ರಾಯಬಾಗ : ರಕ್ಷಾ ಬಂಧನ ಹಬ್ಬವು ಒಂದೇ ಜಾತಿಗೆ ಸೀಮಿತ ಇಲ್ಲ. ಇದು ಸರ್ವ ಧರ್ಮಿಯರು ಆಚರಿಸುವಂತ ಹಬ್ಬವಾಗಿದೆ. ಅಣ್ಣ ತಂಗಿ, ಅಕ್ಕ ಸಂಬಂಧವನ್ನು ಗಟ್ಟಿ ಗೊಳಿಸುವ ಹಬ್ಬವಾಗಿದೆ ಎಂದು 108 ಡಾ. ಶ್ರೀ ಸಿದ್ಧಸೇನ ಮುನಿ ಮಹಾರಾಜರು ಹೇಳಿದರು.
ತಾಲೂಕಿನ ನಸಲಾಪೂರ ಗ್ರಾಮದಲ್ಲಿ ರಕ್ಷಾಬಂಧನ ವಿಧಾನ ಕಾರ್ಯಕ್ರಮದ ನಿಮಿತ್ತ 700 ಜನ ಅಣ್ಣ ತಂಗಿಯರು ರಕ್ಷಾ ಸೂತ್ರ ಕಟ್ಟಿ, 700 ಮುನಿಗಳಿಗೆ ಶ್ರೀಫಲ ವಿತರಿಸಿದರು. ಮಹಾರಾಜರು ಮಾತನಾಡಿ ರಕ್ಷಾ ಬಂಧನ ಹಬ್ಬಕ್ಕೆ ಮಾತ್ರ ಸೀಮಿತ ಇಲ್ಲ. ಇದು ಅಣ್ಣ ತಂಗಿ ಜೀವನ ಪರ್ಯಂತ ಬಂಧನವಾಗಿರುತ್ತದೆ. ಇದು ಇತಿಹಾಸದಿಂದ ನಡೆದು ಕೊಂಡು ಬಂದಿರುವ ಪರಂಪರೆಯಾಗಿದೆ. ಭಾರತ ದೇಶ ಹಲವು ಸಂಸ್ಕೃತಿ ಒಳಗೊಂಡ ದೇಶ. ಇಲ್ಲಿ ರಕ್ಷಾಬಂಧನ, ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ಹಲವು ಕಾರ್ಯಕ್ರಮಗಳ ಅದರದ್ದೆ ಆದ ಮಹತ್ವ ಪಡೆದುಕೊಂಡಿದೆ. ಇದನ್ನೆಲ್ಲ ನಾವು ಆಚರಿಸಬೇಕು ಕರೆ ನೀಡಿದರು.
700 ಜನ ಋಷಿಮುನಿಗಳು ತಪಸ್ಸು ಮಾಡುವಾಗ ಭಂಗ ಮಾಡಲು ಪ್ರಯತ್ನಿಸುವಾಗ ಮುನಿ ವಿಷ್ಣುಕುಮಾರ ಅವರಿಂದ 700 ಜನರನ್ನು ರಕ್ಷಣೆ ಮಾಡಿದ್ದರಿಂದ ರಕ್ಷಾ ಬಂಧನ ಆಚರಿಸಲಾಗುತ್ತದೆ. ಇದು ಬಹಳದಿನದಿಂದ ನಡೆದುಕೊಂಡು ಬರುತ್ತಿದೆ ಎಂದರು.ಶ್ರೀಗಳ ನೇತೃತ್ವದಲ್ಲಿ ರಕ್ಷಾ ಬಂಧನ ನಿಮಿತ್ತ ನಸಲಾಪೂರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಮಾಡಲಾಯಿತು. ಉಗಾರದ ವಿಫುಲ್ ಹವಳೆ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ರಾಜೀವ ಬಯ್ಯಾಜಿ, ಸೇರಿದಂತೆ ಸಹಸ್ರಾರು ಶ್ರಾವಕ ಶ್ರಾವಕಿಯರು ಉಪಸ್ಥಿತರಿದ್ದರು. .ಸುನಿಲ ಉಪಾಧ್ಯೆ, ತಮ್ಮಾಣಿ ಉಪಾದ್ಯೆ, ಶಾಸ್ತ್ರ ಬೋಧನೆ ಮಾಡಿದರು.