ನಗು ತರಿಸುತ್ತಾ ನೈತಿಕ ಸಂದೇಶ ನೀಡುವ ಶೈಲಿ ರಾಜು ತಾಳಿಕೋಟಿ ಅವರದು

Pratibha Boi
ನಗು ತರಿಸುತ್ತಾ ನೈತಿಕ ಸಂದೇಶ ನೀಡುವ ಶೈಲಿ ರಾಜು ತಾಳಿಕೋಟಿ ಅವರದು
WhatsApp Group Join Now
Telegram Group Join Now
ಅಥಣಿ: ತಾಲುಕಿನ ತೆಲಸಂಗ ಕಲಿಯುಗದ ಕುಡುಕ ನಾಟಕದ ಮೂಲಕ ಸಮಾಜದ ದುರ್ಗುಣಗಳ ಮೇಲೆ ತೀಕ್ಷ÷್ಣ ವ್ಯಂಗ್ಯವಾಡಿ, ಜನಮನದಲ್ಲಿ ಚಿಂತನೆ ಮೂಡಿಸಿ, ಎಲ್ಲರನ್ನು ನಕ್ಕೂ ನಗಿಸಿ, ಅಚ್ಚಳಿಯದ ಹೆಜ್ಜೆಗಳನ್ನು ಮೂಡಿಸಿ, ಇಂದು ತೆರೆಗೆ ಸರಿದ ರಂಗಭೂಮಿ ಮತ್ತು ಚಿತ್ರ ರಂಗದ ಖ್ಯಾತ ಹಾಸ್ಯನಟ ರಾಜು ತಾಳಿಕೋಟಿ ಅವರ ಬದುಕು ಹೋರಾಟದ ಕಥೆಯಾಗಿತ್ತು.
    ನಗು ತರಿಸುತ್ತಾ ನೈತಿಕ ಸಂದೇಶ ನೀಡುವ ಶೈಲಿ ಅವರ ವಿಶಿಷ್ಟ ಗುರುತು. ಜಾತಿ, ಧರ್ಮ, ರಾಜಕೀಯದ ಹೆಸರಿನಲ್ಲಿ ಕಿತ್ತಾಡುವವರಿಗೆ ತಮ್ಮ ಹಾಸ್ಯ ಪಾತ್ರದ ಮೂಲಕ ಬಲವಾದ ಚಾಟಿ ಏಟಿನಿಂದ ಎಚ್ಚರಿಸುತ್ತಿದ್ದರು.
   ಸರಳ ಜೀವನ ನಡೆಸಿದ ರಾಜು ತಾಳಿಕೋಟಿ ತಮ್ಮ ಬದುಕಿನ ಹೋರಾಟವನ್ನು ಕಲೆಗೇ ಸಮರ್ಪಿಸಿದರು. ತಂದೆ-ತಾಯಿ ಕಳೆದುಕೊಂಡು ಹೊಟ್ಟೆಪಾಡಿಗಾಗಿ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಕಾಲದಿಂದಲೇ ರಂಗಭೂಮಿಯ ಮೇಲೆ ಪ್ರೀತಿ ಬೆಳೆದಿತ್ತು. ಅವರ ಶ್ರಮ, ನಿಸ್ವಾರ್ಥ ಭಾವನೆ ಮತ್ತು ಕಲೆಯ ಮೇಲಿನ ನಿಷ್ಠೆ ಅವರಿಗೆ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದ ಸ್ಥಾನ ನೀಡಿತು. ವೃತ್ತಿ ರಂಗಭೂಮಿಯಲ್ಲಿ ೪೦ ಸಾವಿರಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿದ ನಂತರ, ರಾಜು ತಾಳಿಕೋಟಿ ಅವರು ಕನ್ನಡ ಚಲನಚಿತ್ರ ರಂಗಕ್ಕೂ ಕಾಲಿಟ್ಟರು. ಕಲೆಯ ಮೇಲಿನ ಅವರ ಬದ್ಧತೆ ಮತ್ತು ರಂಗಭೂಮಿಗೆ ಸಲ್ಲಿಸಿದ ಸೇವೆಯನ್ನು ಗುರುತಿಸಿ, ರಾಜ್ಯ ಸರ್ಕಾರ ಅವರನ್ನು ಧಾರವಾಡ ರಂಗಾಯಣದ ನಿರ್ದೇಶಕರಾಗಿ ಸಹ ನೇಮಕ ಮಾಡಿತ್ತು. ಹೀಗೆ, ಜೀವನದ ಕಷ್ಟಗಳನ್ನು ಮೆಟ್ಟಿ ನಿಂತು, ಸಪ್ಲೆöÊಯರ್ ಕೆಲಸದಿಂದ ಡಾಕ್ಟರೇಟ್ ಗೌರವದವರೆಗೆ ಬೆಳೆದ ರಾಜು ತಾಳಿಕೋಟಿಯವರ ಕಲಾ ಪಯಣ, ನಿಜಕ್ಕೂ ಎಲ್ಲರಿಗೂ ಪ್ರೇರಣೆಯಾಗಿದೆ. ಅವರ ಹಠಾತ್ ಅಗಲಿಕೆ ಕನ್ನಡ ಕಲಾ ಜಗತ್ತಿಗೆ ಒಂದು ದೊಡ್ಡ ಆಘಾತ. ಅವರ ನಿಧನ ರಂಗಭೂಮಿ ಲೋಕಕ್ಕೆ ದೊಡ್ಡ ನಷ್ಟ. ಅವರ ನಗು, ನಟನೆ ಮತ್ತು ಸಂದೇಶಗಳು ಎಂದಿಗೂ ಅಜರಾಮರ.
     -ಅಮೋಘಸಿದ್ಧ ಖೊಬ್ರಿ. ಹವ್ಯಾಸಿ ರಂಗಭೂಮಿ ಕಲಾವಿದ ಹಾಗೂ ರಾಜು ತಾಳಿಕೋಟಿಯವರ ವಡನಾಡಿ.
WhatsApp Group Join Now
Telegram Group Join Now
Share This Article