ನೇಸರಗಿಯಲ್ಲಿ ವಿಜೃಂಭಣೆಯ ರಾಜ್ಯೋತ್ಸವ!

Ravi Talawar
ನೇಸರಗಿಯಲ್ಲಿ ವಿಜೃಂಭಣೆಯ ರಾಜ್ಯೋತ್ಸವ!
WhatsApp Group Join Now
Telegram Group Join Now

ನೇಸರಗಿ: ಗ್ರಾಮದಲ್ಲಿ 68 ನೇ ಕರ್ನಾಟಕ ರಾಜ್ಯೋತ್ಸವವನ್ನು ಅತೀ ಸಡಗರ, ಸಂಭ್ರಮದಿಂದ ವಿಜೃಂಭಣೆಯಿಂದ ಆಚರಿಸಲಾಯಿತು.

ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಕನ್ನಡಾಂಬೆ ತಾಯಿ ಭುವನೇಶ್ವರಿಗೆ ಪೂಜೆ ನೆರವೇರಿಸುವುದರ ಮುಖಾoತರ ರಾಜ್ಯೋತ್ಸವ ಮೆರವಣಿಗೆಗೆ ಚಾಲನೆ ನೀಡಲಾಯಿತು. ಗ್ರಾಮದ ಪೇಟೆ ಗಲ್ಲಿ, ಕರ್ನಾಟಕ ಚೌಕ, ಬಸ್ ಸ್ಟಾಂಡ್ ರಸ್ತೆ ಮುಖಾಂತರ ಬಸ್ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ವಿದ್ಯಾ ಮಂದಿರ ಪ್ರೌಢ ಶಾಲೆಯಲ್ಲಿ ಸಮಾರೋಪಗೊಂಡಿತು.

ಈ ಒಂದು ಭವ್ಯ ರಾಜ್ಯೋತ್ಸವ ಸಮಾರಂಭದಲ್ಲಿ ಶಾಲಾ ವಿದ್ಯಾರ್ಥಿಗಳ ಸ್ವಾತoತ್ರ್ಯ ಹೋರಾಟಗಾರ ಉಡುಪು, ವಿವಿಧ ದೇಶದ ಮಹಾನ್ ಪುರುಷರ ವೇಷ ಧರಿಸಿ ಜನರ ಆಕರ್ಷಣೆಗೆ ಪಾತ್ರವಾಯಿತು. ಲೇಜಿಮ್, ಡೊಳ್ಳು ಕುಣಿತ, ದಾಲಬಿ, ಕುದರೆ ಸವಾರಿ,ಎಲ್ಲ ಶಾಲಾ, ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡು ಕರ್ನಾಟಕ ರಾಜ್ಯೋತ್ಸವದ ಜೈಕಾರ ಕೂಗಿ ಸಂಭ್ರಮಿಸಿದರು.

ಈ ಉತ್ಸವದಲ್ಲಿ ಯುವ ಮುಖಂಡ ಸಚಿನ ಪಾಟೀಲ, ಆಡಿವಪ್ಪ ಮಳನ್ನವರ, ಬಾಳಪ್ಪ ಮಾಳಗಿ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ ಸೋಮಣ್ಣವರ, ಸೋಮನಗೌಡ ಪಾಟೀಲ, ಸಲೀಮ್ ಶಾ ನದಾಫ, ಗುರು ತುಬಚಿ,ಎಮ್ ಟಿ.ಪಾಟೀಲ,ಡಿ ಎಸ್ ಎಸ್ ರಾಜ್ಯಾಧ್ಯಕ್ಷ ರಮೇಶ ರಾಯಪ್ಪಗೋಳ,ಮಾಜಿ ಎ ಪಿ ಎಮ್ ಸಿ ಅಧ್ಯಕ್ಷ ಬರಮಣ್ಣ ಸತ್ತೇನ್ನವರ,ಎಫ್ ಟಿ. ಕೊಳದೂರ,ನಿಂಗಪ್ಪ ತಳವಾರ,ದೇಮಣ್ಣ ಗುಜನಟ್ಟಿ,ತೇಜಪ್ಪಗೌಡ ಪಾಟೀಲ,ಮಲ್ಲಿಕಾರ್ಜುನ ಕಲ್ಲೋಳಿ,ವಿಷ್ಣು ಮೂಲಿಮನಿ, ಮಲ್ಲಿಕಾರ್ಜುನ ಸೋಮಣ್ಣವರ,ಸುರೇಶ ಅಗಸಿಮನಿ, ಮಹಾಂತೇಶ ರಾಯಪ್ಪಗೋಳ, ಸುಜಾತಾ ತುಬಾಕಿ,ಯಮನಪ್ಪ ಪೂಜೇರಿ, ಪ್ರಕಾಶ ತೋಟಗಿ, ಸಿದಿಕ್ ಭಾಗವಾನ ಸೇರಿದಂತೆ ಗ್ರಾಮದ ಹಿರಿಯರು, ಶಾಲಾ, ಕಾಲೇಜು ಪ್ರಾಂಶುಪಾಲರು, ಶಿಕ್ಷಕರು, ಪಂಚಾಯತ್ ಸದಸ್ಯರು, ಕೃಷಿ ಇಲಾಖೆ, ಕಂದಾಯ, ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ,ಕನ್ನಡ ಪರ ಸಂಘಟನೆ ಸದಸ್ಯರು,ವಿದ್ಯಾರ್ಥಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article