ಮೈಸೂರಿನಲ್ಲಿ ಪೆದ್ದಿ ಶೂಟಿಂಗ್  1000 ಡ್ಯಾನ್ಸರ್ಸ್ ಜೊತೆ ರಾಮ್ ಚರಣ್ ಸ್ಟೆಪ್ಸ್

Ravi Talawar
ಮೈಸೂರಿನಲ್ಲಿ ಪೆದ್ದಿ ಶೂಟಿಂಗ್  1000 ಡ್ಯಾನ್ಸರ್ಸ್ ಜೊತೆ ರಾಮ್ ಚರಣ್ ಸ್ಟೆಪ್ಸ್
WhatsApp Group Join Now
Telegram Group Join Now
      ಗ್ಲೋಬಲ್ ಸ್ಟಾರ್ ರಾಮ್ ಚರಣ್ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ಪೆದ್ದಿ’. ಈಗಾಗಲೇ ರಿಲೀಸ್ ಆಗಿರುವ ಟೀಸರ್ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ. ಗೌರಿ ಗಣೇಶ ಹಬ್ಬದ ನಡುವೆಯೇ ಚಿತ್ರತಂಡ ಮೈಸೂರಿನಲ್ಲಿ ಶೂಟಿಂಗ್ ನಲ್ಲಿ  ತೊಡಗಿಸಿಕೊಂಡಿತ್ತು.
     ಮೈಸೂರಿನಲ್ಲಿ ಅದ್ಧೂರಿ ಸೆಟ್ ಹಾಕಿ ಮಾಸ್ ಸಾಂಗ್ ವೊಂದನ್ನು ಶೂಟಿಂಗ್ ನಡೆಸಲಾಗಿದೆ. 1000 ಡ್ಯಾನ್ಸರ್ಸ್ ಜೊತೆ  ರಾಮ್ ಚರಣ್ ಹಾಡಿಗೆ ಹೆಜ್ಜೆ ಹಾಕಿದ್ದು, ಖ್ಯಾತ ಡ್ಯಾನ್ಸ್ ಮಾಸ್ಟರ್ ಜಾನಿ ಈ ಹಾಡಿಗೆ  ಕೊರಿಯಾಗ್ರಾಫ್ ಮಾಡಿದ್ದಾರೆ. ಬಹಳ ಅದ್ಧೂರಿಯಾಗಿ ದೊಡ್ಡ ಬಜೆಟ್ ನಲ್ಲಿ ಈ ಸಾಂಗ್ ಚಿತ್ರೀಕರಣ
ನಡೆಸಲಾಗಿದೆ.
      ಉಪ್ಪೇನ ನಿರ್ದೇಶಕ ಬುಚ್ಚಿಬಾಬು ಸನಾ ನಿರ್ದೇಶನ ‘ಪೆದ್ದಿ’ ಸ್ಫೋರ್ಟ್ ಆಕ್ಷನ್ ಡ್ರಾಮಾ ಕಥಾಹಂದರಹೊಂದಿದೆ. ರಾಮ್ ಚರಣ್‌ಗೆ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್,  ಜಗಪತಿ ಬಾಬು ಮತ್ತು ದಿವೇಂದು ಶರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
     ಈ ಚಿತ್ರಕ್ಕೆ ಎ ಆರ್ ರೆಹಮಾನ್ ಸಂಗೀತ ನೀಡುತ್ತಿದ್ದು, ವೃದ್ಧಿ ಸಿನಿಮಾಸ್ ಬ್ಯಾನರ್ ನಡಿ ವೆಂಕಟ ಸತೀಶ್ ಕಿಲಾರು ಹಣ ಹಾಕುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಚಿತ್ರ ಪ್ರೆಸೆಂಟ್ ಮಾಡುತ್ತಿದ್ದಾದೆ. ಆರ್. ರತ್ನವೇಲು ಛಾಯಾಗ್ರಹಣ ಹಾಗು ನವೀನ್ ನೂಲಿ ಸಂಕಲನ‌ ಚಿತ್ರಕ್ಕಿದೆ. 2026ರ ಮಾರ್ಚ್ 27ಕ್ಕೆ ‘ಪೆದ್ದಿ’ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ
ಬಿಡುಗಡೆಯಾಲಿದೆ.
WhatsApp Group Join Now
Telegram Group Join Now
Share This Article