ಘಟಪ್ರಭಾ. ಇಲ್ಲಿಗೆ ಸಮೀಪದ ಬಡಿಗವಾಡ ಗ್ರಾಮದಲ್ಲಿ ತಾಯಿ ಭುವನೇಶ್ವರಿಯ ಭವ್ಯ ಮೆರವಣಿಗೆ ಮುಖಾಂತರ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಕನ್ನಡ ರಕ್ಷಣಾ ವೇದಿಕೆ ಸಂಘಟನೆ ವತಿಯಿಂದ 70 ನೇಯ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. ಕರವೇ ರಾಜ್ಯಾಧ್ಯಕ್ಷರಾದ ಡಾ.ಕೆಂಪಣ್ಣ ಚೌಕಶಿ ಮಾತನಾಡಿ ನಾಡು ನುಡಿ ಜಲ ಭಾಷೆಗೆ ಹೋರಾಡಿದ ಮಹನೀಯರ ಬಗ್ಗೆ ನಾವು ಸ್ಮರಿಸಬೇಕು ಹೇಳಿದರು. ಕನ್ನಡ ಭಾಷೆಗೆ 2400 ವರ್ಷಗಳ ಇತಿಹಾಸವಿದೆ ಅದಕ್ಕೆ ಕನ್ನಡ ಭಾಷೆಯನ್ನು ಪ್ರೀತಿಸಬೇಕು,ತಮ್ಮ ಮಕ್ಕಳಿಗೆ ಕನ್ನಡದಲ್ಲಿ ಅಭ್ಯಾಸ ಮಾಡಿಸಬೇಕು, ಹಾಗೂ ಗ್ರಾಮೀಣ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವುದು, ಹಾಗೂ ಸರ್ಕಾರಿ ನೌಕರಿ ಹೊಸದಾಗಿ ಸೇರಿದವರು ಹಾಗೂ ನಿವೃತ್ತಿ ಹೊಂದಿದವರನ್ನು ಸತ್ಕರಿಸಿ ಸನ್ಮಾನಿಸುವುದು, ಇಂಥ ಒಳ್ಳೆಯ ಕಾರ್ಯಗಳನ್ನು ಮಾಡಬೇಕು ಎಂದು ಸಂಘಟನೆಯ ಎಲ್ಲಾ ಪದಾಧಿಕಾರಿಗಳಿಗೆ ಕಾರ್ಯಕರ್ತರಿಗೆ ಸಲಹೆ ಕೊಟ್ಟರು. ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಉಪಾಧ್ಯಕ್ಷರಾದ ಮಾರುತಿ ಚೌಕಾಶಿ ಮೂಡಲಗಿ ತಾಲೂಕ ಗೌರವಾಧ್ಯಕ್ಷರಾದ ಮಲ್ಲಿಕಾರ್ಜುನ್ ಅರಭಾವಿ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಶಶಿಧರ್ ಚೌಕಶಿ, ಕರವೇ ಮೂಡಲಗಿ ತಾಲೂಕ ಉಪಾಧ್ಯಕ್ಷರಾದ ಸುರೇಶ್ ಚಿಗಡೊಳ್ಳಿ ,ನಿತಿನ ದೇಶಪಾಂಡೆ, ಮಲ್ಲಿಕಾರ್ಜುನ ಮಾದರ್, ಸಿದ್ರಾಮ ಚೌಕಶಿ ,ಗುರುಲಿಂಗ ಚೌಕಶಿ ರಾಜೇಶ್ ಚೌಕಶಿ, ಸಿದ್ದು ಚೌಕಶಿ. ಯಲ್ಲಪ್ಪ ಅಟ್ಟಿಮಿಟ್ಟಿ, ಕಾಶಪ್ಪ ನಿಂಗನ್ನವರ್, ರಾಘವೇಂದ್ರ ಮಾದರ್, ಶಾನೂರ್ ಮಾದರ್,ಶಂಕರ್ ಮೆಳವಂಕಿ, ಸಿದ್ದು ಸಂಗಾನಟ್ಟಿ, ಭೀಮಶಿ ಬೆಳಗಲಿ, ಬೀಮಶಿ ಚೌಕಶಿ ಹಿರಿಯರಾದ ಕಲ್ಲಪ್ಪ ಎಂ ಚೌಕಶಿ, ಯಲ್ಲಪ್ಪ ನಾಯಕ್, ದುಂಡಪ್ಪ ನಂದಗಾವಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಕಾಶ್ ನಾಯಕ್, ನಾಗರಾಜ್ ಚೌಕಶಿ, ಯಲ್ಲಾ ಲಿಂಗ ಚೌಕಶಿ,ಆನಂದ್ ವಗ್ಗರ,ವಿಠ್ಠಲ ಚುಡಪ್ಪಗೋಳ, ಸಿದ್ದು ಕುಡ್ಡಗೋಳ, ರಾಮಪ್ಪ ಮಲ್ಲಾಪುರ, ಭೀಮಪ್ಪ ಚಿಗಡೊಳ್ಳಿ, ರಾಮಪ್ಪ ಮಾಕಣ್ಣವರ್, ಆನಂದ್ ಭಟ್ಟಿ, ನಾಗರಾಜ್ ಚುಡಪ್ಪಗೋಳ ಶಾಲಾ ಶಿಕ್ಷಕ- ಶಿಕ್ಷಕೀಯರು ವಿದ್ಯಾರ್ಥಿಗಳು, ಸಂಘಟನೆ ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು,


