ಸರ್ವಧರ್ಮ ಸಮನ್ವಯ ಸಾರಿದ ನಾಗಣಸೂರಿನ ತುಪ್ಪಿನ ಮಠದಲ್ಲಿ ಸಂಭ್ರಮದ ರಂಜಾನ್

Ravi Talawar
ಸರ್ವಧರ್ಮ ಸಮನ್ವಯ ಸಾರಿದ ನಾಗಣಸೂರಿನ ತುಪ್ಪಿನ ಮಠದಲ್ಲಿ ಸಂಭ್ರಮದ ರಂಜಾನ್
WhatsApp Group Join Now
Telegram Group Join Now

ಸೊಲ್ಲಾಪುರ,ಏ.11: ಸರ್ವಧರ್ಮ ಸಮನ್ವಯತೆ ಮೆರೆಯುವ ಜಗದ್ಗುರು ಬಸವಲಿಂಗ ಮಹಾ ಶಿವಯೋಗಿಗಳ ಸೊಲ್ಲಾಪುರ ಜಿಲ್ಲೆಯ ನಾಗಣಸೂರಿನ ತುಪ್ಪಿನ ಮಠದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಭಕ್ತರಿಗೆ ವಿಶೇಷ ಪ್ರಸಾದ ವ್ಯವಸ್ಥೆ ಮಾಡಲಾಯಿತು. ಇಸ್ಲಾಂ ಬಾಂಧವರಿಗೆ ತುಪ್ಪದ ಹೋಳಿಗೆ, ಸಿಹಿ ಖಾದ್ಯ ಸೇರಿದಂತೆ ವಿಶೇಷ ಪ್ರಸಾದ ಬಡಿಸಿ ಮಠದಲ್ಲಿ ಎಲ್ಲರೂ ರಂಜಾನ್ ಹಬ್ಬವನ್ನು ಸಂಭ್ರಮಿಸಿದರು.

ಜಾತಿ,ಮತ, ಪಂಥವನ್ನು ಪರಿಗಣಿಸದೇ ಎಲ್ಲರೂ ಭಕ್ತರು, ಎಲ್ಲರೂ ದೇವರ ಮಕ್ಕಳು ಎಂಬ ವಿಶೇಷ ಕಾಳಜಿ, ಪ್ರೀತಿ, ವಾತ್ಸಲ್ಯದೊಂದಿಗೆ ಮಠದ ಶ್ರೀಗಳು ಪ್ರತಿ ವರ್ಷವೂ ಹಬ್ಬ, ಹರಿದಿನಗಳನ್ನು ಸಂಭ್ರಮದಿಂದ ಆಚರಿಸಿ, ಪ್ರಸಾದ ವಿತರಿಸಿ ಆಶೀರ್ವದಿಸುತ್ತಾರೆ. ಮಠದ ಜಾತ್ರೆಯಲ್ಲಿ ನಿತ್ಯ ವರ್ಷವೂ ೫ ಲಕ್ಷ ಭಕ್ತ ಸಮೂಹ ಜಮಾವಣೆಗೊಳ್ಳುತ್ತದೆ.

ಅವರಿವರು ಎನ್ನದೇ ಎಲ್ಲರೂ ಮಠದ ಭಕ್ತರು ಎಂಬ ವೇದವಾಕ್ಯದೊಂದಿಗೆ ಮಠದ ಹಿಮಾಲಯಯೋಗಿ ಶ್ರೀಗಳು ಎಲ್ಲರಿಗೂ ಸ್ವತಃ ಪ್ರಸಾದ ವಿತರಿಸಿದರು. ಪೀಠಾಧಿಪತಿಗಳ ಅಮೃತ ಸಮಾನ ಮಾತುಗಳು ಎಲ್ಲರ ಕರ್ಣಗಳನ್ನು, ಹೃದಯಗಳನ್ನು ತುಂಬಿಸಿದವು.

ಸರ್ವಧರ್ಮ ಸಮನ್ವಯ ಸಾರಿದ ನಾಗಣಸೂರಿನ ತುಪ್ಪಿನ ಮಠದಲ್ಲಿ ಸಂಭ್ರಮದ ರಂಜಾನ್ ಸೊಲ್ಲಾಪುರ,ಏ.೧೧: ಸರ್ವಧರ್ಮ ಸಮನ್ವಯತೆ ಮೆರೆಯುವ ಜಗದ್ಗುರು ಬಸವಲಿಂಗ ಮಹಾ ಶಿವಯೋಗಿಗಳ ಸೊಲ್ಲಾಪುರ ಜಿಲ್ಲೆಯ ನಾಗಣಸೂರಿನ ತುಪ್ಪಿನ ಮಠದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಭಕ್ತರಿಗೆ ವಿಶೇಷ ಪ್ರಸಾದ ವ್ಯವಸ್ಥೆ ಮಾಡಲಾಯಿತು. ಇಸ್ಲಾಂ ಬಾಂಧವರಿಗೆ ತುಪ್ಪದ ಹೋಳಿಗೆ, ಸಿಹಿ ಖಾದ್ಯ ಸೇರಿದಂತೆ ವಿಶೇಷ ಪ್ರಸಾದ ಬಡಿಸಿ ಮಠದಲ್ಲಿ ಎಲ್ಲರೂ ರಂಜಾನ್ ಹಬ್ಬವನ್ನು ಸಂಭ್ರಮಿಸಿದರು.

ಜಾತಿ,ಮತ, ಪಂಥವನ್ನು ಪರಿಗಣಿಸದೇ ಎಲ್ಲರೂ ಭಕ್ತರು, ಎಲ್ಲರೂ ದೇವರ ಮಕ್ಕಳು ಎಂಬ ವಿಶೇಷ ಕಾಳಜಿ, ಪ್ರೀತಿ, ವಾತ್ಸಲ್ಯದೊಂದಿಗೆ ಮಠದ ಶ್ರೀಗಳು ಪ್ರತಿ ವರ್ಷವೂ ಹಬ್ಬ, ಹರಿದಿನಗಳನ್ನು ಸಂಭ್ರಮದಿಂದ ಆಚರಿಸಿ, ಪ್ರಸಾದ ವಿತರಿಸಿ ಆಶೀರ್ವದಿಸುತ್ತಾರೆ. ಮಠದ ಜಾತ್ರೆಯಲ್ಲಿ ನಿತ್ಯ ವರ್ಷವೂ ೫ ಲಕ್ಷ ಭಕ್ತ ಸಮೂಹ ಜಮಾವಣೆಗೊಳ್ಳುತ್ತದೆ.

ಅವರಿವರು ಎನ್ನದೇ ಎಲ್ಲರೂ ಮಠದ ಭಕ್ತರು ಎಂಬ ವೇದವಾಕ್ಯದೊಂದಿಗೆ ಮಠದ ಹಿಮಾಲಯಯೋಗಿ ಶ್ರೀಗಳು ಎಲ್ಲರಿಗೂ ಸ್ವತಃ ಪ್ರಸಾದ ವಿತರಿಸಿದರು. ಪೀಠಾಧಿಪತಿಗಳ ಅಮೃತ ಸಮಾನ ಮಾತುಗಳು ಎಲ್ಲರ ಕರ್ಣಗಳನ್ನು, ಹೃದಯಗಳನ್ನು ತುಂಬಿಸಿದವು.

WhatsApp Group Join Now
Telegram Group Join Now
Share This Article