಲ್ಲಿ ಬೆಳಗಿನ 11 ಗಂಟೆ ವೇಳೆಗೆ 1)ಸಂತೋಷ ಪ್ರೇಮನಾಥ ಜಾಧವ 2)ಶಕಂತಲಾ ಕೋಂ ಪ್ರೇಮನಾಥ ಜಾಧವ 3)ಪ್ರೇಮನಾಥ ಮಾಧವರಾವ ಜಾಧವ 4)ಸಂಬಾಜಿ ಪ್ರೇಮನಾಥ ಜಾಧವ 5)ರಮಾಬಾಯಿ ಕೋ ಅಂಬಾಜಿ ಶಿಂಧೆ ಎಲ್ಲರೂ, ಅಂದ್ರೆ ಅವಳ ಗಂಡ. ಅತ್ತೆ, ಮಾವ, ಮೈದುನ ಮತ್ತು ನಾದಿನಿ ಇದ್ದು, ಸದರಿಯವರು ಇದರಲ್ಲಿಯ ಮೃತಳಿಗೆ ಕಳೆದ 6 ತಿಂಗಳಿಂದ ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಅಂತಾ ತ್ರಾಸ ಕೊಡುತ್ತಾ ಬಂದಿದ್ದು ನಂತರ ಇದರಲ್ಲಿಯ ಪಿರ್ಯಾದಿ ಕಳೆದ ಡಿಸೆಂಬರ ತಿಂಗಳಲ್ಲಿ ಆಪಾದಿತರಿಗೆ 20 ಸಾವಿರ ರೂ ಹಣ ಕೊಟ್ಟು ನಮ್ಮ ಮಗಳಿಗೆ ಸರಿಯಾಗಿ ನೋಡಿಕೊಳ್ಳಿರಿ ಅಂತಾ ಬುದ್ದಿ ರೀತಿ ಹೇಳಿ ಹೊಗಿದ್ದರು ಕೂಡಾ ಸದರಿ ಆಪಾದಿತರು ಕೂಡಿಕೊಂಡು ಹಣದ ಸಲುವಾಗಿಯೇ ತಮ್ಮ ಸೊಸೆಗೆ ಬಡಿ, ಹೊಡಿ ಮಾಡಿ ಕೊಂದು ಮನೆಯ ಬಚ್ಚಲದಲ್ಲಿ ಹಾಕಿ ಸೀಮೆ ಎಣ್ಣೆ ಸುರುವಿ ಬೆಂಕಿ ಹಚ್ಚಿ ಸುಟ್ಟು ಕೊಲೆ ಮಾಡಿದ್ದಾರೆ.
ಸದರಿ ಪ್ರಕರಣದಲ್ಲಿ ಈಗಾಗಲೇ ಎ-1, ಎ-2 ಎ-3 ಹಾಗೂ ಎ-5 ರವರಿಗೆ ದಸ್ತಗೀರ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ. ಆದರೆ ಎ-4 ಸಂಬಾಜಿ ಪ್ರೇಮನಾಥ ಜಾಧವ ಸಾ-ಮಹಾಂತೇಶ ನಗರ ರಾಮದುರ್ಗ ಇತನು ಗುನ್ನೆ ಲಾಗಾಯ್ತಿನಿಂದ ಪರಾರಿ ಇದ್ದು, ಪ್ರಕರಣವು 2022 ರಲ್ಲಿ ಎಲ್.ಪಿ.ಆರ್ ಪ್ರಕರಣವಾಗಿತ್ತು.
ಡಾ. ಚೇತನ್ ಸಿಂಗ್ ರಾಠೋರ್ ಐಪಿಎಸ್, ಪೋಲೀಸ್ ಮಹಾನಿರೀಕ್ಷಕರು, ಉತ್ತರ ವಲಯ ಬೆಳಗಾವಿ ರವರು ದಿನಾಂಕ 11/11/2025 ರಂದು ರಾಮದುರ್ಗ ಪೊಲೀಸ್ ಠಾಣೆ ಪರಿವೀಕ್ಷಣೆ ಕಾಲಕ್ಕೆ ಸದರಿ ಎಲ್.ಪಿ.ಆರ್ ಪ್ರಕರಣದಲ್ಲಿಯ ಎ-4 ಆರೋಪಿ ಸಂಬಾಜಿ ಪ್ರೇಮನಾಥ ಜಾಧವ ಸಾ-ಮಹಾಂತೇಶ ನಗರ ರಾಮದುರ್ಗ ಈತನ ಪತ್ತೆಗಾಗಿ ನುರಿತ ತಂಡ ರಚನೆ ಮಾಡಿ ಆರೋಪಿ ಪತ್ತೆ ಮಾಡುವಂತೆ ಸೂಕ್ತ ಸಲಹೆ ಸೂಚನೆಯನ್ನು ನೀಡಿರುತ್ತಾರೆ. ಅದರಂತೆ ಡಾ: ಭೀಮಾಶಂಕರ ಗುಳೇದ ಪೊಲೀಸ್ ಅಧೀಕ್ಷಕರು ಬೆಳಗಾವಿರವರು, ಆರ್.ವಿ. ಬಸರಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಬೆಳಗಾವಿ ಜಿಲ್ಲೆ, ಹಾಗೂ ಚಿದಂಬರ ವಿ. ಮಡಿವಾಳರ ಪೊಲೀಸ್ ಉಪಾಧೀಕ್ಷಕರು ರಾಮದುರ್ಗ ಉಪವಿಭಾಗರವರ ಮಾರ್ಗದರ್ಶನದಲ್ಲಿ, ವಿ. ಬಿ. ಬಡಿಗೇರ ಆರಕ್ಷಕ ವೃತ್ತ ನಿರೀಕ್ಷಕರು ರಾಮದುರ್ಗ ರವರ ನೇತೃತ್ವದಲ್ಲಿ ಎಸ್.ಜಿ.ಮುನ್ಯಾಳ ಪಿ.ಎಸ್.ಐ ಕಾ&ಸು ರಾಮದುರ್ಗ ಪೊಲೀಸ್ ಠಾಣೆ. ಶ್ರೀ ಎಸ್.ಎಮ್. ಜಾಧವ ಸಿಪಿಸಿ-3308, ಹಾಗೂ ಜಿ.ಬಿ.ಶಿವನಾಯ್ಕರ ಸಿಪಿಸಿ-3296 ಇಬ್ಬರೂ ರಾಮದುರ್ಗ ಪೊಲೀಸ್ ಠಾಣೆ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿಯಾದ ವಿನೋದ ಠಕ್ಕನ್ನವರರನ್ನೊಳಗೊಂಡ ತಂಡ ರಚನೆ ಮಾಡಿ ಈ ದಿವಸ ದಿನಾಂಕ 22-12-2025 ರಂದು ಸದರಿ ಪ್ರಕರಣದ ಎ-4 ಸಂಬಾಜಿ ಪ್ರೇಮನಾಥ ಜಾಧವ ಸಾ-ಮಹಾಂತೇಶ ನಗರ ರಾಮದುರ್ಗ ಈತನನ್ನು ಹುಬ್ಬಳ್ಳಿಯ ಮಂಜುನಾಥ ನಗರದಲ್ಲಿ ಪತ್ತೆಮಾಡಿ ದಸ್ತಗೀರ ಮಾಡಿ ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ರಾಮದುರ್ಗರವರ ಮುಂದೆ ದಿನಾಂಕ 22/12/2025 ರಂದು ಹಾಜರು ಪಡಿಸಿದ್ದು ಇರುತ್ತದೆ ಎಂದು ರಾಮದುರ್ಗ ಪೋಲಿಸ್ ಠಾಣೆ ಪೋಲಿಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


