ರಾಮಲಲ್ಲಾನ ಪ್ರಾಣ ಪ್ರತಿಷ್ಟಾಪನೆ: ಜನವರಿ 11ಕ್ಕೆ ಸಂಭ್ರಮದ ವರ್ಷಾಚರಣೆ

Ravi Talawar
ರಾಮಲಲ್ಲಾನ ಪ್ರಾಣ ಪ್ರತಿಷ್ಟಾಪನೆ: ಜನವರಿ 11ಕ್ಕೆ ಸಂಭ್ರಮದ ವರ್ಷಾಚರಣೆ
WhatsApp Group Join Now
Telegram Group Join Now

ಅಯೋಧ್ಯೆ(ಉತ್ತರ ಪ್ರದೇಶ): ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಟಾಪನೆ ಮಾಡಿ 2025ಕ್ಕೆ ಒಂದು ವರ್ಷ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಜನವರಿಯ ದ್ವಾದಶಿಯಂದು ಸಂಭ್ರಮಾಚರಣೆಗೆ ಸಿದ್ಧತೆ ನಡೆಸಲಾಗುತ್ತಿದೆ.

ಈ ಕುರಿತು ಮಾತನಾಡಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​​ನ ಪ್ರಧಾನ ಕಾರ್ಯದರ್ಶಿ ಚಂಪತ್​ ರೈ, “ಪ್ರಾಣ ಪ್ರತಿಷ್ಟಾಪನೆ ನಡೆಸಿದ ದಿನ ಜನವರಿ 11ರಂದು ಪುಷ್ಯಾ ಶುಕ್ಲಾ ಪ್ರಾಣ ಪ್ರತಿಷ್ಟಾಪನೆ ದಿನ ಬರುತ್ತದೆ. ವಿವಾಹ ಪಂಚಮಿ, ಮೌನಿ ಅಮವಾಸ್ಯೆ, ಶಿವರಾತ್ರಿ ಅಮವಾಸ್ಯೆ, ಏಕಾದಶಿ ಆಚರಣೆ ಮಾಡುವಂತೆ ಈ ದಿನವನ್ನೂ ಕೂಡ ಹಿಂದೂ ಸಂಪ್ರದಾಯದಲ್ಲಿ ಆಚರಿಸಲಾಗುವುದು” ಎಂದರು.

“ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮೂರು ದಿನ ಕಾರ್ಯಕ್ರಮ ಆಯೋಜಿಸಲಾಗಿದೆ. ಜನವರಿ 11 ಅನ್ನು ಪ್ರತಿಷ್ಠಾಪನಾ ದ್ವಾದಶಿ ಎಂಬ ಹೆಸರಿನಲ್ಲಿ ಆಚರಣೆ ಮಾಡಲಾಗುವುದು. ನಿಗದಿತ ಸಮಯದಲ್ಲಿ ದೇಗುಲದ ಸಂಪೂರ್ಣ ನಿರ್ಮಾಣ ಕಾರ್ಯ ಮುಗಿಯಲಿದೆ. ರಾಮ ಜನ್ಮಭೂಮಿ ಸಂಕೀರ್ಣದಲ್ಲಿ 18 ಇತರೆ ದೇಗುಲಗಳನ್ನು ನಿರ್ಮಿಸಲಾಗುತ್ತಿದೆ. ದೇಗುಲದ ಸುತ್ತ ಒಂದಾದ ಬಳಿಕ ಒಂದು ದೇಗುಲ ನಿರ್ಮಾಣವಾಗುತ್ತದೆ” ಎಂದು ಮಾಹಿತಿ ನೀಡಿದರು.

WhatsApp Group Join Now
Telegram Group Join Now
Share This Article