ಘಟಪ್ರಭಾ: ಇಲ್ಲಿನ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಾಜ್ಯಸಭಾ ಸದಸ್ಯರ ಅನುದಾನದಡಿಯಲ್ಲಿ ನಿರ್ಮಾಣವಾದ ಸಮುದಾಯ ಭವನವನ್ನು ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರು ಮಂಗಳವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರನ್ನು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಕಮೀಟಿ ವತಿಯಿಂದ ಸನ್ಮಾನ ಮಾಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಮೀಟಿ ಅಧ್ಯಕ್ಷ ಶ್ರೀಕಾಂತ ಬಿ ಕುಲಕರ್ಣಿ, ಶ್ರೀಕಾಂತ ವಿ ಮಹಾಜನ, ಅರುಣ ಮಲ್ಲಾರರಾವ ದೇಶಪಾಂಡೆ, ಅರುಣ ವಾಮನರಾವ ದೇಶಪಾಂಡೆ, ಮಹಾದೇವ ದೇಶಪಾಂಡೆ, ರಾಜೇಂದ್ರ ದೇಶಪಾಂಡೆ, ಸಂತೋಷ ದೇಶಪಾಂಡೆ, ಪ್ರಲ್ಹಾದ ಕುಲಕರ್ಣಿ, ರಾಘವೇಂದ್ರ ದೇಶಪಾಂಡೆ, ನಿತೀನ್ ದೇಶಪಾಂಡೆ, ಮುರಳೀಧರ ಜತ್ಕರ, ರಘುವೀರ್ ಪಾಟೀಲ, ಗುರು ಕುಲಕರ್ಣಿ, ಅರುಣ್ ಪಾಟೀಲ, ಡಾ ವಿಲಾಸ ನಾಯಿಕವಾಡಿ,ಪರಶುರಾಮ ಕಲಕುಟಗಿ, ಕೆಪಿ ಕಳ್ಳೀಮಠ,ಮಾನಿಂಗ ಹಳ್ಳೂರ, ರಾಜು ಪಂಚಾಳ,ಅಶೋಕ ಕಟ್ಟೀಮನಿ, ಬಸವರಾಜ ಗಿಡಗೇರಿ, ಮಹಾಂತೇಶ ಉದಗಟ್ಚಿಮಠ ಸೇರಿದಂತೆ ಅನೇಕರು ಭಾಗವಹಿಸಿದ್ದರು.