ಬಳ್ಳಾರಿ ಆ 13. ಕನಿಷ್ಠ ವೇತನ 10,000 ರೂಪಾಯಿ,ಅಂಗನವಾಡಿ ಕಾರ್ಯಕರ್ತರಿಗೆ ನೀಡುತ್ತಿರುವ ಹೆಚ್ಚುವರಿ ಒಂದು ಸಾವಿರ ರೂಪಾಯಿಗಳನ್ನು ನಮಗೂ ನೀಡಬೇಕು ಎಂದು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ನಡೆಸುತ್ತಿರುವ ಧರಣಿ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ.
ಈ ಅಹೋ ರಾತ್ರಿ ಧರಣಿಯಲ್ಲಿ ಧರಣಿ ಕುಳಿತ ಆಶಾ ಕಾರ್ಯಕರ್ತೆಯರು ಸುರಿಯುತ್ತಿರುವ ಮಳೆಯಲ್ಲಿ ಛತ್ರಿ ಹಿಡಿದುಕೊಂಡು ಕೂತು ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡರು. ಇಂದಿನ ಧರಣಿಯಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಗೌರವ ಅಧ್ಯಕ್ಷರಾದ ಶಾಂತ, ಎಸ್ ಯು ಸಿಐನ ಸೋಮಶೇಖರ್, ನಾಗರಿಕ ಹೋರಾಟ ಸಮಿತಿಯ ಸೋಮಶೇಖರ್ ಗೌಡ, ಸತ್ಯ ಬಾಬು ಸೇರಿದಂತೆ ನೂರಾರು ಆಶಾ ಕಾರ್ಯಕರ್ತೆಯರು ಈ ಧರಣಿಯಲ್ಲಿ ಪಾಲ್ಗೊಂಡಿದ್ದರು.