ಬಳ್ಳಾರಿ,ಫೆ.21:ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 34 ರ ವ್ಯಾಪ್ತಿಯಲ್ಲಿ ಬರುವ ರಾಜೀವ್ ಗಾಂಧಿ ನಗರ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಬೇಕೆಂದು ಒತ್ತಾಯಿಸಿ, ಕಂಟ್ರೋಮೆಂಟ್ ಪ್ರದೇಶದ ರಾಜೀವ್ ಗಾಂಧಿನಗರದಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಪಾದಯಾತ್ರೆ ಮೂಲಕ ಬಂದು ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಕೆಲ ಕಾಲ ಪ್ರತಿಭಟನೆ ಮಾಡಿದ ನಿವಾಸಿಗಳು, ತಮಗೆ ಹಕ್ಕು ಪತ್ರ ವಿತರಣೆ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್ ಅವರಿಗೆ ಸಲ್ಲಿಸಿದರು.
ಕನ್ನಡ ಚಲನಚಿತ್ರ ಕ್ಷೇತ್ರದ ಖ್ಯಾತ ಯುವ ನಟರು ಹಾಗೂ ಪ್ರಗತಿಪರ ಚಿಂತಕರೂ ಆದ ಚೇತನ್ ಅಹಿಂಸಾ ಮತ್ತು ಕನ್ನಡಪರ ಹೋರಾಟ ಸಂಘಟನೆಗಳು ಹಾಗೂ ದಲಿತ ಸಂಘಟನೆಗಳ ನೇತೃತ್ವದಲ್ಲಿ 34 ನೇ ವಾರ್ಡ್‌ನ ನಿವಾಸಿಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರರಾದ ಕಟ್ಟೆಸ್ವಾಮಿ ಮಾತನಾಡಿ ವಾರ್ಡ ಸಂಖ್ಯೆ 34ರ ರಾಜೀವ್ ಗಾಂಧಿ ನಗರದಲ್ಲಿ ಸುಮಾರು 60 ವರ್ಷಗಳಿಂದ ಕಂಟೋರ್ಮೆಂಟ್ ಪ್ರದೇಶದಲ್ಲಿ 250 ನಿವಾಸಿಗರು ವಾಸವಾಗಿದ್ದು ಸದರಿ ವಿಷಯವಾಗಿ ಹಲವು ವರ್ಷಗಳಿಂದ ವಿವಿಧ ಸಂಘಟನೆಗಳ ಮುಖಾಂತರ ಹಕ್ಕು ಪತ್ರಕ್ಕಾಗಿ ಸಾಕಷ್ಟು ಬಾರಿ ಮನವಿ ಮಾಡಿ ಹೋರಾಟ ಮಾಡಿದರು ಸಹ ಸಾರ್ವಜನಿಕ ಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ನಮ್ಮ ಸಹಾಯಕ್ಕೆ ಬರಲಿಲ್ಲ
ಜಿಲ್ಲಾಧಿಕಾರಿಗಳು ಕಾನೂನು ಸಲಹೆಗಾರರ ಸಲಹೆ ಪಡೆದು 2023ರ ಮಾರ್ಚ್ 15ರಂದು ಅಂದಿನ ಜಿಲ್ಲಾಧಿಕಾರಿಗಳು ಅಂತಿಮ ಅಧಿಸೂಚನೆ ಹೊರಡಿಸಿರುತ್ತಾರೆ. ಆದರೆ ಈಗಿರುವ ಜಿಲ್ಲಾಧಿಕಾರಿಗಳ ಪ್ರಕಾರ ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಉಪ ನಿರ್ದೇಶಕರು ಭೂ ದಾಖಲೆ ಇವರ ಆದೇಶದ ಮೇರೆಗೆ ಸಹಾಯಕ ನಿರ್ದೇಶಕರು ಭೂ ದಾಖಲೆ ಕಾರ್ಯಲಯದಿಂದ 2023 ರ ಆಗಸ್ಟ್ 1 ರಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯವರಿಗೆ ಖಾತೆ ಬದಲಾವಣೆ ಆಗಿದ್ದು ನಕ್ಷೆಯು ಆಗಿದ್ದು ಮತ್ತು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಇವರ ಹೆಸರಿಗೆ ಆಸ್ತಿ ಘೋಷಣಾ ಪತ್ರ (PR CARD) ಆಗಿರುತ್ತದೆ ಈ ಎಲ್ಲಾ ಸೂಕ್ತ ದಾಖಲೆಗಳ ಪ್ರಕಾರ ಸರಿಯಾಗಿದ್ದು, ಸಹಾಯಕ ಕಾರ್ಯ ಪಾಲಕ ಅಭಿಯಂತರರು 2024ರ ಏಪ್ರಿಲ್ 26ರಂದು ಕಾನೂನು ಸಲಹೆಗಾರರೊಂದಿಗೆ ಫೋನಿನ ಮುಖಾಂತರ ಚರ್ಚಿಸಲಾಗಿ ನಿಮಗೆ ಹಕ್ಕು ಪತ್ರ ನೀಡಲು ಅವಕಾಶ ಇರುವುದಿಲ್ಲವೆಂದು ತಿಳಿಸಿರುತ್ತಾರೆ. ಆದ್ದರಿಂದ ಸಹಾಯಕ ಕಾರ್ಯ ಪಾಲಕ ಅಭಿಯಂತರರು ಕೊಳಗೇರಿ ಅಭಿವೃದ್ಧಿ ಮಂಡಳಿ ರವರು TS 220 ರ ಜಮೀನಿಗೆ ಇಲ್ಲದೆ ಇರುವ ಮಾಲಿಕರನ್ನು ಸೃಷ್ಟಿಸಲು ಹೊರಟಂತಿದೆ. ಏಕೆಂದರೆ 2023 ರಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಸಂಪೂರ್ಣ 3.30 ಎಕರೆ ಪ್ರದೇಶವು ಹಸ್ತಾಂತರವಾಗಿದ್ದು ಇದನ್ನು ಮೇಲಾಗಿ ಕಾರಿಗಳ ಗಮನಕ್ಕೆ ತರದೆ ನಮಗೆ ಹಕ್ಕು ಪತ್ರ ನೀಡದಂತೆ ವಿಳಂಬ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವಿಷಯದ ಬಗ್ಗೆ ಕೂಲಂಕುಷವಾಗಿ ದಾಖಲೆಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಮಂಡಳಿಯವರಿಗೆ ಸೂಕ್ತ ನಿರ್ದೇಶನವನ್ನು ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು ಈ ಸಂದರ್ಭದಲ್ಲಿ ಕನ್ನಡಪರ ಮತ್ತು ದಿನದಲಿತರ ಪರ ಹೋರಾಟಗಾರರಾದ ನಟ ಚೇತನ್ ಪನ್ನಾರಾಜ್, , ಪಿ.ಶೇಖರ್, ಶ್ರೀನಿವಾಸ್ ಬಂಡಾರಿ, ನಾರಾಯಣಪ್ಪ , ರತ್ನಯ್ಯ, ಜೆ.ವಿ.ಮಂಜುನಾಥ್, ಉಪ್ಪಾರ್ ಹನುಮೇಶ್, ಮಲ್ಲಿಕಾರ್ಜುನ, ಮಾನಯ್ಯ,ಮುರಳಿ, ಷಣ್ಮುಕಪ್ಪ ಸೇರಿದಂತೆ ವಾರ್ಡಿನ ಸಾರ್ವಜನಿಕರು ಉಪಸ್ಥಿತರಿದ್ದರು.