ರನ್ನ ಬೆಳಗಲಿ ಮತಗಟ್ಟೆಗಳಿಗೆ ಗುಲಾಬಿ ಬಣ್ಣದ ಸಿಂಗಾರ: ರಾಜು ಮುಗಳಖೊಡ

Ravi Talawar
ರನ್ನ ಬೆಳಗಲಿ ಮತಗಟ್ಟೆಗಳಿಗೆ ಗುಲಾಬಿ ಬಣ್ಣದ ಸಿಂಗಾರ: ರಾಜು ಮುಗಳಖೊಡ
WhatsApp Group Join Now
Telegram Group Join Now

ರನ್ನ ಬೆಳಗಲಿ: ಏ.22, ಪಟ್ಟಣ ಪಂಚಾಯತ ರನ್ನ ಬೆಳಗಲಿ ಆಶ್ರಯದಲ್ಲಿ ಮತದಾರರ ಸೆಳೆಯಲು ಹಾಗೂ ಮತ ದಾನದ ಪ್ರಾಮುಖ್ಯತೆಯನ್ನು ತಿಳಿಸುವ ಉದ್ದೇಶದಿಂದ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮ ಜರಗಿತು.

ಈ ಕಾರ್ಯಕ್ರಮವು ಉದ್ದೇಶಿಸಿ ಪಟ್ಟಣ ಪಂಚಾಯತ್ ಸಿಬ್ಬಂದಿಯವರಾದ ರಾಜು ಮುಗಳಖೋಡ ಅವರು ರಾಷ್ಟ್ರಾದ್ಯಂತ ನಡೆಯುತ್ತಿರುವ ಮತದಾನ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಕನ್ನಡ ಹೆಣ್ಣು ಮಕ್ಕಳ ಶಾಲೆ ಆವರಣದಲ್ಲಿರುವ ನಾಲ್ಕನೆಯ ಮತಗಟ್ಟೆಯಲ್ಲಿ ೧೪೫೬ ಮತದಾರರನ್ನು ಹೊಂದಿದ್ದು.

ಈ ಮತಗಟ್ಟೆಯಲ್ಲಿ ಶೇಕಡ ೭೫ ರಷ್ಟು ಮಹಿಳಾ ಮತದಾರ ಇರುವುದರಿಂದ ಈ ಮತಗಟ್ಟೆಯನ್ನು ಪಿಂಕ್ ಮತಗಟ್ಟೆ ಎಂದು ಘೋಷಿಸುವುದರ ಜೊತೆಗೆ ಗುಲಾಬಿ ಬಣ್ಣದಲ್ಲಿ ಮತಗಟ್ಟೆಯನ್ನು ಸಿಂಗರಿದ್ದಾರೆ. ಅದರಲ್ಲಿ ಮತದಾನ ಜಾಗೃತಿ ಅಭಿಯಾನದ ಘೋಷ ವಾಕ್ಯಗಳೊಂದಿಗೆ, ಮಹಿಳಾ ವರ್ಲಿ ಚಿತ್ರಗಳಿಂದ ಅಲಂಕಾರಗೊಂಡಿದೆ ಹಾಗೂ ಚುನಾವಣೆಯ ದಿನದದ್ದು ಸಂಪೂರ್ಣವಾಗಿ ಮಹಿಳಾ ಅಧಿಕಾರಿಗಳನ್ನು ಹೊಂದಿರುವ ಮತಗಟ್ಟೆ ಆಗಿರುತ್ತದೆ ಎಂದು ಹೇಳುವುದರ ಜೊತೆಗೆ,ಪಿಂಕ್ ಮತಗಟ್ಟೆಯ ಮಹತ್ವವನ್ನು ತಿಳಿಸಿದರು.

ಈ ಒಂದು ಕಾರ್ಯದಲ್ಲಿ ಚಿತ್ರಕಲಾ ಶಿಕ್ಷಕರಾದ ಬಿ.ಪಿ ಚೋಪಡೆ, ಆರ್. ಜಿ .ಕೊಣ್ಣೂರ, ಎಸ್.ಎಂ.ವೀರಕ್ತಮಠ, ಮತ್ತು ಎಸ್. ಎಂ. ನೀಲನ್ನವರ ಈ ಒಂದು ಮತಗಟ್ಟೆ ಸಿಂಗರಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುವುದರ ಜೊತೆಗೆ ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article