ನೇಸರಗಿಯಲ್ಲಿ ಸಡಗರ, ಸಂಭ್ರಮದ ರಾಜ್ಯೋತ್ಸವ: ಕನ್ನಡ ನಾಡು, ನುಡಿ ರಕ್ಷಣೆಗೆ ನಾವೆಲ್ಲರೂ ಬದ್ಧರಾಗೋಣ : ನಾನಾಸಾಹೇಬ ಪಾಟೀಲ 

Ravi Talawar
ನೇಸರಗಿಯಲ್ಲಿ ಸಡಗರ, ಸಂಭ್ರಮದ ರಾಜ್ಯೋತ್ಸವ:  ಕನ್ನಡ ನಾಡು, ನುಡಿ ರಕ್ಷಣೆಗೆ ನಾವೆಲ್ಲರೂ ಬದ್ಧರಾಗೋಣ : ನಾನಾಸಾಹೇಬ ಪಾಟೀಲ 
WhatsApp Group Join Now
Telegram Group Join Now

 

ನೇಸರಗಿ. ಕನ್ನಡ ನುಡಿ ನಮ್ಮೆಲ್ಲರ ಉಸಿರಾಗಿದ್ದು ಆ ತಾಯಿ ಭುವನೇಶ್ವರಿ ಆಶೀರ್ವಾದ ನಮ್ಮೆಲ್ಲರ ಮೇಲಿದ್ದು  ಕನ್ನಡ ಜಲ, ನೆಲ, ಸ್ವಾಭಿಮಾನ ರಕ್ಷಣೆಗೆ ನಾವೆಲ್ಲರೂ ಬದ್ಧರಾಗೋಣ ಎಂದು ಬೆಳಗಾವಿ ಜಿಲ್ಲಾ ಸಹಕಾರಿ ಮುಖಂಡ ನಾನಾಸಾಹೇಬ ಪಾಟೀಲ ಹೇಳಿದರು.
    ಅವರು ನ. 1 ರಂದು 70 ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ನೇಸರಗಿ  ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ತಾಯಿ ಕನ್ನಡಾಂಬೆ ಭುವನೇಶ್ವರಿಗೆ ಪೂಜೆ ನೆರವೇರಿಸಿ ಕನ್ನಡ ರಾಜ್ಯೋತ್ಸವದ ಅದ್ದೂರಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ ನೇಸರಗಿ ಭಾಗದ ಜನ ಇಷ್ಟೊಂದು ಅದ್ದೂರಿಯಾಗಿ ರಾಜ್ಯೋತ್ಸವ ಆಚರಣೆ ಮಾಡುತ್ತಿರುವದು ಹೆಮ್ಮೆ ಎಂದರು.
     ಪೂಜೆಯ ನಂತರ ಬಜಾರ ಪೇಟೆ, ಕರ್ನಾಟಕ ಚೌಕ, ಜತ್ತ್ ಜಂಬೋಟಿ ರಸ್ತೆಯ ಮೂಲಕ ಬಸ್ ನಿಲ್ದಾಣದವರೆಗೆ ಬೃಹತ್ ಮೆರವಣಿಗೆ ನೆರವೇರಿತು.
    ನಾಡಿದ ಹೋರಾಟಗಾರರು, ರಾಜ, ಮಹಾರಾಜರ ರೂಪವೇಶಗಳಿಂದ ಸುಮಾರು ಟ್ರಾಕ್ಟರಗಳಲ್ಲಿ  ತಾಯಿ ಚನ್ನಮ್ಮ, ಒನಕೆ ಒಬ್ಬವ್ವ, ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ, ಕೃಷ್ಣ ದೇವರಾಯ ವಡೆಯರ, ಅನುಭವ ಮಂಟಪ  ಮುಂತಾದ ಗಣ್ಯಮಾನ್ಯರ ರೂಪ ವೇಷಗಳಿಂದ ಶಾಲಾ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳು ಆಕರ್ಷಿತರಾದರು. ಕುದುರೆ ಸವಾರಿ, ವಿದ್ಯಾರ್ಥಿ, ವಿದ್ಯಾರ್ಥಿನೀಯರ ಲೇಜಿಮ್, ಡೊಳ್ಳು ಕುಣಿತ, ಡಾಲಬಿ ಹಾಡಿಗೆ ಯುವ ಪಡೆ ಕುಣಿದು ಕುಪ್ಪಳಿಸಿದರು.
     ಈ ಸಂದರ್ಭದಲ್ಲಿ ಯುವ ಮುಖಂಡ ಸಚಿನ ಪಾಟೀಲ,  ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ ಸೋಮಣ್ಣವರ, ಗ್ರಾ ಪಂ. ಅಧ್ಯಕ್ಷ ವೀರಭದ್ರ ಚೋಭಾರಿ,ರಾಜ್ಯೋತ್ಸವ ಉತ್ಸವ ಸಮಿತಿ ಅಧ್ಯಕ್ಷ ಗುರು ತುಬಚಿ,ಪ್ರದೀಪ ದೊಡ್ಡಗೌಡರ,   ಮಾಜಿ ಎ ಪಿ ಎಮ್ ಸಿ ಅಧ್ಯಕ್ಷ ಬರಮಣ್ಣ  ಸತ್ತೇನ್ನವರ,ಶ್ರೀ ವೀರಭದ್ರೇಶ್ವರ ಪಿಕೆಪಿಎಸ್ ಅಧ್ಯಕ್ಷ ಸೋಮನಗೌಡ ಪಾಟೀಲ,ಬಾಳಪ್ಪ ಮಾಳಗಿ,ಚನಗೌಡ ಪಾಟೀಲ, ಗ್ರಾ ಪಂ ಸದಸ್ಯರಾದ ಮಲ್ಲಿಕಾರ್ಜುನ ಸೋಮಣ್ಣವರ, ನಿಂಗಪ್ಪ ತಳವಾರ, ತೇಜಪ್ಪಗೌಡ ಪಾಟೀಲ, ವಿಷ್ಣು ಮೂಲಿಮನಿ, ಯಮನಪ್ಪ ಪೂಜೇರಿ,ಸತಾರ ಮೋಕಾಸಿ, ಪ್ರಕಾಶ ತೋಟಗಿ,ದೀಪಾ ಅಗಸಿಮನಿ,ಗೀತಾ ಕಂಡ್ರಿ,ಕವಿತಾ ಮದವಾಲ, ಸಿದ್ದವ್ವ ಚಿಗರಿ,ಹಾಗೂ ಮಂಜು ಮಾದೇನ್ನವರ, ಡಿ ಎಸ್ ಎಸ್ ಅಧ್ಯಕ್ಷರಾದ ರಮೇಶ ರಾಯಪ್ಪಗೋಳ, ಸುರೇಶ ರಾಯಪ್ಪಗೋಳ,ಅಡಿವಪ್ಪ ಚಿಗರಿ, ಸುರೇಶ ಅಗಸಿಮನಿ,ನೇಸರಗಿ ಸರ್ಕಲ್ ಜಗದೀಶ ಚೂರಿ, ಸಂತೋಷ ಪಾಟೀಲ,ಈಶ್ವರ ಚೋಭಾರಿ, ಬಸವಂತ ಸೋಮಣ್ಣವರ, ಸುರೇಶ ನವಲಗಟ್ಟಿ,ರಾಜಶೇಖರ ಗೆಜ್ಜಿ, ಬಸವರಾಜ ಕಾರಜೋಳ,  ನೇಸರಗಿ ವಿದ್ಯಾ ಮಂದಿರ ಪ್ರೌಢಶಾಲೆಯ ಮುಕ್ಯೋಪಾಧ್ಯಾಯರಾದ ಫಾದರ್ ಹ್ಯಾರಿ ವಿಕ್ಟರ, ಸುರೇಶ ಲೆಂಕನಟ್ಟಿ, ಮಕಬುಲ್ ಬೇಪಾರಿ, ಬಸವರಾಜ ಚಿಕ್ಕನಗೌಡರ, ಸಿದ್ದಿಕ್ ಭಾಗವಾನ, ಬಾಬು ಭಾಗವಾನ, ಸೇರಿದಂತೆ ಗ್ರಾ ಪಂ ಸದಸ್ಯರು, ರಾಜ್ಯೋತ್ಸವ ಕಮಿಟಿಯ ಸದಸ್ಯರು, ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು, ಸದಸ್ಯರು, ಎಲ್ಲ ಸರ್ಕಾರಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹಿರಿಯರು, ಶಾಲೆ ಕಾಲೇಜು, ಶಿಕ್ಷಕರು, ವಿದ್ಯಾರ್ಥಿಗಳು, ಯುವಕರು ಭಾಗವಹಿಸಿದ್ದರು.ಶಾಲಾ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನೀಯರು ಡಾಲಬಿ ಹಾಡಿಗೆ ಕುಣಿದು ಕುಪ್ಪಳಿಸಿದರು.
WhatsApp Group Join Now
Telegram Group Join Now
Share This Article