ಘಟಪ್ರಭಾ: ಕಾಂಗ್ರೇಸ್ ಪಕ್ಷದಲ್ಲಿ ಸತ್ಯ ಹೇಳಲಿಕ್ಕೆ ಅವಕಾಶವಿರುವುದಿಲ್ಲ ಪ್ರಜಾಪ್ರಭುತ್ವದಲ್ಲಿ ಸತ್ಯ ಹೇಳಲಿಕ್ಕೆ ಅವಕಾಶ ನೀಡಬೇಕು. ಸಹಕಾರ ಸಚಿವ ರಾಜಣ್ಣನವರನ್ನು ಯಾವುದೇ ಕಾರಣ ನೀಡದೆ ರಾಜನಾಮೆಗೂ ಅವಕಾಶ ಕೊಡದೇ ಸಂಪುಟದಿಂದ ವಜಾ ಮಾಡಿರುವುದು ಪರಿಶಿಷ್ಠ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ಈ ಹಿಂದೆ ನಾಗೇಂದ್ರ ಅವರನ್ನು ಪರಿಶಿಷ್ಠ ಸಮುದಾಯದ ಹಣ ಲೂಟಿ ಮಾಡಿದ್ದಾರೆಂದು ಸಂಪುಟದಿಂದ ಕೈ ಬಿಡಲಾಗಿತ್ತು. ಆದರೆ ಲೂಟಿ ಮಾಡಿದ ಹಣವನ್ನು ಕಾಂಗ್ರೇಸ್ ಪಕ್ಷ ಚುನಾವಣೆಗೆ ಉಪಯೋಗಿಸಿ ಹಿಂದೂಳಿದ ವರ್ಗದ ಸಚಿವರನ್ನು ಕೈ ಬಿಟ್ಟು ಎಸ್.ಟಿ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಈ ಹಿಂದೆ ರಾಜಣ್ಣ ಸತ್ಯವನ್ನೆ ಪ್ರತಿಪಾದನೆ ಮಾಡಿದ್ದಾರೆ ಕಾಂಗ್ರೇಸ್ ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಇರಬೇಕು, ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು, ನನ್ನನ್ನು ಕಾಂಗ್ರೇಸ್ ಪಕ್ಷದ ಅಧ್ಯಕ್ಷನ್ನಾಗಿ ಮಾಡುವುದಾದರೆ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುತ್ತೆನೆ. ಇದೆಲ್ಲಾ ಕಾಂಗ್ರೇಸ್ ಪಕ್ಷದ ನಿರ್ಣಯವೇ ಆಗಿದೆ ಮುಖ್ಯವಾಗಿ ತೆರೆಯ ಹಿಂದೆ ಯಾರು ನಿಂತು ಇದೆಲ್ಲವನ್ನು ರಾಜಣ್ಣನವರಿಂದ ಹೇಳಿಸಿದ್ದರೋ ಅವರೆ ಇಂದು ರಾಜಣ್ಣನವರ ಬೆನ್ನಿಗೆ ನಿಲ್ಲದಿರುವುದು ಆ ಸಮುದಾಯದ ದುರ್ದೈವ ಎಂದು ಪರೋಕ್ಷವಾಗಿ ಸತೀಶ ಜಾರಕಿಹೊಳಿಯವರಿಗೆ ಅವರು ಟಾಂಗ್ ನೀಡಿದರು.
ಅವರು ಮಂUಳವಾರದಂದು ಘಟಪ್ರಭಾದ ರಾಘವೇಂದ್ರ ಮಠದಲ್ಲಿ ಸಂಸದರ ಸ್ಥಳೀಯ ನಗರಾಭಿವೃದ್ಧಿ ಯೋಜನೆ ಅಡಿಯಲ್ಲಿ ನಿರ್ಮಾಣಗೊಂಡ ಸಾಂಸ್ಕೃತಿಕ ಭವನದ ಕಟ್ಟಡ ಉದ್ಘಾಟಿಸಿ ಮಾತನಾಡಿ ದೇಶವನ್ನು ಒಂದುಗೂಡಿಸುವ ವ್ಯವಸ್ಥೆ ಇರುವುದು ದೇವಸ್ಥಾಗಳಲ್ಲಿ ಮಾತ್ರ ಏಕೆಂದರೆ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಜನರು ತೀರ್ಥಯಾತ್ರೆಗಾಗಿ ತೆರಳುತ್ತಾರೆ. ಇದರಿಂದ ದೇಶದ ಸಾಂಸ್ಕೃತಿಕ, ಧಾರ್ಮಿಕ ಶಕ್ತಿ ಹೆಚ್ಚಾಗುತ್ತದೆ ನಾವೆಲ್ಲರು ಒಂದೇ ಎನ್ನುವ ಭಾವನೆ ಬೆಳೆಯುತ್ತದೆ ಇದಕ್ಕಾಗಿ ಧಾರ್ಮಿಕ ಕೇಂದ್ರಗಳು ಹೆಚ್ಚಾಗಿ ಬೆಳೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀಕಾಂತ ಕುಲಕರ್ಣಿ, ಪರಶುರಾಮ ಕಲಕುಟಗಿ, ಅರುಣ ದೇಶಪಾಂಡೆ, ಮಹಾದೇವ ದೇಶಪಾಂಡೆ, ಮುರಳಿದರ ಜತ್ತಕರ್,ಶ್ರೀಕಾಂತ ಮಹಾಜನ, ಸಂತೋಷ ದೇಶಪಾಂಡೆ,ಸೋಮಶೇಖರ ಹುದ್ದಾರ, ರಘವೀರ ಪಾಟೀಲ, ರಾಘವೇಂದ್ರ ದೇಶಪಾಂಡೆ, ಮಹಾಂತೇಶ ಉದಗಟ್ಟಿಮಠ, ರಾಜು ಕತ್ತಿ, ಆನಂದ ಪೂಜಾರಿ, ಭೀಮಶಿ ಬಂಗಾರಿ, ವಿಠ್ಠಲ ಹುಕ್ಕೇರಿ, ಡಾ|| ವಿಲಾಸ ನಾಯಿಕವಾಡಿ, ಇದ್ದರು.