ಕಾಗವಾಡ:ಪಂಚಮಸಾಲಿ 2ಎ ಮೀಸಲಾತಿಗಾಗಿ ಯಾವುದೇ ಹುದ್ದೆ ತ್ಯಜಿಸಲು ಸಿದ್ದ ಎಂದು ಕಾಗವಾಡ ಶಾಸಕ ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜು ಕಾಗೆ ಹೇಳಿದರು.
ಅವರು ಉಗಾರ ಖುರ್ದ ತಮ್ಮ ಕಚೇರಿಯಲ್ಲಿ ಪಂಚಮಸಾಲಿ 2 ಎ ಮೀಸಲಾತಿ ನಡೆದ ಹೋರಾಟ ಪೂರ್ವ ಭಾವಿ ಸಭೆಯಲ್ಲಿ ಕೂಡಲ ಸಂಘಮ ಪೀಠದ ಜಯ ಬಸವ ಮೃತ್ಯುಂಜಯ ಸ್ವಾಮೀಜಿ ಅವರಿಂದ ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು ಪಕ್ಷಾತಿತವಾಗಿ 2 ಎ ಮೀಸಲಾತಿಗಾಗಿ ರಾಜೀನಾಮೆ ನೀಡಿದರೆ ಯಾವುದೇ ಸರ್ಕಾರ ಇದ್ದರು ಮಂಡಿ ಊರಲೇ ಬೇಕು ಹೀಗಾಗಿ ಮೀಸಲಾತಿಗಾಗಿ ಯಾವುದೇ ನನ್ನ ವೈಯಕ್ತಿಕ ಯಾವುದೇ ತ್ಯಾಗಕ್ಕು ಸಿದ್ದ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಜಯ ಬಸವ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ ನಾವು ಅನ್ಯ ಸಮಾಜದ ವಿರೋಧಗಳು ಅಲ್ಲ ಬದಲಾಗಿ ಶೈಕ್ಷಣಿಕವಾಗಿ ಹಿಂದುಳಿದ ನಮ್ಮ ಸಮಾಜಕ್ಕು ಮೀಸಲಾತಿ ನೀಡಬೇಕು ಎಂದು ಹೇಳಿದರು.
ಎಂಬು ನಮ್ಮ ಬೇಡಿಕೆಯಾಗಿದೆ ಇದನ್ನು ಅನ್ಯ ಸಮಾಜಗಳು ತಪ್ಪಾಗಿ ಅರ್ಥೈಸಿಕೊಳ್ಳಬಾರದು, ಮೀಸಲಾತಿಗಾಗಿ ನಡೆದ ಹೋರಾಟ ಯಶಸ್ವಿ ಕಾಣುವ ಹಂತದಲ್ಲಿ ಇದ್ದು ಮುಂಬರುವ ಮಳೆಗಾಲದ ಅಧಿವೇಶನದಲ್ಲಿ ವಿಧಾನ ಸೌಧದಲ್ಲಿ ಈ ಕುರಿತು ಧ್ವನಿ ಎತ್ತಲು ಸಮುದಾಯದ ಶಾಸಕರ ಮನೆ ಮನೆಗೆ ತೆರಳಿ ಮನವಿ ಪತ್ರ ನೀಡುವ ಅಭಿಯಾನ ಹಮ್ಮಿಕೊಂಡಿದ್ದು ಅದರಂತೆ ಇಂದು ಶಾಸಕ ರಾಜು ಕಾಗೆ ಅವರಿಗೆ ಮನವಿ ಪತ್ರ ಸಲ್ಲಿಸಿದ್ದು ನಮ್ಮ ಸಮುದಾಯದ ಬೇಡಿಕೆಗಾಗಿ ಅವರು ಗಟ್ಟಿ ಧ್ವನಿಯಲ್ಲಿ ಸದನದಲ್ಲಿ ಹೋರಾಟ ಮಾಡುವ ಭರವಸೆ ನಮಗಿದೆ ಎಂದರು.
ಈ ವೇಳೆ ಆರ್ ಕೆ ಪಾಟೀಲ,ನಿಂಗಪ್ಪ ಪೀರೋಜೆ,ಮೃಣಾಲ್ ಹೇಬ್ಬಾಳಕರ,ರಮೇಶಗೌಡ ಪಾಟೀಲ,ಉಮೇಶ ಪಾಟೀಲ, ಬಸನಗೌಡ ಪಾಟೀಲ, ಜೋತಿಕುಮಾತ ಪಾಟೀಲ, ರಾಜು ಕಡೋಲೆ,ಡಾ.ಅರವಿಂದ ಕಾರ್ಚಿ,ಅನೀಲ ಸತ್ತಿ.ವಿಶ್ವನಾಥ ನಾಮದಾರ,ಮುರಗೇಶ ಕುಂಭಾರ,ಸತೀಶ ಬಿರಾದರ,ಸೇರಿದಂತೆ ಅನೇಕರು ಇದ್ದರು.