ಕೊಪ್ಪಳದಲ್ಲಿ ರಮಜಾನ್ ಹಬ್ಬ ಆಚರಣೆ: ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ

Ravi Talawar
ಕೊಪ್ಪಳದಲ್ಲಿ ರಮಜಾನ್ ಹಬ್ಬ ಆಚರಣೆ: ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ
WhatsApp Group Join Now
Telegram Group Join Now
ಕೊಪ್ಪಳ ಏಪ್ರಿಲ್ 11:  ಮುಸ್ಲಿಂ ಸಮುದಾಯದ ಪವಿತ್ರ ರಮಜಾನ್ ಹಬ್ಬ ಆಚರಣೆಯನ್ನು ಗುರುವಾರ ಬೆಳಿಗ್ಗೆ ಇಲ್ಲಿನ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದರ ಮೂಲಕ ಆಚರಿಸಿದರು.
ಒಂದು ತಿಂಗಳ ಕಾಲ ರೋಜಾ ಉಪವಾಸ ಆಚರಣೆ ಮಾಡುವುದರ ಮೂಲಕ ರಂಜಾನ್ ಮಾಸಾಚರಣಯ ಮುಕ್ತಾಯದ ಬಳಿಕ ಹಬ್ಬವನ್ನು ಮುಸ್ಲಿಂ ಬಾಂಧವರು ಶಾಂತಿಯುತವಾಗಿ ಆಚರಿಸಿದರು ಕೊಪ್ಪಳದ ಖಾಜಿ ಸಾಹೇಬರವರು ಸಾಮೂಹಿಕ ಪ್ರಾರ್ಥನೆಯ ನೇತೃತ್ವ ವಹಿಸಿಕೊಂಡಿದ್ದರು
ಇದರಲ್ಲಿ ಮುಸ್ಲಿಂ ಮುಖಂಡರಾದ ಹಿರಿಯ ನ್ಯಾಯವಾದಿ ಆಸಿಫ ಅಲಿ ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಅಮ್ಜದ್ ಪಟೇಲ್ ಸೈಯದ್ ಫೌಂಡೇಶನ್ ಅಧ್ಯಕ್ಷ ಕೆಎಂಸೈಯದ್ ನಗರ ಕಾಂಗ್ರೆಸ್ ಅಧ್ಯಕ್ಷ ಎಂ ಪಾಷ ಕಾಟನ್ ಅಂಜುಮನ್ ಕಮಿಟಿ ಅಧ್ಯಕ್ಷ ಎಂ ಡಿ  ಆಸಿಫ್ ಕರ್ಕಿಹಳ್ಳಿ ಹಿರಿಯ ಪತ್ರಕರ್ತ ಎಂ ಸಾಧಿಕಲಿ ಮಾನ್ವಿ ಪಾಷಾ ಹುಸೇನ್ ಪೀರಾ ಮುಜಾವರ ಅಬ್ದುಲ್  ಅಜೀಜ್ ಮಾನ್ವಿ ಕಾರ್ ಸೈಯದ್ ನಸಿರುದ್ದೀನ್ ಹುಸೇನ ಸೈಯದ್ ಮಹೆ ಮೋದ ಹುಸೇನಿ ಬಲ್ಲೆ ಅನೇಕರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು
ಪ್ರಾರ್ಥನಾ ಸ್ಥಳಕ್ಕೆ ಶಾಸಕ ಕೆ ರಾಘವೇಂದ್ರ ಹಿಟ್ನಾಳ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿ ಅಭ್ಯರ್ಥಿ ಡಾಕ್ಟರ್ ಕೆ ಬಸವರಾಜ್ ಯುವ ನಾಯಕ ಅಮರೇಶ್ ಕರಡಿ ಬಸವರಾಜ್ ಭೋವಿ ರಾಜಶೇಖರ್ ಅಡೂರ್ ಈರಣ್ಣ ಗಾಣಿಗೇರ್ ಮತ್ತಿತರರು ಪಾಲ್ಗೊಂಡು ಪರಸ್ಪರ ರಂಜಾನ್ ಹಬ್ಬದ ಶುಭಾಶಯಗಳು ವಿನಿಮಯ ಮಾಡಿಕೊಂಡರು
WhatsApp Group Join Now
Telegram Group Join Now
Share This Article